ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳೇ, RSS ನಿಮಗೆ ಯಾವ ಬಹುಮಾನ ಕೊಡುತ್ತೆ?

By ಡಾ.ಹೆಚ್.ಸಿ.ಮಹದೇವಪ್ಪ
|
Google Oneindia Kannada News

ಹಿಂದುಳಿದ ವರ್ಗಗಳ ಏಳಿಗೆಯ ಕನಸನ್ನು ಕಾಯ್ದೆಗಳ ಮೂಲಕ ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ ಕಾಂಗ್ರೆಸ್ ಸರ್ಕಾರದ ಒಂದೊಂದೇ ಯೋಜನೆಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕೊನೆಗೊಳಿಸುತ್ತಿದೆ.

ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸಂಬಂಧಿಸಿದ SCP/STP ಕಾಯ್ದೆಯ ಅನುದಾನವನ್ನು ಸರಿಯಾಗಿ ಬಳಸದೇ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ರಾಜ್ಯ ಸರ್ಕಾರವು ಶೋಷಿತರ ಹಿತಕ್ಕೆ ವಿರುದ್ಧವಾದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾ ಬಂದಿದೆ.

ಕೇದಾರನಾಥ ದೇವಾಲಯದ ಜೀರ್ಣೋದ್ದಾರ: ಪ್ರಧಾನಿಗೆ ದೇವೇಗೌಡರ ಶಹಬ್ಬಾಸ್ ಗಿರಿಕೇದಾರನಾಥ ದೇವಾಲಯದ ಜೀರ್ಣೋದ್ದಾರ: ಪ್ರಧಾನಿಗೆ ದೇವೇಗೌಡರ ಶಹಬ್ಬಾಸ್ ಗಿರಿ

ಇದೀಗ ಇದೇ ಸಾಲಿಗೆ ಹಿಂದುಳಿದ ವರ್ಗಗಳಲ್ಲಿರುವ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ಹಾಗೂ ಅತೀ ಹಿಂದುಳಿದ ಸಮುದಾಯಗಳ ಕುರಿತು ಕುಲ ಶಾಸ್ತ್ರೀಯ ಅಧ್ಯಯನ ನಡೆಸುವಂತಹ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ನಿರ್ಣಯವನ್ನು ಕೈಗೊಂಡಿರುವ ರಾಜ್ಯ ಸರ್ಕಾರವು ಶೋಷಿತ ವರ್ಗಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತುಗಳು ಮುನ್ನಲೆಗೆ ಬರಬಾರದೆಂಬ ದುರುದ್ದೇಶದಿಂದ ಈ ಸಮುದಾಯ ವಿರೋಧಿ ಕೆಲಸವನ್ನು ಮಾಡುತ್ತಿದೆ.

Bommai Government Heading Towards Closing Devaraju Arasu Research Institue: Dr. H C Mahadevappa Reaction

ಬಹಳಷ್ಟು ಅಲಕ್ಷಿತ ಸಮುದಾಯಗಳಿಗೆ ಈಗಲೂ ಅವರ ಹಿನ್ನೆಲೆಯ ಬಗ್ಗೆ ಅಧ್ಯಯನ ನಡೆಸಿ ಅವರ ಕುಂದು ಕೊರತೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಿಕೊಳ್ಳಬೇಕಾದ ಜರೂರಿದೆ. ಹೀಗಿದ್ದರೂ ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಸಂಸ್ಥೆಗಳನ್ನೇ ಮುಚ್ಚುವ ಕೆಲಸ ಮಾಡುವ ರಾಜ್ಯ ಸರ್ಕಾರದ ಅವಿವೇಕತನಕ್ಕೆ ಏನು ಹೇಳಬೇಕು.

ಮುಖ್ಯಮಂತ್ರಿಗಳೇ, ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಕೆಲಸ ಮಾಡುವ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚಿದರೆ ಆರ್ ಎಸ್ ಎಸ್ ನಲ್ಲಿ ನಿಮಗೆ ಯಾವ ಬಹುಮಾನ ಕೊಡುತ್ತಾರೆ?

ನಿಮ್ಮ ಈ ಕೆಟ್ಟ ಆಡಳಿತಾತ್ಮಕ ನಿರ್ಧಾರಗಳನ್ನು ನೋಡುತ್ತಿದ್ದರೆ ನಿಮಗೆ ಆಡಳಿತ ನಡೆಸಲು ಬರುವುದಿಲ್ಲ ಎಂಬ ಸಂಗತಿ ಸ್ಪಷ್ಟವಾಗಿದೆ. ನಿಮ್ಮ ಹುಚ್ಚು ನಿರ್ಧಾರದಿಂದ ಹಿಂದುಳಿದ ವರ್ಗದ ಜನರ ಹಿತವನ್ನು ಬಲಿ ಕೊಡುವ ಬದಲು ರಾಜೀನಾಮೆ ನೀಡಿ ಹೊರಡಿ ಎಂದು ಈ ಮೂಲಕ ಆಗ್ರಹಿಸುತ್ತೇನೆ!

ತಾವೇ ಅಧಿಕಾರದಲ್ಲಿದ್ದರೂ ದಲಿತರನ್ನು ಮುಖ್ಯಮಂತ್ರಿಯನ್ನಾಗಿಸದೇ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುವ @BJP4Karnataka ಪಕ್ಷದವರಿಗೆ ದಲಿತರ ಪರವಾಗಿ ಅತಿ ಹೆಚ್ಚು ಕೆಲಸ ಮಾಡಿದ @siddaramaiah ಅವರ ಬದ್ಧತೆಯನ್ನು ಕಂಡರೆ ನಡುಕ ಉಂಟಾಗುತ್ತದೆ. ರಾಜ್ಯದ ಜನರಿಗೆ ಸಹಾಯ ಮಾಡಲಾಗದ ನಿಮಗೆ @siddaramaiah ಅವರ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ!

English summary
Bommai Government Heading Towards Closing Devaraju Arasu Research Institue: Dr. H C Mahadevappa Reaction. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X