ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರದೊಂದಿಗೆ ಬಿಎಸ್‌ವೈ ಮಾತುಕತೆ

|
Google Oneindia Kannada News

ಬೆಂಗಳೂರು, ಮೇ 29: ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಾಸ ಪರಿಸ್ಥಿತಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವರ ಬಳಿ ಮಾತುಕತೆ ನಡೆಸಿದ್ದಾರೆ.

ಈ ವಿಷಯವನ್ನು ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಕರಾವಳಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಬಳಿ ಮಾತನಾಡಿದ್ದು, ವಿಪತ್ತು ನಿರ್ವಹಣೆಗೆ ಕೇಂದ್ರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

BS Yeddyurappa talked to central about flood situation of coastal district

ನರೇಂದ್ರ ಮೋದಿ ಅವರು ಅಧಿಕಾರಿಗಳ ಚರ್ಚಿಸಿದ್ದು, ಸೂಕ್ತ ನೆರವು, ಸಲಹೆಗಳನ್ನು ನೀಡುವಂತೆ ಸೂಚಿಸಿದ್ದಾರೆ ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ಇಂಗ್ಲೀಷ್‌ನಲ್ಲಿಯೂ ಟ್ವೀಟ್ ಮಾಡಿರುವ ಅವರು, ಮಳೆಯಿಂದ ತೊಂದರೆಗೊಳದಾವರ ಬಗ್ಗೆ ಮರುಕಪಟ್ಟಿದ್ದಾರೆ.

ಕರಾವಳಿ ಕರ್ನಾಟಕ ಜನರಿಗಾಗಿ ಟ್ವೀಟ್ ಮಾಡಿದ್ದಾರೆ ಮೋದಿಕರಾವಳಿ ಕರ್ನಾಟಕ ಜನರಿಗಾಗಿ ಟ್ವೀಟ್ ಮಾಡಿದ್ದಾರೆ ಮೋದಿ

ಕೇಂದ್ರವು ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದೆ ಎಂದು ಹೇಳಿರುವ ಬಿಎಸ್‌ವೈ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದೆಂದು ಮನವಿ ಮಾಡಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಪ್ರವಾಹ: ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿದ.ಕ. ಜಿಲ್ಲೆಯಲ್ಲಿ ಪ್ರವಾಹ: ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇದೇ ವಿಷಯಕ್ಕೆ ಟ್ವೀಟ್ ಮಾಡಿದ್ದು, ಸೂಕ್ತ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

English summary
BJP state president BS Yeddyurappa talked to central home minister Rajanath Singh about coastal area flood situation. He asked central for help and it respond positively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X