ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ವಿವರಗಳು

|
Google Oneindia Kannada News

ಬೆಂಗಳೂರು, ನವೆಂಬರ್ 17: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಬ್ರಾಹ್ಮಣ ಸಮಾಜದ ಸದುಪಯೋಗಕ್ಕಾಗಿ ರೂಪಿಸಿದೆ. ಈ ಕುರಿತು ವಿವಿಧ ಮಾಧ್ಯಮಗಳ ಮೂಲಕ ತಿಳುವಳಿಕೆಯನ್ನು ನೀಡುತ್ತಾ ಬಂದಿದೆ.

ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ Economically Weaker Section Certificate ನೀಡಲಾಗುತ್ತದೆ. ಇದನ್ನು ಪಡೆಯಲು ಬೇಕಾದ ಮಾನದಂಡಗಳು ಮತ್ತು ದಾಖಲೆಗಳ ವಿರಗಳನ್ನು ಇಲ್ಲಿ ನೀಡಲಾಗಿದೆ.

ಕೊಳೆಗೇರಿ ಮಕ್ಕಳ ಸೇವೆಯಲ್ಲಿ ಉಡುಪಿಯ ಬ್ರಾಹ್ಮಣ ಕುಟುಂಬ...ಕೊಳೆಗೇರಿ ಮಕ್ಕಳ ಸೇವೆಯಲ್ಲಿ ಉಡುಪಿಯ ಬ್ರಾಹ್ಮಣ ಕುಟುಂಬ...

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವಿವಿಧ ಯೋಜನೆಗಳನ್ನು ಸಮುದಾಯದ ಜನರಿಗಾಗಿ ರೂಪಿಸಿದೆ. ಈ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಲು EWS ಪ್ರಮಾಣ ಪತ್ರವನ್ನು ಹೊಂದಿರಬೇಕು. ಯೋಜನೆಗಳ ವಿವರ ಹೀಗಿದೆ.

ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ

 Brahmin Development Board Various Schemes

ಸಾಂದೀಪನಿ ಶಿಷ್ಯ ವೇತನ (ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್), ಆಚಾರ್ಯತ್ರಯ ವೇದ ಶಿಷ್ಯ ವೇತನ (ವೇದ ಮತ್ತು ಸಂಸ್ಕೃತ ಶಿಕ್ಷಣ ಹಾಗೂ ಗುರು ಶಿಷ್ಯರಿಗೆ ವೇತನ). ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ (ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಪುರಸ್ಕಾರ).

ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ, ಏನು ಮುಂದಿನ ನಡೆ? ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ, ಏನು ಮುಂದಿನ ನಡೆ?

ಚಾಣಾಕ್ಯ ತರಬೇತಿ ಯೋಜನೆ (ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಹಾಯ), ಸನ್ನಿಧಿ ಯೋಜನೆ (ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸುವುದು), ಸರ್. ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ (ಸ್ವಯಂ ಉದ್ಯೋಗ ತರಬೇತಿ), ಪುರುಷೋತ್ತಮ ಯೋಜನೆ (ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು).

ಅನ್ನದಾತ ಯೋಜನೆ (ಕೃಷಿಗೆ ನೆರವು), ಸೌಖ್ಯ ಯೋಜನೆ (ವೃದ್ಧರಿಗೆ ನೆರವು), ಕಲ್ಯಾಣ ಯೋಜನೆ (ಉಪನಯನ ಹಾಗೂ ವಿವಾಹಾದಿ ಶುಭಕಾರ್ಯಕ್ಕೆ ನೆರವು), ಚೈತನ್ಯ ಉತ್ಸವ ಯೋಜನೆ (ಬ್ರಾಹ್ಮಣ ಯುವಕರ ಸಂಘಟನೆ).

ಈ ಮೇಲಿನ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅತೀ ಅಗತ್ಯ. ವಿಪ್ರ ಬಾಂಧವರು ಗ್ರಾಮ ಲೆಕ್ಕಿಗರನ್ನು, ಅಟಲ್ ಜನ ಸ್ನೇಹಿ ಕೇಂದ್ರ/ ನೆಮ್ಮದಿ ಕೇಂದ್ರ/ ತಾಲೂಕು ಕಚೇರಿಗಳಲ್ಲಿ ಈ ಯೋಜನೆಯಡಿ ಸಹಾಯ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು.

Recommended Video

ಎಷ್ಟ್ ದಿನ ಮೋಸ ಮಾಡ್ತಾರೋ ಮಾಡ್ಲಿ!! | Oneindia Kannada

ವಾರ್ಷಿಕ ಆದಾಯ 8 ಲಕ್ಷ ರೂ. ಒಳಗೆ ಇರುವವರು Economically Weaker Section Certificate ಸಲ್ಲಿಕೆ ಮಾಡಿ, ಯೋಜನೆಯ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Karnataka State Brahmin Development Board come up with various scheme to help community people. People can get help by the scheme by submitting economically weaker section income certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X