ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಶಾಲೆಗಳಿಗೆ ಬೆದರಿಕೆ: ಪಾಕಿಸ್ತಾನದಿಂದ ಬೆದರಿಕೆ ಇ ಮೇಲ್ ರವಾನೆ, ತನಿಖೆಯಲ್ಲಿ ಪತ್ತೆ!

|
Google Oneindia Kannada News

ಬೆಂಗಳೂರು, ಏ. 24: ಬೆಂಗಳೂರು ನಗರದ ಪ್ರತಿ‍ಷ್ಠಿತ ಶಾಲೆಗಳಿಗೆ ಏ. 8 ರಂದು ಹಾಕಿದ್ದ ಬಾಂಬ್ ಬೆದರಿಕೆ ಮೂಲವನ್ನು ಬೆಂಗಳೂರ ಪೊಲೀಸರು ಪತ್ತೆ ಮಾಡಿದ್ದಾರೆ. ಅವು ಹುಸಿ ಬಾಂಬ್ ಕರೆಯಲ್ಲ. ಪಾಕಿಸ್ತಾನದಿಂದ ಬೆದರಿಕೆ ಇ ಮೇಲ್ ರವಾನಿಸಿರುವ ಸ್ಫೋಟಕ ಅಂಶ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಏಪ್ರಿಲ್ 8 ರಂದು ರಾಜಧಾನಿ ಬೆಂಗಳೂರಿನ 9 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ ಮೇಲ್ ರವಾನಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು ಎಲ್ಲಾ ಶಾಲೆಗಳಲ್ಲಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದೇ ಹೇಳಿದ್ದರು. ಆದರೆ, ಇ ಮೇಲ್‌ನ ಜಾಡು ಹಿಡಿದು ತನಿಖೆ ನಡೆಸಿದಾಗ ಪಶ್ಚಿಮ ರಾಷ್ಟ್ರಗಳಿಂದ ಬೆದರಿಕೆ ಇ ಮೇಲ್ ರವಾನೆಯಾಗಿರುವ ಸ್ಫೋಟಕ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಇ- ಮೇಲ್ ಮೂಲಕ ಬಾಂಬ್ ಬೆದರಿಕೆ: ಬೆಂಗಳೂರಿನ 6 ಶಾಲೆಗಳಲ್ಲಿ ತೀವ್ರ ಶೋಧ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ: ಬೆಂಗಳೂರಿನ 6 ಶಾಲೆಗಳಲ್ಲಿ ತೀವ್ರ ಶೋಧ

ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಇ ಮೇಲ್ ಪಾಕಿಸ್ತಾನದಿಂದ ಬಂದಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಮೇಲ್(mail) ಸರ್ವರ್ ಜಾಡು ಹಿಡಿದು ತನಿಖೆ ನಡೆಸಿದಾಗ ಪಶ್ಚಿಮ ದಿಕ್ಕಿನ ರಾಷ್ಟ್ರದಿಂದ ಬೆದರಿಕೆ ಇ ಮೇಲ್ ಬಂದಿರುವುದು ಗೊತ್ತಾಗಿದೆ. ಈ ಕುರಿತ ತಾಂತ್ರಿಕ ದಾಖಲೆಗಳನ್ನು ಗೂಗಲ್ ಸಂಸ್ಥೆಯಿಂದ ಬೆಂಗಳೂರು ಪೊಲೀಸರು ಕಲೆ ಹಾಕಿದ್ದಾರೆ. ಐಪಿ ಅಡ್ರೆಸ್ ಆಧರಿಸಿ ಮಾಹಿತಿ ಪಡೆದಾಗ ಈ ವಿಚಾರ ಬೆಳಕಿಗೆ ಬಂದಿದೆ.

 ವಿದೇಶಿ ಸರ್ವರ್ ಹಾಕ್ ಮಾಡಿ ಶಾಲೆಗಳಿಗೆ ಬೆದರಿಕೆ?

ವಿದೇಶಿ ಸರ್ವರ್ ಹಾಕ್ ಮಾಡಿ ಶಾಲೆಗಳಿಗೆ ಬೆದರಿಕೆ?

ಒಂದು ಅನುಮಾನ: ವಿದೇಶಿ ಸರ್ವರ್ ಹಾಕ್ ಮಾಡಿ ಶಾಲೆಗಳಿಗೆ ಬೆದರಿಕೆ ಹಾಕಿರುವ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಇದೀಗ ಐಪಿ ಅಡ್ರೆಸ್ ಜಾಡು ಹಿಡಿದು ತನಿಖೆ ಆರಂಭಿಸಿದ್ದು, ಒಂದು ವೇಳೆ ಪಾಕಿಸ್ತಾನದಿಂದಲೇ ಬಂದಿರುವುದಕ್ಕೆ ಮತ್ತಷ್ಟು ಸಾಕ್ಷಿಗಳು ಲಭ್ಯವಾದರೆ, ಪ್ರಕರಣವನ್ನು ಎನ್ಐಎ ಸಂಸ್ಥೆಗೆ ವಹಿಸಲಿದ್ದಾರೆ. ಒಂದು ವೇಳೆ ಸರ್ವರ್ ಹ್ಯಾಕ್ ಮಾಡಿ ಪಾಕಿಸ್ತಾನ ಸರ್ವರ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದು ದೃಢಪಟ್ಟರೆ ಬೆಂಗಳೂರು ಪೊಲೀಸರೇ ಆರೋಪಿಗಳನ್ನು ಪತ್ತೆ ಮಾಡಲಿದ್ದಾರೆ.

 ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್

ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್

ಪಶ್ಚಿಮ ರಾಷ್ಟ್ರವೊಂದರಿಂದ ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದೇ ವಿಚಾರವನ್ನು ಮಾಧ್ಯಮಗಳ ಪ್ರಶ್ನೆಗೆ ಪುನರುಚ್ಚರಿಸಿದ್ದಾರೆ. ಕೇವಲ ಹುಸಿ ಬಾಂಬ್ ಬೆದರಿಕೆ ಎಂದೇ ಭಾವಿಸಿದ್ದ ಬೆಂಗಳೂರು ಪೊಲೀಸರು ಇ ಮೇಲ್ ಬಾಂಬ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಏ. 8 ರಂದು ಬೆಚ್ಚಿ ಬಿದ್ದಿದ್ದ ಬೆಂಗಳೂರು

ಏ. 8 ರಂದು ಬೆಚ್ಚಿ ಬಿದ್ದಿದ್ದ ಬೆಂಗಳೂರು

ಏ. 8 ರಂದು ಬೆಚ್ಚಿ ಬಿದ್ದಿದ್ದ ಬೆಂಗಳೂರು. ಏ. 8 ರಂದು ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿತ್ತು. ಬೆಳಗ್ಗೆ 11 ರ ಸುಮಾರಿಗೆ ಕೆಲವು ಶಾಲೆಗಳ ಅಧಿಕೃತ ಇ ಮೇಲ್ ಗೆ ಬೆದರಿಕೆ ಇ ಮೇಲ್ ರವಾನಿಸಲಾಗಿತ್ತು. [email protected] ಎಂಬ ಇ ಮೇಲ್ ನಿಂದ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಬೆದರಿಕೆ ಇ ಮೇಲ್ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರು ಶಾಲೆಗಳಿಗೆ ಬಾಂಬ್ ಪತ್ತೆ ದಳದೊಂದಿಗೆ ಪೊಲೀಸರು ತೆರಳಿ ತಪಾಸಣೆ ನಡೆಸಿದರು. ಆ ಬಳಿಕೆ ಬೆದರಿಕೆ ಬಂದಿರುವುದು ಕೇವಲ ಆರು ಶಾಲೆಗಳಿಗೆ ಅಲ್ಲ, 15 ಕ್ಕೂ ಹೆಚ್ಚು ಶಾಲೆಗಳಿಗೆ ಎಂಬ ಸಂಗತಿ ಹೊರ ಬಂದಿತ್ತು.

 15 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ

15 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ

ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ಗೋವಿಂದಪುರದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆ, ಹೆಬ್ಬಗೋಡಿಯಲ್ಲಿರುವ ಎಬಿನೈಸರ್ ಇಂಟರ್ ನ್ಯಾಷನಲ್ ಸ್ಕೂಲ್ , ವರ್ತೂರು ಬಳಿ ಇರುವ ಡೆಲ್ಲಿ ಪಬ್ಲಿಕ್ ಶಾಲೆ , ಹೆಣ್ಣೂರು ಬಳಿಯಿರುವ ವಿನ್ಸೆಂಟ್ ಶಾಲೆ ಸೇರಿದಂತೆ 15 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇ ಮೇಲ್ ರವಾನಿಸಿದ್ದು ಉಲ್ಲೇಖಾರ್ಹ. ಪೊಲೀಸರ ತಪಾಸಣೆ ವೇಳೆ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ.

Recommended Video

8 ಸೋಲಿನೊಂದಿಗೆ IPL ಟೂರ್ನಿಯಿಂದ ಹೊರ ಬಿದ್ದಿದ್ದಕ್ಕೆ ರೋಹಿತ್ ಶರ್ಮಾ ಏನಂದ್ರು ನೋಡಿ | Oneindia Kannada

English summary
Bengaluru schools Bomb threat case: It is not a hoax call, A police investigation has revealed that e-mail was sent by Pakistan to bomb threats to schools in Bangalore know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X