• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಲ್ಲವರಿಂದ 'ಜನಿವಾರ' ಕದ್ದವರೇ ಬ್ರಾಹ್ಮಣರು: ತುಳುನಟನ ಕೀಳು ಅಪಹಾಸ್ಯ

|

ವಿಡಂಬನೆ, ಹಾಸ್ಯಕ್ಕೂ ಒಂದು ಮಿತಿ, ರೀತಿನೀತಿ ಬೇಡವೇ? ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಲು ಇನ್ನೊಂದು ಜಾತಿಯ ಬಗ್ಗೆ ಕೀಳಾಗಿ ಮಾತನಾಡುವ ಇಂತಹ ಕಲಾವಿದರಿಗೆ ಕನಿಷ್ಠ ಸಾಮಾನ್ಯಜ್ಞಾನ ಎನ್ನುವುದು ಬೇಡವೇ? ಅಥವಾ ಇನ್ನಷ್ಟು ಜನಪ್ರಿಯತೆಗಳಿಸಲು ಜಾತಿನಿಂದನೆಯೇ ಸೂಕ್ತದಾರಿಯೆಂದು ತಪ್ಪುಹೆಜ್ಜೆ ಇಡುತ್ತಿದ್ದಾರೆಯೇ?

ನಾಮಕರಣದಿಂದ ಹಿಡಿದು ವೈಕುಂಠ ಸಮಾರಾಧನೆಯವರೆಗೆ ಎಲ್ಲಾ ಧಾರ್ಮಿಕ ಕೆಲಸಗಳಿಗೆ 'ಬ್ರಾಹ್ಮಣರೂ' ಬೇಕು ಎನ್ನುವುದನ್ನು ಅರಿಯದ ಇವರೆಲ್ಲಾ ಸಾರ್ವಜನಿಕ ಜೀವನದಲ್ಲಿ ಇದ್ದೇವೆ ಎನ್ನುವುದನ್ನು ತಿಳಿದುಕೊಳ್ಳುವುದು ಯಾವಾಗ? ಇಂತಹ ಕಾರ್ಯಕ್ರಮ ನಡೆಸುವ ಆಯೋಜಕರಾದರೂ ಎಚ್ಚರದಿಂದ ಇರಬೇಕಲ್ಲವೇ?

ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!

ತುಳು ಚಿತ್ರರಂಗದ ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿನ ಜನಪ್ರಿಯ ಹೆಸರು, ಪ್ರತಿಭಾನ್ವಿತ ನಟ ಅರವಿಂದ್ ಬೋಳಾರ್, ತುಳು ಯಕ್ಷಗಾನದ ಪ್ರಸಂಗವೊಂದರಲ್ಲಿ ಅರ್ಥದಾರಿಯಾಗಿ ಮಾತನಾಡುತ್ತಾ, ಬ್ರಾಹ್ಮಣ ಸಮುದಾಯದ ವಿರುದ್ದ ಅವಹೇಳನಕರವಾಗಿ ಮಾತನಾಡಿದ್ದಾರೆ. (ತುಳುನಟನ ಅಪಹಾಸ್ಯದ ಯುಟ್ಯೂಬ್ ಲಿಂಕಿಗೆ ಇಲ್ಲಿ ಒತ್ತಿ)

ಸರಪಾಡಿ ಅಶೋಕ ಶೆಟ್ಟಿ ನೇತೃತ್ವದ ಬಾಚಕೆರೆ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಬಂಟ್ವಾಳದ ಮೇಳ 'ಕೋಟಿ ಚೆನ್ನಯ್ಯ' ತುಳು ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಲ್ಲಿ ಹಾವಭಾವದಲ್ಲಿ ಖ್ಯಾತ ಕನ್ನಡ ಹಾಸ್ಯನಟ ದಿ. ನರಸಿಂಹರಾಜು ಅವರನ್ನು ಕೆಲವು ಮಟ್ಟಿಗೆ ಹೋಲುವ ಅರವಿಂದ್ ಬೋಳಾರ್, 'ಪೂಜಾರಿ' ಪಾತ್ರವನ್ನು ಮಾಡಿದ್ದರು.

ಅದರಲ್ಲಿ, ಅರವಿಂದ್ ಬೋಳಾರ್, ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಯುಟ್ಯೂಬ್ ನಲ್ಲಿ ಜನವರಿ 23, 2018ರಂದು ಅಪ್ಲೋಡ್ ಆಗಿದ್ದು, ಇದುವರೆಗೆ ಸುಮಾರು 40ಸಾವಿರಕ್ಕೂ ಅಧಿಕ ಜನ ಅದನ್ಜು ವೀಕ್ಷಿಸಿದ್ದಾರೆ.

ಬ್ರಾಹ್ಮಣರು ನಿತ್ಯ ಕರ್ಮ, ಸಂಧ್ಯಾವಂದನೆ ಮಾಡುವುದು ಪಾಪ ಕೃತ್ಯವೆ?

ಅಸಲಿಗೆ ಪೂಜಾರಿಗಳು (ಬಿಲ್ಲವ ಸಮುದಾಯ) ಜನಿವಾರ ಹಾಕುತ್ತಿದ್ದದ್ದು, ನಾವು ಸ್ನಾನ ಮಾಡಲು ಹೋದಾಗ, ಬ್ರಾಹ್ಮಣರು ಜನಿವಾರ ಕಸಿದು ದೇವಾಲಯಕ್ಕೆ ಹೋದರು. ಅವರು ಒಳಗಿದ್ದರು, ನಾವು ಬಿಲ್ಲವರು ಹೊರಗೆ ನಿಂತೆವು ಎಂದು ಅರವಿಂದ್ ಬೋಳಾರ್, ಬ್ರಾಹ್ಮಣರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಮುಂದೆ ಓದಿ..

ತುಳು ಹಾಸ್ಯನಟ ಅರವಿಂದ್ ಬೋಳಾರ್

ತುಳು ಹಾಸ್ಯನಟ ಅರವಿಂದ್ ಬೋಳಾರ್

ಸೂರಿ ಆನ್ಲೈನ್ ಈ ವಿಡಿಯೋವನ್ನು ವಾರದ ಹಿಂದೆ ಅಪ್ಲೋಡ್ ಮಾಡಿದ್ದು, ಈ ತುಳು ಯಕ್ಷಗಾನ ಎಲ್ಲಿ ಮತ್ತು ಯಾವಾಗ ನಡೆದದ್ದು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಈ ಕಾರ್ಯಕ್ರಮದಲ್ಲಿ ಹಾಸ್ಯ ಅರ್ಥದಾರಿಯಾಗಿ ಮಾತನಾಡುತ್ತಿದ್ದ ಅರವಿಂದ್ ಬೋಳಾರ್, ಸೂಳ್ಳೆ ಅನ್ನುವುದು ಬ್ರಹ್ಮ, ವಿಷ್ಣು ಯಾವ ದೇವರನ್ನೂ ಬಿಟ್ಟಿಲ್ಲ. ಸೊಳ್ಳೆಯ ಕಾಟ ತಟ್ಟದೇ ಇರುವುದು ಈಶ್ವರನಿಗೆ ಮಾತ್ರ, ಯಾಕೆಂದರೆ ಅವನ ಮೈಯಲ್ಲಿ ಭಷ್ಮವಿದೆಯಲ್ಲ - ಅರವಿಂದ್ ಬೋಳಾರ್

ಪೂಜಾರಿಯವರು ಎಂದರೆ ತಾತ್ಸಾರ ಬೇಡ, ನಾವು ಒಳ್ಳೆಯ ಮನಸ್ಸಿನವರು

ಪೂಜಾರಿಯವರು ಎಂದರೆ ತಾತ್ಸಾರ ಬೇಡ, ನಾವು ಒಳ್ಳೆಯ ಮನಸ್ಸಿನವರು

ನಾವು ಸುವರ್ಣರು, ಕೆಲವರು ಪೂಜಾರಿ ಎಂದೂ ಕರೆಯುತ್ತಾರೆ, ನೋಡೋಣ ಒಮ್ಮೆ ನಮ್ಮ ಮೈಮುಟ್ಟಿ. ಪೂಜಾರಿಯವರು ಎಂದರೆ ತಾತ್ಸಾರ ಬೇಡ, ನಾವು ಒಳ್ಳೆಯ ಮನಸ್ಸಿನವರು. ಎಲ್ಲಾ ತಿಳಿದವರೇ ಪೂಜಾರಿಗಳು. ಪೂಜಾರಿ ಅಂದರೆ ಕನ್ನಡದಲ್ಲಿ ಎಲ್ಲಾ ಅರಿತವನು ಎಂದು ಅರವಿಂದ್ ಬೋಳಾರ್ ಯಕ್ಷಗಾನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜನಿವಾರ ಮುಂಚೆ ನಮಗೇ ಇದ್ದದ್ದು, ಈಗ ಅದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದೇವೆ

ಜನಿವಾರ ಮುಂಚೆ ನಮಗೇ ಇದ್ದದ್ದು, ಈಗ ಅದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದೇವೆ

ಮುಂಚೆ ನಾವೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾ ಇದ್ದದ್ದು, ಗುಂಪಲ್ಲಿ ದೇವಸ್ಥಾನಕ್ಕೆ ಹೋಗುವ ಪದ್ದತಿ ನಮ್ಮಲ್ಲಿಲ್ಲ. ದೇವಸ್ಥಾನಕ್ಕೆ ಹೋಗುವ ಮುಂಚೆ, ಸ್ನಾನ ಮಾಡಿ ಹೋಗುತ್ತೇವೆ, ಬ್ರಾಹ್ಮಣರಿಗಿಂತ ನಾವೇ ದೊಡ್ಡವರು. ಜನಿವಾರ ಮುಂಚೆ ನಮಗೇ ಇದ್ದದ್ದು, ನಾವು ಈಗ ಅದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದೇವೆ - ಅರವಿಂದ್ ಬೋಳಾರ್

ನಮ್ಮ ಜನಿವಾರವನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋದರು

ನಮ್ಮ ಜನಿವಾರವನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋದರು

ಸ್ನಾನ ಮಾಡಲು ಹೋಗುವ ಮುನ್ನ, ಜನಿವಾರವನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿಸಲು ಹಾಕಿ ನಂತರ ಸ್ನಾನಕ್ಕೆ ಹೋಗುತ್ತಿದ್ದೆವು. ಆ ವೇಳೆ, ತೆಂಕು ಮತ್ತು ಬಡಗಿನ (ದಕ್ಷಿಣ, ಪೂರ್ವ) ಬ್ರಾಹ್ಮಣರು ಬಂದು, ಇವನಿಗೆ ಹರಿವಾಣ ತಟ್ಟೆಯಲ್ಲಿ ಸರಿಯಾಗಿ ದುಡ್ಡು ಬೀಳುತ್ತೆ ಎಂದು ಅಂದುಕೊಂಡು ನಮ್ಮ ಜನಿವಾರವನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋದರು - ಅರವಿಂದ್ ಬೋಳಾರ್.

ಯಾವ ಬಿಲ್ಲವರಿಗಾದರೂ ತಲೆಗೆ ಹೋಗಿದೆಯಾ?

ಯಾವ ಬಿಲ್ಲವರಿಗಾದರೂ ತಲೆಗೆ ಹೋಗಿದೆಯಾ?

ಅವರು ಪೂಜೆ ಮಾಡಲು ಒಳಗೆ ಹೋದೆವು, ನಾವು ಹೊರಗೆ ನಿಂತೆವು. ನಮಗೆಷ್ಟೇ ತಿಳಿದಿದ್ದರೂ, ನಾವು ಹೊರಗೆ. ಇದು ಯಾವ ಬಿಲ್ಲವರಿಗಾದರೂ ತಲೆಗೆ ಹೋಗಿದೆಯಾ? ಯಾರೇ ಒಳಗೆ ಹೋದರೂ, ಅವರನ್ನು ಹೊರಗೆ ಎಳೆಯುವ ಮನಸ್ಸು ನಮ್ಮದಲ್ಲ - ತುಳುನಟನ ಅಪಹಾಸ್ಯ.

ಕಲಶಕ್ಕೆ ಪುಷ್ಕರಣಿಯಲ್ಲಿ ನೀರು ತುಂಬಿಸುವವರು ನಾವು

ಕಲಶಕ್ಕೆ ಪುಷ್ಕರಣಿಯಲ್ಲಿ ನೀರು ತುಂಬಿಸುವವರು ನಾವು

ಬ್ರಾಹ್ಮಣರು ದೊಡ್ಡವರಾ, ಪೂಜಾರಿಗಳು ದೊಡ್ಡವರಾ ಎನ್ನುವ ಯಕ್ಷಗಾನ ಭಾಗವತರ ಪ್ರಶ್ನೆಗೆ ಉತ್ತರಿಸುತ್ತಾ ಅರವಿಂದ್ ಬೋಳಾರ್, ನಾವು ತೆಂಗಿನಮರದ ಕೊನೆಗೆ ಹೋಗುತ್ತೇವೆ, ನೋಡೋಣ ಬ್ರಾಹ್ಮಣರು ಹೋಗಲಿ. ಬ್ರಹ್ಮಕಲಶ ಕಾರ್ಯಕ್ರಮ ನಡೆದಾಗ ಕಲಶ ತೆಗೆದುಕೊಂಡು ಹೋಗುವವರು ಅವರು, ಆದರೆ ಕಲಶಕ್ಕೆ ಪುಷ್ಕರಣಿಯಲ್ಲಿ ನೀರು ತುಂಬಿಸುವವರು ನಾವು. ನಮಗೆ ಮುಂಚೆ ಬಲ್ಲವರು ಎಂದು ಹೆಸರಿತ್ತು, ಆನಂತರ ಅದು ಬಿಲ್ಲವರು ಎಂದಾಯಿತು.

ಎಲ್ಲರೂ ಅನ್ಯೋನ್ಯತೆಯಿಂದ ಇರಬೇಕು ಎನ್ನುವುದು ನಾವು ನಂಬಿಕೊಂಡು ಬಂದಿದ್ದು

ಎಲ್ಲರೂ ಅನ್ಯೋನ್ಯತೆಯಿಂದ ಇರಬೇಕು ಎನ್ನುವುದು ನಾವು ನಂಬಿಕೊಂಡು ಬಂದಿದ್ದು

ಇಷ್ಟೆಲ್ಲಾ ಬ್ರಾಹ್ಮಣರನ್ನು ಅಪಹಾಸ್ಯ ಮಾಡಿದ ನಂತರ, ನನಗೆ ಜಾತಿಯ ವಿಷಯ ಬೇಡ. ಜಾತಿಯ ವಿಷಯ ಇನ್ನೂ ಹೆಚ್ಚಾಗಿ ಮಾತನಾಡಿದರೆ, ನೊಟೀಸ್ ಬರುತ್ತದೆ. ಎಲ್ಲರೂ ಅನ್ಯೋನ್ಯತೆಯಿಂದ ಇರಬೇಕು ಎನ್ನುವುದು ಪೂಜಾರಿಗಳು (ಬಿಲ್ಲವ) ನಂಬಿಕೊಂಡು ಬಂದಿದ್ದು ಎಂದು ತುಳುಹಾಸ್ಯ ನಟ ಅರವಿಂದ್ ಬೋಳಾರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Brahmins stolen Janivara from Billavas, Tulu Comedian Aravind Bolar controversial statement during Tulu Yakshagana. The video link has been uploaded to Youtube on Jan 23rd.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more