ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಘಲರ ಆಳ್ವಿಕೆ ಕಾಲದ ಅಷ್ಟೂ ಸಮಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ!

|
Google Oneindia Kannada News

ಬೆಂಗಳೂರು, ಆ. 09: ದೇಶದ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಕ್ವಿಟ್ ಇಂಡಿಯಾ' ಚಳುವಳಿಗೆ 75 ವರ್ಷಗಳು ಸಂದಿವೆ. ಇದೇ ಹಿನ್ನೆಲೆಯಲ್ಲಿ 'ಕ್ವಿಟ್ ಇಂಡಿಯಾ' ಚಳುವಳಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಡಲಾಯ್ತು. ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿರು ಮಾತೊಂದನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಗೆ ಸ್ವೀಕರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ಈ ಬಗ್ಗೆ ರಾಜ್ಯಾದ್ಯಂತ ಚರ್ಚೆ ಆಗುವ ಸಾಧ್ಯತೆಯೂ ಇದೆ.

"ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶವನ್ನು ಕೊಳ್ಳೆ ಹೊಡೆದು ಭಾರತವನ್ನು ಬಡ ರಾಷ್ಟ್ರವನ್ನಾಗಿ ಮಾಡಿತ್ತು. ಅಂದು ದೇಶ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ್ದ ನಾವು, ಇಂದು ದೇಶವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ" ಎಂದು ರಾಜ್ಯ ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ತಮ್ಮ ಆಡಳಿತದ ದಿನಗಳನ್ನು ನೆನಪಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಮುಖವಾಗ ಸಂಗತಿಯೊಂದನ್ನು ಬಿಚ್ಚಿಟ್ಟರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಕ್ವಿಟ್ ಇಂಡಿಯಾ ಚಳುವಳಿಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದೇನು? ಜೊತೆಗೆ ಬಿಜೆಪಿ ನಾಯಕರ ದ್ವಂದ್ವ ನೀತಿಯನ್ನು ಸಿದ್ದರಾಮಯ್ಯ ವಿವರಿಸಿದ್ದು ಮುಂದಿದೆ.

'ಮಾಡು ಇಲ್ಲವೆ ಮಡಿ' ಎಂಬ ಹೋರಾಟ!

'ಮಾಡು ಇಲ್ಲವೆ ಮಡಿ' ಎಂಬ ಹೋರಾಟ!

"ಇಡೀ ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಬಹಳ ಮಹತ್ತರವಾದ ಘಟ್ಟ. ಅಂತಿಮವಾಗಿ ಬ್ರಿಟೀಷರನ್ನು ದೇಶದಿಂದ ತೊಲಗಿಸಬೇಕು ಎಂಬ ಕರೆ ನೀಡಲು ಮಹಾತ್ಮಾ ಗಾಂಧಿ 1942 ಆಗಸ್ಟ್ 8ರಂದು ಅವರು ಬಾಂಬೆ ಕಾಂಗ್ರೆಸ್ ಅಧಿವೇಶನದಲ್ಲಿ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಅಂದಿನ ಬ್ರಿಟೀಷ್ ಸರ್ಕಾರ ದಸ್ತಗಿರಿ ಮಾಡಿ ಜೈಲಿಗೆ ಹಾಕಿದ್ದರು. ಆಗ ಕಾಂಗ್ರೆಸ್ ನಾಯಕರುಗಳು ದೇಶದ ಜನರಿಗೆ ಕರೆಕೊಟ್ಟು, ನಾವು ಜೈಲು ಸೇರಿದಾಗ ಚಳುವಳಿ ನಿಲ್ಲಬಾರದು. ಈ ಚಳುವಳಿ ಉಗ್ರ ಸ್ವರೂಪ ತಾಳಿ ಬ್ರಿಟೀಷರು ದೇಶ ಬಿಟ್ಟು ತೊಲಗುವಂತೆ ಮಾಡಬೇಕು ಎಂದರು. ಅದಕ್ಕಾಗಿ 'ಮಾಡು ಇಲ್ಲವೆ ಮಡಿ' ಎಂಬ ಘೋಷವಾಕ್ಯ ನೀಡುತ್ತಾರೆ. ಸ್ವಾತಂತ್ರ್ಯ ಪಡೆಯಲು ನೀವೆಲ್ಲರೂ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದರು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ವಿಟ್ ಇಂಡಿಯಾ ಚಳುವಳಿಯ ಮಹತ್ವವನ್ನು ವಿವರಿಸಿದರು.

ಪ್ರಧಾನಿ ಮೋದಿ ಹೇಳಿದ್ದೇನು? ಮಾಡಿದ್ದೇನು?

ಪ್ರಧಾನಿ ಮೋದಿ ಹೇಳಿದ್ದೇನು? ಮಾಡಿದ್ದೇನು?

"ದೇಶದ ನತೆ ಕಷ್ಟಪಟ್ಟು ಸ್ವಾತಂತ್ರ್ಯ ಪಡೆದರು. ಈಗ ನಾವೆಲ್ಲರೂ ಸ್ವಾತಂತ್ರ್ಯದ ಫಲಾನುಭವಿಗಳು. ಆದರೆ 2014ರಲ್ಲಿ ಮೋದಿ ಕಾಂಗ್ರೆಸ್‌ಗೆ 60 ವರ್ಷ ಅಧಿಕಾರ ನೀಡಿದ್ದೀರಿ. ನಮಗೆ 60 ತಿಂಗಳು ಅಧಿಕಾರ ಕೊಡಿ. ದೇಶದ ಸ್ವರೂಪವನ್ನೇ ಬದಲಿಸುತ್ತೇವೆ ಎಂದು ದೇಶದ ಜನರ ಮುಂದೆ ಮನವಿ ಮಾಡಿದ್ದರು. ಇಂದು ದೇಶದ ಆರ್ಥಿಕ ಹಾಗೂ ಸಾಮಾಜಿಕ ಚಿತ್ರಣ ಬದಲಾಗಿದೆ ಆದರೆ, ಅವರು ಹೇಳಿದ್ದಕ್ಕೆ ತದ್ವಿರುದ್ಧವಾಗಿ ಬದಲಾವಣೆಯಾಗಿದೆ. ಬಿಜೆಪಿಯ 7 ವರ್ಷಗಳ ಅವಧಿಯಲ್ಲಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತುವ ಬದಲು, ಶೇ.23ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. 12 ಕೋಟಿ ಉದ್ಯೋಗ ನಷ್ಟ, ನಿರುದ್ಯೋಗ ಪ್ರಮಾಣ ಹೆಚ್ಚಳ. ದೇಶದ ಜಿಡಿಪಿ ಮೈನಸ್ ಶೇಕಡಾ 7.7ಕ್ಕೆ ಇಳಿದಿದೆ. ಇದು ದೇಶಕ್ಕೆ ಪ್ರಧಾನಿ ಮೋದಿ ಕೊಡುಗೆ. ದೇಶದಲ್ಲಿ ಜನರ ಬದುಕಿನ ಪರಿಸ್ಥಿತಿ ಹೇಳಲಾರದಷ್ಟು ಹೀನಾಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದನಂತರ ಜನರ ಜೀವನ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. ಸಾಮಾನ್ಯ ಜನ ಹೇಗೆ ಬದುಕುತ್ತಾರೆ. ಸುಳ್ಳು ಹೇಳಿರುವುದು ಬಿಟ್ಟರೆ ಇವರ ಸಾಧನೆ ಬೇರೆ ಇಲ್ಲ. ಸ್ವತಂತ್ರ್ಯ ಭಾರತದಲ್ಲಿ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಬೇರೊಬ್ಬರಿಲ್ಲ. ಸಾವರ್ಕರ್ ಆದಿಯಾಗಿ ಬಿಜೆಪಿಯ ಯಾವ ನಾಯಕರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.


'ಬಿಜೆಪಿ ಸರ್ಕಾರ ಸಮಾಜ ಪರಿವರ್ತನೆ ಮಾಡುವ ಸರ್ಕಾರಗಳಲ್ಲ. ಸಮಾಜ ಬದಲಾವಣೆಯಾಗಿ, ಎಲ್ಲರಿಗೂ ನ್ಯಾಯ, ಅವಕಾಶ ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಕೊಟ್ಟರು. ಆದರೆ ಬಿಜೆಪಿಯವರಿಗೆ ಇದರ ಮೇಲೆ ನಂಬಿಕೆ ಇಲ್ಲ. ಅವರಿಗೆ ಈಗಲೂ ನಂಬಿಕೆ ಇರುವುದು ಮೇಲು, ಕೀಳು, ತಾರತಮ್ಯದ ವ್ಯವಸ್ಥೆ ಮೇಲೆ. ಅದಕ್ಕಾಗಿ ಸಮಾಜವನ್ನು ಒಡೆದು ಛಿದ್ರ ಮಾಡಿ ಸಮಾಜವನ್ನು ತಮ್ಮ ಕಪಿಮುಷ್ಛಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊಘಲ್ ಆಡಳಿತಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ

ಮೊಘಲ್ ಆಡಳಿತಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ

"ನಾನು ಟಿಪ್ಪು ಸುಲ್ತಾನ್ ಜಯಂತಿ ಮಾಡಿದಾಗ ನನ್ನನ್ನು ಹಿಂದು ವಿರೋಧಿ ಎಂದು ಬಿಂಬಿಸಿದರು. ಟಿಪ್ಪು ರಾಜ್ಯದಲ್ಲಿ ದಿವಾನರಾಗಿದ್ದವರು ಯಾರು? ಅವರು ಯಾವ ಜಾತಿಗೆ ಸೇರಿದವರು? ಟಿಪ್ಪು ಆಡಳಿತದಲ್ಲಿ ಹಣಕಾಸು ಜವಾಬ್ದಾರಿ ನಿಭಾಯಿಸಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿಗೆ ಸೇರಿದವರು? ಮೊಘಲರ 600 ವರ್ಷಗಳ ಆಳ್ವಿಕೆ ಕಾಲದ ಅಷ್ಟೂ ಸಮಯದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರೇ. ಟಿಪ್ಪು ಆಡಳಿತ ಅವಧಿಯಲ್ಲಿ ನಾಲ್ಕು ಯುದ್ಧಗಳು ನಡೆದವು, ಅದು ಬ್ರಿಟೀಷರ ವಿರುದ್ಧವಾಗಿತ್ತು. ಟಿಪ್ಪು ಯಾವ ದೇಶ ದ್ರೋಹ ಮಾಡಿದ್ದ ಅಂತಾ ಯಾರಾದರೂ ಹೇಳುತ್ತಾರಾ? ಇಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ವ್ಯಕ್ತಿ ಜಯಂತಿ ಮಾಡಿದರೆ ನಿಮಗ್ಯಾಕೆ ಕೋಪ? ಬಿಜೆಪಿಯವರಿಗೆ ಪೂರ್ಣಯ್ಯ ಅವರ ಮೇಲೆ ಕೋಪ ಇಲ್ಲ, ಹೇಗಿದೆ ನೋಡಿ ಬಿಜೆಪಿಯ ದ್ವಂಧ್ವ ನೀತಿ. ಬಿಜೆಪಿಗರು ಎಂತಹ ನೀಚರು ಎಂದು ಸಾಬೀತಾಗುತ್ತದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದರು.


"ಈ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಗರು ಇಂದು ನಮಗೆ, ದೇಶ, ದೇಶ ಭಕ್ತಿ, ರಾಷ್ಟ್ರೀಯತೆ ಬಗ್ಗೆ ಪಾಠ ಹೇಳಿಕೊಡಲು ಬರುತ್ತಿದ್ದಾರೆ. ಇದಕ್ಕೆ ನಾವು ಹೇಳೋಣ? ಕೇವಲ ಜನರಿಗೆ ಸುಳ್ಳು ಹೇಳಿ, ದಾರಿ ತಪ್ಪಿಸಿ ದೇಶವನ್ನು ಛಿದ್ರ ಮಾಡಲು ಹೊರಟಿದ್ದಾರೆ. ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶದ ಸಂಪತ್ತು ಲೂಟಿ ಮಾಡಿ ಅವರ ದೇಶಕ್ಕೆ ತೆಗೆದುಕೊಂಡು ಹೋದರು. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬರುವ ಮುನ್ನ ವಿಶ್ವ ಜಿಡಿಪಿಯಲ್ಲಿ ಅವರ ಕೊಡುಗೆ ಶೇ. 2ರಷ್ಟಿತ್ತು. ಅವರು ನಮ್ಮ ದೇಶ ಬಿಡುವಾಗ ಶೇ.10ಕ್ಕೆ ಏರಿಕೆಯಾಗಿತ್ತು. ಅವರು ಎಷ್ಟು ಕೊಳ್ಳೆ ಹೊಡೆದಿದ್ದಾರೆ ನೋಡಿ. ಗರಿಷ್ಠಮಟ್ಟದಲ್ಲಿದ್ದ ಜಿಡಿಪಿ ನಂತರ ಕೆಳ ಮಟ್ಟಕ್ಕೆ ಕುಸಿಯಿತು. ಅಂದು ಶ್ರೀಮಂತ ದೇಶವಾಗಿದ್ದ ಭಾರತ, ಬಡ ರಾಷ್ಟ್ರವಾಗಲು ಬ್ರಿಟೀಷರೇ ಕಾರಣ. ಇಂದು ದೇಶ ಮತ್ತೆ ಬಡರಾಷ್ಟ್ರವಾಗುತ್ತಿರುವುದಕ್ಕೆ ಕಾರಣ ಬಿಜೆಪಿ" ಎಂದು ಸಿದ್ದರಾಮಯ್ಯ ವಿವರಿಸಿದರು.

ಈಗ ಪ್ರಧಾನಿ ಮೋದಿ ಅಧಿಕಾರ ಬಿಟ್ಟು ತೊಲಗಿ ಎನ್ನಬೇಕಾಗಿದೆ!

ಈಗ ಪ್ರಧಾನಿ ಮೋದಿ ಅಧಿಕಾರ ಬಿಟ್ಟು ತೊಲಗಿ ಎನ್ನಬೇಕಾಗಿದೆ!

ಹೀಗಾಗಿ ದೇಶವನ್ನು ರಕ್ಷಿಸಲು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದಂತೆ, ದೇಶ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಬಿಜೆಪಿಯವರ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಂತಹ ಪ್ರಮುಖ ದಿನಗಳಂದು ನಾವೆಲ್ಲರೂ ಕಾಯಾ-ವಾಚಾ-ಮನಸಾ ದೇಶಕ್ಕಾಗಿ ಗಾಂಧಿಜಿ ಅವರಂತೆ ತ್ಯಾಗ ಬಲಿದಾನ ಮಾಡಲು ಸಾಧ್ಯವಾಗದಿದ್ದರೂ ಸ್ವಲ್ಪ ಪ್ರಮಾಣದ ತ್ಯಾಗ ಬಲಿದಾನ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಿದೆ. ದೇಶದ ಎಲ್ಲ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಒಟ್ಟಾಗಿ ಸೇರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಬಿಜೆಪಿಯನ್ನು ಖಂಡಿತವಾಗಿಯೂ ತೊಲಗಿಸಬಹುದು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


"ಈಗ ದೇಶದ ಆಡಳಿತ ಸೂತ್ರವನ್ನು ಹಿಡಿದಿರುವ ಪ್ರಧಾನಿ ಮೋದಿ ಅವರು ಸಂವಿಧಾನ ಮೂಲಕ ರಚನೆಯಾಗಿರುವ ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗ ಎಲ್ಲ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಶ್ವದಲ್ಲೇ ಶ್ರೇಷ್ಠವಾಗಿರುವ ಸಂವಿಧಾನ ತಿರುಚುವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಂದು ಬ್ರಿಟೀಷರೇ ಬಾರತ ಬಿಟ್ಟು ತೊಲಗಿ ಎಂದು ತೀರ್ಮಾನಿಸಿದಂತೆ, ಇಂದು ಪ್ರಧಾನಿ ಮೋದಿ ಅವರೇ ಅಧಿಕಾರ ಬಿಟ್ಟು ತೊಲಗಿ ಎಂದು ಕರೆ ಕೊಡುವಂತಾಗಿದೆ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್‌.ಆರ್. ಪಾಟೀಲ್ ಅಭಿಪ್ರಾಯ ಪಟ್ಟರು.


"ಕೇಂದ್ರದ ನಿಯಂತ್ರಣದಲ್ಲಿರುವ ಬಂದರು, ವಿಮಾನ ನಿಲ್ದಾಣ, ತೈಲ ಕಂಪನಿ, ಬ್ಯಾಂಕ್, ಕಾರ್ಖಾನೆ, ರೈಲ್ವೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಬ್ರಿಟೀಷರು ಭಾರತಕ್ಕೆ ಬಂದಾಗ ಈಸ್ಟ್ ಇಂಡಿಯಾ ಕಂಪನಿ ತಂದು ವ್ಯಾಪಾರ ಆರಂಭಿಸಿ, ಒಡೆದು ಆಳುವ ನೀತಿ ರೂಪಿಸಿ ಇಲ್ಲಿನ ರಾಜರುಗಳ ನಡುವೆ ಬಿರುಕು ಮೂಡಿಸಿ ತಮ್ಮ ನಿಯಂತ್ರಣ ಸಾಧಿಸಿದರು. ಅದೇ ರೀತಿ ಮೋದಿ ಅವರು ಅದಾನಿ, ಅಂಬಾನಿ ಎಂಬ ಕಂಪನಿ ಹುಟ್ಟುಹಾಕಿದ್ದು, ಅವರಿಗೆ ಇಡೀ ದೇಶವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯಿಂದ ದೇಶ ಹಾಳಾದ ರೀತಿಯಲ್ಲೇ ಇಂದು ಬಿಜೆಪಿಯ ಖಾಸಗಿಕರಣ ನೀತಿಯಿಂದ ದೇಶ ವಿನಾಶದತ್ತ ಸಾಗುತ್ತಿದೆ. ಕಾಂಗ್ರೆಸ್ 60 ವರ್ಷಗಳಲ್ಲಿ ಕಟ್ಟಿದ್ದನ್ನು ಬಿಜೆಪಿ ಆರೇ ವರ್ಷದಲ್ಲಿ ಮಾರಾಟ ಮಾಡುತ್ತಿದೆ. ದೇಶದಲ್ಲಿ ಅನ್ನ ಬೆಳೆಯುವ ರೈತನ ಜಮೀನನ್ನೂ, ಕೃಷಿ ಉತ್ಪನ್ನಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನೀತಿಯನ್ನು ಬಿಜೆಪಿ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಬಿಜೆಪಿಯಿಂದ ದೇಶವನ್ನು ರಕ್ಷಿಸಲು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ಹೋರಾಟ ಆರಂಭಿಸಬೇಕಾಗಿದೆ" ಎಂದು ಎಸ್.ಆರ್. ಪಾಟೀಲ್ ವಿವರಿಸಿದರು.

ಬಿಜೆಪಿ ಸರ್ಕಾರ ಸಂವಿಧಾನ ಬದಲಿಸಲು ಮುಂದಾಗಿದೆ

ಬಿಜೆಪಿ ಸರ್ಕಾರ ಸಂವಿಧಾನ ಬದಲಿಸಲು ಮುಂದಾಗಿದೆ

"ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಆ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ನಮ್ಮ ಧರ್ಮ ಹಾಗೂ ಕರ್ತವ್ಯವಾಗಿದೆ. ಇಂದು ಕೆಲವು ಪಕ್ಷ ಹಾಗೂ ಸರ್ಕಾರ ಸಂವಿಧಾನ ಬದಲಿಸಲು ಮುಂದಾಗಿವೆ. ಹೀಗಾಗಿ ಸಂವಿಧಾನ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಹೀಗಾಗಿ ಗಾಂಧೀಜಿ ಸೇರಿದಂತೆ ಪ್ರಮುಖ ನಾಯಕರು ಹಾಕಿಕೊಟ್ಟ ಹಾದಿಯಲ್ಲಿ ಯುವಕರು ನಡೆಯಬೇಕು. ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಕ್ಷವಾಗಿದೆ. ನರೇಂದ್ರ ಮೋದಿ ಅವರು ಕೇವಲ ಸುಳ್ಳನೇ ಹೇಳುತ್ತಿದ್ದಾರೆ. ಅವರು ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ಎನ್ನುವುದು ಸತ್ಯ ಬಿಟ್ಟರೆ ಇನ್ಯಾವುದೂ ಸತ್ಯವಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಆಸ್ಕರ್ ಪ್ರಶಸ್ತಿ ನೀಡಬೇಕಿದೆ. ದೇಶ ಅಥವಾ ರಾಜ್ಯದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಈ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಒಂದು ವರ್ಷಗಳ ಕಾರ್ಯಕ್ರಮವನ್ನು ಕಳುಹಿಸಿಕೊಟ್ಟಿದ್ದಾರೆ. ಆಗಸ್ಟ್ 14ರಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಬೇಕು. ಹಾಗೂ 15ರಂದು ಕೂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿವರಿಸಿದರು.

ತಪ್ಪಿಸಿಕೊಂಡಿದ್ದ ವಾಜಪೇಯಿ, ಶ್ಯಾಮ್ ಪ್ರಸಾದ್ ಮುಖರ್ಜಿ

ತಪ್ಪಿಸಿಕೊಂಡಿದ್ದ ವಾಜಪೇಯಿ, ಶ್ಯಾಮ್ ಪ್ರಸಾದ್ ಮುಖರ್ಜಿ

"ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದಿನ ಆಗಸ್ಟ್ 9, 1942ರಲ್ಲಿ. ಮಹಾತ್ಮಾ ಗಾಂಧಿ ಅವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುವ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಷ್ಟ್ರಮಟ್ಟದಲ್ಲಿ ಕರೆ ನೀಡುತ್ತಾರೆ. ಗಾಂಧಿ ಅವರ ಕರೆಗೆ ಸ್ಪಂಧಿಸಿ ರೈತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಎಲ್ಲರೂ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಬಾಂಬೆಯ ಅಜಾದ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯವಾದ ನಂತರ ಭಾರತ ಧ್ವಜ ಹಾರಿಸಲು ಮುಂದಾದರು. ಅದಕ್ಕೆ ಅವಕಾಶ ನೀಡದ ಬ್ರಿಟೀಷರು ಎಲ್ಲ ನಾಯಕರನ್ನು ಬಂಧಿಸಿದರು. ಕಸ್ತೂರಿ ಬಾಯಿ, ಅರುಣಾ ಅಸಾಫಾ ಅವರು ಬ್ರಿಟೀಷರ ಕಣ್ತಪ್ಪಿಸಿ ಧ್ವಜಾರೋಹಣ ಮಾಡುತ್ತಾರೆ" ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಇತಿಹಾಸ ನೆನಪಿಸಿದರು. ಇದರೊಂದಿಗೆ ಮತ್ತೊಂದು ಮಹತ್ವದ ಮಾತನ್ನು ಬಿಜೆಪಿ ನಾಯಕರ ಕುರಿತು ಹೇಳಿದರು.

"ಇಡೀ ದೇಶದಾದ್ಯಂತ ನಡೆದ ಈ ಹೋರಾಟದಲ್ಲಿ ಪಾಲ್ಗೊಳ್ಳದ ನಾಯಕರು ಎಂದರೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಶಾಮ್ ಪ್ರಸಾದ್ ಮುಖರ್ಜಿ ಅವರು. ಗ್ವಾಲಿಯರ್ ಬಳಿ ವಾಜಪೇಯಿ ಅವರನ್ನು ಬಂಧಿಸಿದಾಗ ಅವರು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿದಾಗ ಅವರು ನಾನು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ ಎಂದು ಕ್ಷಮೆಯಾಚಿಸಿದ್ದರು. ಇಂತಹ ವ್ಯಕ್ತಿ ಕೂಡ ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಇನ್ನು ಬಿಜೆಪಿಯವರು ಹಿರೋ ಆಗಿ ನೋಡುವ ಶಾಮ್ ಪ್ರಸಾದ್ ಮುಖರ್ಜಿ ಅವರು ಬ್ರಿಟೀಷ್ ಗವರ್ನರ್ ಅವರಿಗೆ ಪತ್ರ ಬರೆದು ಈ ಕ್ವಿಟ್ ಇಂಡಿಯಾ ಚಳುವಳಿ ಯಶಸ್ವಿಯಾಗಲು ಬಿಡಬಾರದು. ಅದನ್ನು ಹತ್ತಿಕ್ಕಬೇಕು ಎಂದು ಹೇಳುತ್ತಾರೆ. ಇವರ ಅನುಯಾಯಿಗಳು ಇಂದು ನಮಗೆ ದೇಶ ಭಕ್ತಿ ಬಗ್ಗೆ ಪಾಠ ಕಲಿಯಬೇಕಾದ ಪರಿಸ್ಥಿತಿ ಬಂದಿದೆ. ಅಂದು ನಮ್ಮನ್ನು ಬಿಳಿ ಬ್ರಿಟೀಷರು ಆಳ್ವಿಕೆ ಮಾಡಿದರೆ, ಇಂದು ಕಪ್ಪು ಬ್ರಿಟೀಷರು ಆಳ್ವಿಕೆ ಮಾಡುತ್ತಿದ್ದಾರೆ" ಎಂದು ಬಿಜೆಪಿ ನಾಯಕರ ಮೇಲೆ ಹರಿಪ್ರಸಾದ್ ಕಿಡಿ ಕಾರಿದರು.

"ಬಿಜೆಪಿಯವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಹೇಳಿಕೊಳ್ಳಲು ಒಂದೇ ಒಂದು ಹೆಸರೂ ಇಲ್ಲ. ಇನ್ನು ಕರ್ನಾಟಕದಲ್ಲಿ ಸಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ಸ್ವರಾಜ್ಯವನ್ನು ಘೋಷಿಸಿ ನಾಲ್ವರಿಗೆ ಗಲ್ಲು ಶಿಕ್ಷೆಯಾಗಿತ್ತು. ಈ ರೀತಿಯಾಗಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕರ್ನಾಟಕದ ಇತಿಹಾಸವೂ ಒಂದು ಭಾಗವಾಗಿದೆ. ಇಂದು ಬಿಜೆಪಿ ವಿರುದ್ಧ ಯಾರು ಮಾತನಾಡುತ್ತಾರೋ ಅವರಿಗೆ ಬ್ರಿಟೀಷರ ಸಂಸ್ಕೃತಿಯನ್ನು ತೋರಿಸಿಕೊಡುತ್ತಿದ್ದಾರೆ. ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ಬ್ರಿಟೀಷರಂತೆ ಜೈಲಿಗೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ತ್ಯಾಗ ಬಲಿದಾನ ಎಂದರೆ ಕಾಂಗ್ರೆಸ್ ಮಾತೃಪಕ್ಷಕ್ಕೆ ದ್ರೋಹ ಬಗೆದು ಅಧಿಕಾರದ ಹಿಂದೆ ಹೋಗಿದ್ದೇ ದೊಡ್ಡ ತ್ಯಾಗ ಬಲಿದಾನವಾಗಿದೆ. ಇದು ಬಿಜೆಪಿಯ ತ್ಯಾಗ ಬಲಿದಾನವಾಗಿದೆ. ಈ ದೇಶ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಅಧಿಕಾರ ಸ್ವಾರ್ಥವನ್ನು ಪಕ್ಕಕ್ಕಿಟ್ಟು ಮಾಡು ಲ್ಲವೇ ಮಡಿ ಎಂಬ ಧೋರಣೆಯಂತೆ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾಗಿದೆ. ಬಿಜೆಪಿ ಸರ್ಕಾರ ಕಿತ್ತೊಗೆಯುವಂತೆ ಪ್ರತಿಜ್ಞೆ ಮಾಡಬೇಕಿದೆ" ಎಂದು ಬಿಕೆ ಹರಿಪ್ರಸಾದ್ ವಿವರಿಸಿದರು.

ದೇಶವನ್ನು ಬಿಜೆಪಿಯಿಂದ ರಕ್ಷಿಸಬೇಕಿದೆ

ದೇಶವನ್ನು ಬಿಜೆಪಿಯಿಂದ ರಕ್ಷಿಸಬೇಕಿದೆ

"ನಾವು ಸ್ವಾತಂತ್ರ್ಯ ಸಂಪೂರ್ಣ ಫಲವನ್ನು ಅನುಭವಿಸುತ್ತಿಲ್ಲ. ಅದನ್ನು ಅನುಭವಿಸಬೇಕಾದರೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಇಂದು ಬಡತನ ಹೆಚ್ಚಾಗುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಸ್ವತಂತ್ರ್ಯ ಭಾರತದಲ್ಲಿ ಮೋದಿ ಅವರ ಸರ್ಕಾರದಲ್ಲಿ ಅತಿ ಹೆಚ್ಚಿನ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಕೋವಿಡ್ ಬರುವ ಮುನ್ನವೇ ದೇಶದ ಆರ್ಥಿಕತೆ ಕುಸಿಯಲು ಆರಂಭವಾಗಿತ್ತು. ರಾಷ್ಟ್ರದ ಜಿಡಿಪಿ ಕುಸಿಯಲು ಆರಂಭವಾಗಿತ್ತು. ಹೀಗಾಗಿ ಕಾಂಗ್ರೆಸ್ ಇರುವುದು ಶಾಸಕರು, ಸಂಸದರಾಗಿ ಅಧಿಕಾರ ಅನುಭವಿಸಲು ಅಲ್ಲ. ಈ ಸಮಯ ಬಹಳ ಪ್ರಮುಖವಾಗಿರುವುದು ರಾಜ್ಯ, ದೇಶ ಹಾಗೂ ಜನರ ಹಿತ. ಅಂದು ಗಾಂಧೀಜಿ ಅವರು ಕೊಟ್ಟ ಕರೆ ಇಂದಿಗೂ ಪ್ರಸ್ತುತ. ಆಗಿನ ಸಮಸ್ಯೆಗಿಂತ ಇಂದು ಇನ್ನಷ್ಟು ಜ್ವಲಂತ ಸಮಸ್ಯೆಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಪ್ರಹಾರ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕತ್ವದ ಅಗತ್ಯವಿದೆ. ಸ್ವಾತಂತ್ರ್ಯ ತಂದುಕೊಟ್ಟ ಎಲ್ಲ ನಾಯಕರನ್ನು ಸ್ಮರಿಸಿ. ನಾವೆಲ್ಲರೂ ಒಟ್ಟಾಗಿ ಪಕ್ಷದ ಶಕ್ತಿ ಹೆಚ್ಚಿಸಿ, ದೇಶವನ್ನು ಬಿಜೆಪಿಯಿಂದ ರಕ್ಷಿಸಬೇಕಿದೆ." ಎಂದು ಇದೇ ಸಂದರ್ಭದಲ್ಲಿ ಮಾಜಿ ಸಚಿವ ಆರ್. ವಿ ದೇಶಪಾಂಡೆ ಹೇಳಿದರು.

ಬ್ರಿಟೀಷರಿಗಿಂತ ಕೆಟ್ಟದಾಗಿ ದೇಶವನ್ನು ಬಿಜೆಪಿ ನಡೆಸಿಕೊಳ್ಳುತ್ತಿದೆ

ಬ್ರಿಟೀಷರಿಗಿಂತ ಕೆಟ್ಟದಾಗಿ ದೇಶವನ್ನು ಬಿಜೆಪಿ ನಡೆಸಿಕೊಳ್ಳುತ್ತಿದೆ

ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಮೋಟಮ್ಮ "ಈ ಸಂದರ್ಭದಲ್ಲಿ ನಾವು ಮಾಡಬೇಕಾದ ಕರ್ತವ್ಯ, ತೀರ್ಮಾನ ಬಹಳ ಮುಖ್ಯ. ಬ್ರಿಟೀಷರಿಗಿಂತ ಹೆಚ್ಚಾಗಿ ಬಿಜೆಪಿಯವರು ದೇಶವನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇದರ ವಿರುದ್ಧ ನಾವು ಹೇಗೆ ಹೋರಾಟ ಮಾಡಬಾಕಿದೆ. ಹೀಗಾಗಿ ಸಮರ್ಪಣಾ ಭಾವನೆಯಿಂದ ನಾವೆಲ್ಲರೂ ಹೋರಾಟ ನಡೆಸಬೇಕಿದೆ. ನಮ್ಮ ನಾಯಕರ ತ್ಯಾಗ ಬಲಿದಾನಕ್ಕೆ ಗೌರವ ನೀಡುತ್ತಾ, ನಾವು ಒಗ್ಗಟ್ಟಿನಿಂದ ನಡೆದುಕೊಂಡು, ಪಕ್ಷದ ಹಿತ ಕಾಯುತ್ತಾ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು" ಎಂದರು.

"ಎರಡನೇ ಮಹಾಯುದ್ಧ ಆರಂಭವಾದಾಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಬ್ರಿಟೀಷರ ವಿರುದ್ಧ ಯುದ್ಧ ಆರಂಭಿಸಿ, ಬ್ರಿಟೀಷರ ಒಂದೊಂದೆ ರಾಷ್ಟ್ರವನ್ನು ವಶಪಡಿಸಿಕೊಳ್ಳುತ್ತಾ ಸಾಗಿದರು. ಈ ಸಂದರ್ಭದಲ್ಲಿ ಬ್ರಿಟೀಷರಿಗೆ ಭಾರತ ಬೆಂಬಲವಾಗಿ ನಿಲ್ಲಬೇಕೇ ಬೇಡವೇ ಎಂಬ ಚರ್ಚೆ ಮಾಡಲು ಮಹಾತ್ಮ ಗಾಂಧಿ ಅವರು ಸಭೆ ಕರೆದಿದ್ದರು. ಈ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸೇನೆಯಲ್ಲಿದ್ದ 90 ಸಾವಿರ ಭಾರತೀಯ ಯೋಧರನ್ನು ಹಿಟ್ಲರ್ ಸೆರೆ ಹಿಡಿದಿದ್ದ. ಆಗ ಬ್ರಿಟೀಷ್ ಸಾಮ್ರಾಜ್ಯ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುತ್ತಾರೆ. ಈ ಸಭೆಗೆ ಎಲ್ಲ ರಾಜ್ಯಗಳ ನಾಯಕರು ಸಭೆ ಸೇರುತ್ತಾರೆ. ಈ ಸಭೆಯಲ್ಲಿ ಬ್ರಿಟೀಷರ ಮೇಲೆ ಒತ್ತಡ ಹಾಕಬೇಕು, ಇನ್ನು ಹೆಚ್ಚು ದಿನ ಅವರ ಗುಲಾಮರಾಗಿ ನಾವು ಬದುಕಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗುತ್ತದೆ" ಎಂದು ಕ್ವಿಟ್ ಇಂಡಿಯಾ ಚಳುವಳಿಯ ಕುರಿತು ರಾಜ್ಯಸಭಾ ಸದಸ್ಯ ಹನುಮಂತಯ್ಯ ವಿವರಿಸಿದರು.

Recommended Video

ನೀರಜ್ ಹೆಸರು ಇಟ್ಕೊಂಡೋರಿಗೆ ಗುಜರಾತಿನಲ್ಲಿ ಹೊಡೀತು ಲಾಟರಿ | Oneindia Kannada
ಮೋದಿ ಬಗ್ಗೆ ವಾಜಪೇಯಿಗೆ ಎಚ್ಚರಿಕೆ ಕೊಟ್ಟಿದ್ದ ರಾಜ್ಯಪಾಲರು!

ಮೋದಿ ಬಗ್ಗೆ ವಾಜಪೇಯಿಗೆ ಎಚ್ಚರಿಕೆ ಕೊಟ್ಟಿದ್ದ ರಾಜ್ಯಪಾಲರು!

"ಆಗ ದೇಶದೆಲ್ಲಲೆಡೆ ಉದ್ವೇಗ ಆರಂಭವಾಗುತ್ತದೆ. ಮರುದಿನ ಗ್ವಾಲಿಯರ್ ಟ್ಯಾಂಕ್ ಮೈದಾನದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನವಾಗುತ್ತದೆ. ಆಗ ಇದನ್ನು ತಿಳಿದ ಬ್ರಿಟೀಷರು ರೈಲ್ವೇ ನಿಲ್ದಾಣದಲ್ಲೇ ಎಲ್ಲ ನಾಯಕರನ್ನು ಬಂಧಿಸುತ್ತಾರೆ. ಆಗ ಗಾಂಧೀಜಿ ಅವರು ಕರೆ ನೀಡುತ್ತಾರೆ. ನಾವು ನಾಯಕರು ಜೈಲು ಸೇರಿದರೂ ಈ ಹೋರಾಟ ನಿಲ್ಲಬಾರದು. ನಾಯಕರು ಇಲ್ಲದಿದ್ದರೆ ಈ ಹೋರಾಟದಲ್ಲಿ ನಿಮಗೆ ನೀವೇ ನಾಯಕರಾಗಿ. ಬ್ರಿಟೀಷರೇ ಭಾರತ ಬಿಟ್ಟು ತೊಲಗುವಂತೆ ಮಾಡಿ ಎಂದು ಕರೆ ಕೊಟ್ಟರು. ಗಾಂಧಿಜಿ ಅವರ ಕರೆ ದೇಶದೆಲ್ಲೆಡೆ ಹಬ್ಬಿತು. ಗಾಂಧಿಜಿ ಅವರ ಈ ಕರೆಗೆ ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯ ಜನರು, ಮಹಿಳೆಯರು, ಮಕ್ಕಳು ಈ ಹೋರಾಟದಲ್ಲಿ ಭಾಗವಹಿಸಿದರು. ಜನರು ಭೂಗತವಾಗಿ ಹೋರಾಟ ಮಾಡಿದಾಗ, ಮಹಿಳೆಯರು ಬಂಧನವಾದಾಗ ಅವರ ಮಕ್ಕಳು ಅನಾಥರಾಗುತ್ತಾರೆ. ಅಂತಹ ಮಕ್ಕಳನ್ನು ಆಶ್ರಮಗಳನ್ನು ಆರಂಭಿಸಿ ಅಲ್ಲಿ ಅವರನ್ನು ನೋಡಿಕೊಳ್ಳುತ್ತಾರೆ. ಅಂತಹ ಆಶ್ರಮ ಶಿವಮೊಗ್ಗದಲ್ಲೂ ಇತ್ತು. ಈಸೂರಿನ ಮಕ್ಕಳನ್ನು ಅಲ್ಲಿ ತಂದು ಸಾಕಲಾಗಿತ್ತು. ಭಾರತದಲ್ಲಿ ಇನ್ನು ಆಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದು ಬ್ರಿಟೀಷರಿಗೆ ಮನದಟ್ಟಗಿತ್ತು. ಆದರೆ ಇಂದು ಬ್ರಿಟೀಷರ ಬದಲಿಗೆ ಬಿಜೆಪಿ ಸರ್ಕಾರ ದೇಶದ ಜನರನ್ನು ದಮನಕಾರಿಯಾಗಿ ಆಳ್ವಿಕೆ ನಡೆಸುತ್ತಿದೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದರೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ರಕ್ಷಣೆ ರಾಷ್ಟ್ರಪತಿಗಳ ಜವಾಬ್ದಾರಿ. ಈ ವಿಚಾರವಾಗಿ ನಾವು ಪದೇ ಪದೇ ಅವರ ಗಮನಕ್ಕೆ ತಂದು ಜನರಿಗೆ ಅರಿವು ಮೂಡಿಸಬೇಕು" ಎಂದು ಹನುಮಂತಯ್ಯ ಎಚ್ಚರಿಸಿದರು.

ಜೊತೆಗೆ, "ಮೋದಿ ಅವರು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರು ವಾಜಪೇಯಿ ಅವರನ್ನು ಕರೆದು ನಿಮ್ಮ ಮುಖ್ಯಮಂತ್ರಿಗಳು ಸರಿಯಾಗಿ ನಡೆದುಕೊಳ್ಳುವಂತೆ ಮಾಡಿ ಎಂದು ಎಚ್ಚರಿಸಿದ್ದರು. ಅಂದು ಲಾಲಕೃಷ್ಣ ಆಡ್ವಾಣಿ ಅವರು ಮೋದಿ ಅವರ ಸರ್ಕಾರವನ್ನೇ ರದ್ದುಗೊಳಿಸಲು ಮುಂದಾಗಿದ್ದರು. ಆದರೆ ಇದನ್ನು ವಾಜಪೇಯಿ ಅವರು ತಡೆದರು. ಜಿನ್ನಾ ಕೂಡ ದೇಶ ಭಕ್ತ ಎಂದು ಹೇಳಿದ್ದೇ ತಪ್ಪು ಎಂಬಂತೆ ಆರ್ ಎಸ್ ಎಸ್ ಹಾಗೂ ಬಿಜೆಪಿ ಅವರು ಆಡ್ವಾಣಿ ಅವರನ್ನು ಮೂಲೆಗುಂಪು ಮಾಡಿ ಕೂರಿಸಿದ್ದಾರೆ. ಇಂದು ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥೆ ನಾಶ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕಿದೆ" ಎಂದು ಹನುಮಂತಯ್ಯ ಈಗಿನ ಪ್ರಧಾನಿ ಮೋದಿ ಅವರು ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹೇಗೆ ಆಡಳಿತ ಮಾಡಿದ್ದರು ಎಂಬುದನ್ನು ವಿವರಿಸಿದರು.

English summary
The Brahmins occupied prominent position during the Mughals' 600-year reign. Purnaiah was a Diwan in the reign of Tipu Sultan. But BJP has no anger over Diwan Purnaiah; Former CM Siddaramaiah accused the BJP of its dual policy. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X