ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ

|
Google Oneindia Kannada News

ಚಿಕ್ಕಮಗಳೂರು, ಜ 21: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಪೊಲೀಸರನ್ನು ದೂರಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಜೀವ ಬಾಂಬ್ ಪತ್ತೆಯಾಗಿದ್ದ ವಿಚಾರದಲ್ಲೂ ಪೊಲೀಸರ ವಿರುದ್ದ ಸಂಶಯ ವ್ಯಕ್ತ ಪಡಿಸಿದ್ದಾರೆ.

Recommended Video

ರಾಕೆಟ್ ಲ್ಯಾಂಡ್ ಆಗ್ತಿದ್ದಂತೆ ಜನರಲ್ಲಿ ಆತಂಕ | Iran | USA | Embassy | War | Oneindia Kannada

ಶೃಂಗೇರಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ವಿಚಾರದಲ್ಲಿ ನನಗೆ ಪೊಲೀಸರ ಮೇಲೆಯೇ ಅನುಮಾನವಿದೆ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಶಂಕಿತನ ಚಿತ್ರ ಬಿಡುಗಡೆಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಶಂಕಿತನ ಚಿತ್ರ ಬಿಡುಗಡೆ

"ಸರಕಾರ ಮತ್ತು ಪೊಲೀಸರು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡಬಾರದು. ನನಗೆ ಕೆಲವು ಪೊಲೀಸರ ಮೇಲೆ ನಂಬಿಕೆಯಿಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Bomb Found In Mangaluru Airport: Former CM HD Kumaraswamy Reaction

"ಸಮಾಜದಲ್ಲಿ ಅಪನಂಬಿಕೆ ಉಂಟಾಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಆದರೆ, ಬಿಜೆಪಿಯವರು ಜಾತಿಜಾತಿಯ ನಡುವೆ ಬೆಂಕಿ ಹಚ್ಚುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

"ಬಾಂಬ್ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಘಟನೆಯ ಸತ್ಯಾಸತ್ಯತೆಯನ್ನು ಪೊಲೀಸರು ಜನರ ಮುಂದೆ ಇಡಬೇಕು. ಘಟನೆ ನಡೆದ ಹದಿನೈದು ದಿನಗಳಲ್ಲಿ ಇನ್ನೊಂದು ಕಥೆಯನ್ನು ಹುಟ್ಟು ಹಾಕಬಾರದು" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಾಹಿತಿಯೇ ಇಲ್ಲದ ಮೇಲೆ ಅಮಿತ್ ಶಾ ಆ ಪದ ಬಳಸಿದ್ದು ತಪ್ಪಲ್ಲವೇ? ಮಾಹಿತಿಯೇ ಇಲ್ಲದ ಮೇಲೆ ಅಮಿತ್ ಶಾ ಆ ಪದ ಬಳಸಿದ್ದು ತಪ್ಪಲ್ಲವೇ?

"ಸರಕಾರಕ್ಕೆ ನನ್ನ ಮನವಿ ಇಷ್ಟೇ. ಒಂದು ವರ್ಗವನ್ನು ಓಲೈಸಿಕೊಳ್ಳಲು, ಇನ್ನೊಂದು ಸಮಾಜಕ್ಕೆ ತೊಂದರೆಯನ್ನು ಕೊಡಬೇಡಿ. ಸತ್ಯ ಏನಿದೆಯೋ ಅದನ್ನು ಜನತೆಯ ಮುಂದಿಡಿ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

English summary
Bomb Found In Mangaluru Airport: Former Chief Minister HD Kumaraswamy Reaction In Sringeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X