ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ಬರೆದ ಸಹೋದರರು!

By Gururaj
|
Google Oneindia Kannada News

ಬೆಂಗಳೂರು, ಜೂನ್ 14 : ಸಹೋದರರಿಬ್ಬರು ಒಟ್ಟಿಗೆ ವಿಧಾನಪರಿಷತ್ ಪ್ರವೇಶಿಸಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ವಿಧಾನಸಭೆಗೆ ಈಗಾಗಲೇ ಹಲವು ಸಹೋದರರು ಒಟ್ಟಿಗೆ ಪ್ರವೇಶ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಮೂಲದ ಮಾಜಿ ಶಾಸಕ ಎಸ್.ಆರ್. ಲಕ್ಷ್ಮಯ್ಯ ಅವರ ಪುತ್ರರಾದ ಎಸ್‌.ಎಲ್.ಧರ್ಮೇಗೌಡ ಮತ್ತು ಎಸ್‌.ಎಲ್.ಭೋಜೇಗೌಡ ಅವರು ಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿದ್ದಾರೆ.

ಈಶಾನ್ಯ ಪಧವೀಧದರ ಕ್ಷೇತ್ರ 30 ವರ್ಷಗಳ ಬಳಿಕ 'ಕೈ' ವಶಈಶಾನ್ಯ ಪಧವೀಧದರ ಕ್ಷೇತ್ರ 30 ವರ್ಷಗಳ ಬಳಿಕ 'ಕೈ' ವಶ

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಎಸ್‌.ಎಲ್.ಧರ್ಮೇಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಎಲ್.ಭೋಜೇಗೌಡ ಅವರು ಜಯಗಳಿಸಿದ್ದು, ಪರಿಷತ್ ಪ್ರವೇಶಿಸಿದ್ದಾರೆ.

ವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿ

Brothers creates history by electing to Legislative Council

ವಿಧಾನಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿರುವ ಇಬ್ಬರು ಸಹೋದರರು ಒಟ್ಟಿಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಒಂದೇ ಅವಧಿಯಲ್ಲಿ ಸಹೋದರರು ಒಟ್ಟಿಗೆ ಪರಿಷತ್ತಿಗೆ ಆಯ್ಕೆಯಾಗಿರುವುದು ಇದೇ ಮೊದಲು.

ಪರಿಷತ್ ಚುನಾವಣೆ: ಕಾಂಗ್ರೆಸ್ 1, ಜೆಡಿಎಸ್ 2, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವುಪರಿಷತ್ ಚುನಾವಣೆ: ಕಾಂಗ್ರೆಸ್ 1, ಜೆಡಿಎಸ್ 2, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು

ವಿಧಾನಸಭೆಗೆ ಈಗಾಗಲೇ ಸಹೋದರು ಒಟ್ಟಿಗೆ ಆಯ್ಕೆಯಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ. ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹೀಗೆ ಸಹೋದರರು ವಿಧಾನಸಭೆಗೆ ಒಟ್ಟಿಗೆ ಪ್ರವೇಶ ಪಡೆದಿದ್ದಾರೆ.

English summary
Chikkamagaluru based S.L.Dharme Gowda and S.L Bhojegowda wins Legislative Council elections. Brothers creates history in Karnataka by electing at a time to Legislative Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X