ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತಯಾಚನೆ ಬಳಿಕ ಬಿ.ಎಸ್.ಯಡಿಯೂರಪ್ಪ ದೆಹಲಿಗೆ!

|
Google Oneindia Kannada News

ಬೆಂಗಳೂರು, ಜುಲೈ 17 : ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಉಳಿಯುವುದೋ?, ಉರುಳುವುದೋ? ಎಂಬುದು ಗುರುವಾರ ತೀರ್ಮಾನವಾಗಲಿದೆ. ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಗುರುವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.

ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಪ್ರತಿಪಕ್ಷ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳುವುದು ಖಚಿತ ಎಂಬ ವಿಶ್ವಾಸದಲ್ಲಿದ್ದು, ಮುಂದಿನ ನಡೆ ಬಗ್ಗೆ ಚಿಂತನೆ ನಡೆಸಿದೆ.

ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲ್ಲ : ಯಡಿಯೂರಪ್ಪಕುಮಾರಸ್ವಾಮಿ ಬಹುಮತ ಸಾಬೀತು ಮಾಡಲ್ಲ : ಯಡಿಯೂರಪ್ಪ

ಯಡಿಯೂರಪ್ಪ ಗುರುವಾರ ಸಂಜೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದ್ದು, ಸದನದಲ್ಲಿ ಏನು ನಡೆಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಸಿಎಂ ಆಗಲು ಉರುಳು ಸೇವೆ ಸಲ್ಲಿಸಿದ ಕೊಪ್ಪದ ಯುವಕಯಡಿಯೂರಪ್ಪ ಸಿಎಂ ಆಗಲು ಉರುಳು ಸೇವೆ ಸಲ್ಲಿಸಿದ ಕೊಪ್ಪದ ಯುವಕ

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿದ್ದಾರೆ. ಗುರುವಾರ ಎಲ್ಲರೂ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಸುಪ್ರೀಂಕೋರ್ಟ್‌ ಬುಧವಾರ ನೀಡಿದ ಆದೇಶದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ನಿರಾಳರಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಕೊನೆ ಕ್ಷಣದ ಕಸರತ್ತು ನಡೆಸುತ್ತಿವೆ...

ಅತ್ತ ದೋಸ್ತಿ ಸರ್ಕಾರಕ್ಕೆ ಟೆನ್ಷನ್, ಇತ್ತ ಬಿಜೆಪಿಗರಿಗೆ ಕ್ರಿಕೆಟ್, ಯೋಗ, ಭಜನೆ!ಅತ್ತ ದೋಸ್ತಿ ಸರ್ಕಾರಕ್ಕೆ ಟೆನ್ಷನ್, ಇತ್ತ ಬಿಜೆಪಿಗರಿಗೆ ಕ್ರಿಕೆಟ್, ಯೋಗ, ಭಜನೆ!

ರೆಸಾರ್ಟ್‌ನಲ್ಲಿ ಸರಣಿ ಸಭೆಗಳು

ರೆಸಾರ್ಟ್‌ನಲ್ಲಿ ಸರಣಿ ಸಭೆಗಳು

ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜನಕುಂಟೆ ಬಳಿಯ ರಮಾಡ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಸಹ ಅಲ್ಲಿದ್ದು, ಶಾಸಕರ ಜೊತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ಪಕ್ಷದ ನಿಲುವು ಏನಿರಬೇಕು? ಎಂದು ಚರ್ಚೆ ನಡೆಸಿದ್ದಾರೆ.

ಸರ್ಕಾರ ರಚನೆ ವಿಶ್ವಾಸ

ಸರ್ಕಾರ ರಚನೆ ವಿಶ್ವಾಸ

ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ ಶಾಸಕರು ತಮ್ಮ ತೀರ್ಮಾನಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದು ಬಿಜೆಪಿಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲಾ ನಾಯಕರು ಇದ್ದಾರೆ. ಮುಂದಿನ ನಡೆ ಬಗ್ಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.

ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸುತ್ತಾರೆ

ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸುತ್ತಾರೆ

"ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರ ರಾಜೀನಾಮೆ ಸಲ್ಲಿಸುತ್ತಾರೆ. ಬಳಿಕ ಬಿಜೆಪಿ ಸರ್ಕಾರ ರಚನೆಯಾಗಲಿದೆ" ಎಂದು ಬಿ. ಎಸ್. ಯಡಿಯೂರಪ್ಪ ಹಲವು ಬಾರಿ ಹೇಳಿದ್ದಾರೆ. ಬುಧವಾರ ಸಹ ಇದೇ ಹೇಳಿಕೆಯನ್ನು ಅವರು ಮತ್ತೆ ಹೇಳಿದರು.

ಸರ್ಕಾರ ರಚನೆ ತಯಾರಿ

ಸರ್ಕಾರ ರಚನೆ ತಯಾರಿ

ಶಾಸಕರ ರಾಜೀನಾಮೆ ಬಳಿಕ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಒಂದು ವೇಳೆ ಗುರುವಾರ ಸರ್ಕಾರ ವಿಶ್ವಾಸಮತ ಸಾಬೀತು ಮಾಡುವಲ್ಲಿ ಸೋತರೆ ಬಿಜೆಪಿ ಸರ್ಕಾರ ರಚನೆ ಆಗುವುದು ಖಚಿತವಾಗಿದೆ. ಮುಂದಿನ ನಡೆ ಬಗ್ಗೆ ಚರ್ಚಿಸಲು ಯಡಿಯೂರಪ್ಪ ದೆಹಲಿಗೆ ನಾಳೆಯೇ ತೆರಳಿದ್ದಾರೆ.

English summary
Karnataka BJP president B.S.Yeddyurappa will visit New Delhi on July 18, 2019 after Karnataka government floor test. Yeddyurappa to meet high command leaders and discuss about next move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X