ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿ

|
Google Oneindia Kannada News

Recommended Video

ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜನವರಿ 07: ಕಾಂಗ್ರೆಸ್‌ ನೀಡಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ಅಂಕಿತ ಹಾಕಿದ್ದಾರೆ. ಆದರೆ ಕಾಂಗ್ರೆಸ್‌ ನೀಡಿದ ಪೂರ್ಣ ಪಟ್ಟಿಗೆ ಒಪ್ಪಿಗೆಯನ್ನು ಕೊಟ್ಟಿಲ್ಲ.

ಹೌದು, ಕಾಂಗ್ರೆಸ್ ಪಕ್ಷವು ತನ್ನ 20 ಶಾಸಕರ ಪಟ್ಟಿಯನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಪಟ್ಟಿಯನ್ನು ಸಿಎಂ ಕುಮಾರಸ್ವಾಮಿ ಅಂಕಿತಕ್ಕೆ ನೀಡಿತ್ತು. ಆದರೆ ಕುಮಾರಸ್ವಾಮಿ ಅವರು ಐದು ಜನ ಶಾಸಕರನ್ನು ಬಿಟ್ಟು ಉಳಿದ ಶಾಸಕರ ಹೆಸರುಗಳಿಗೆ ಮಾತ್ರವೇ ಅಂಕಿತ ಹಾಕಿದ್ದಾರೆ.

14 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ14 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

ಕುಮಾರಸ್ವಾಮಿ ಅವರ ಈ ನಡೆ ಕಾಂಗ್ರೆಸ್‌ಗೆ ಭಾರಿ ಶಾಕ್ ನೀಡಿದ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್, ಗಮನಿಸಬೇಕಾದ್ದೆಂದರೆ ಕುಮಾರಸ್ವಾಮಿ ಅಂಕಿತ ಹಾಕದ ಐದೂ ಜನ ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಿಗರು.

ಕಾಂಗ್ರೆಸ್ ಖಡಕ್ ಸಂದೇಶ ರವಾನಿಸಿದ ಎಚ್‌ಡಿಕೆ

ಕಾಂಗ್ರೆಸ್ ಖಡಕ್ ಸಂದೇಶ ರವಾನಿಸಿದ ಎಚ್‌ಡಿಕೆ

ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಕೈಬಿಡುವ ಮೂಲಕ ಕುಮಾರಸ್ವಾಮಿ ಅವರು 'ನಾನು ಕಾಂಗ್ರೆಸ್‌ ಹೇಳಿಯದಂತೆ ಕುಣಿಯೆನು' ಎಂದು ಕಾಂಗ್ರೆಸ್‌ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕುಮಾರಸ್ವಾಮಿ ಅವರ ಈ ನಡೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆಶ್ಚರ್ಯ ಉಂಟುಮಾಡಿದೆ.

ರೇವಣ್ಣ-ದಿನೇಶ್ ಗುಂಡೂರಾವ್ ನಡುವೆ ಮಾತಿನ ಸಮರ ರೇವಣ್ಣ-ದಿನೇಶ್ ಗುಂಡೂರಾವ್ ನಡುವೆ ಮಾತಿನ ಸಮರ

ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌

ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್‌

ಕುಮಾರಸ್ವಾಮಿ ಅವರು ಐದು ಜನ ಶಾಸಕರನ್ನು ಕೈಬಿಡಲು ಏನು ಕಾರಣ ಎಂದು ತಿಳಿದುಬಂದಿಲ್ಲ. ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಕುಮಾರಸ್ವಾಮಿ ಅವರು ಈ ತಂತ್ರ ಅನುಸರಿಸಿದ್ದಾರೆ ಎನ್ನಲಾಗುತ್ತಿದೆ. ಶಾಸಕ ಸುಧಾಕರ್ ಅವರು ಮೊದಲಿನಿಂದಲೂ ಕುಮಾರಸ್ವಾಮಿ ವಿರುದ್ಧ ಗುಟುರು ಹಾಕುತ್ತಿದ್ದರು, ಅವರ ಹೆಸರು ಕೈಬಿಡುವ ಹಿಂದೆ ದ್ವೇಷದ ಕಾರಣ ಇರಬಹುದೇ ಎಂಬ ಅನುಮಾನವೂ ಇದೆ.

'ಕುಠಾರಸ್ವಾಮಿ' ಎಂದ ಚಂಪಾಗೆ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ 'ಕುಠಾರಸ್ವಾಮಿ' ಎಂದ ಚಂಪಾಗೆ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ

ಕಾಂಗ್ರೆಸ್‌ಗೆ ಕಾರಣವೇ ಗೊತ್ತಿಲ್ಲ

ಕಾಂಗ್ರೆಸ್‌ಗೆ ಕಾರಣವೇ ಗೊತ್ತಿಲ್ಲ

ತಮ್ಮ ಪ್ರಮುಖ ಐದು ಜನ ಶಾಸಕರ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಸಿದ್ದರಾಮಯ್ಯ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ ಆದರೆ ಪರಮೇಶ್ವರ್ ಅವರು ಮಾತನಾಡಿದ್ದು, ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದಿದ್ದಾರೆ. ಶಾಸಕರ ಹೆಸರನ್ನು ಕೈಬಿಟ್ಟಿದ್ದಕ್ಕೆ ಸ್ಪಷ್ಟ ಕಾರಣ ತಮಗೂ ಗೊತ್ತಿಲ್ಲವೆಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ನಟರ ಮನೆ ಮೇಲೆ ಐಟಿ ದಾಳಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದೇನು?ನಟರ ಮನೆ ಮೇಲೆ ಐಟಿ ದಾಳಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದೇನು?

ಸಮನ್ವಯ ಸಮಿತಿ ನಿರ್ಣಯಕ್ಕೆ ವಿರುದ್ಧ?

ಸಮನ್ವಯ ಸಮಿತಿ ನಿರ್ಣಯಕ್ಕೆ ವಿರುದ್ಧ?

ನಿಗಮ ಮಂಡಳಿಗಳ ಅನುಪಾತ ಮತ್ತು ಹಂಚಿಕೆ ಸಮನ್ವಯ ಸಮಿತಿಯಲ್ಲಿ ಆಗಿರುವ ನಿರ್ಣಯ, ಆ ಸಮಿತಿಯಲ್ಲಿ ಕುಮಾರಸ್ವಾಮಿ ಅವರೂ ಇದ್ದಾರೆ. ಆದರೆ ಈಗ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಶಾಸಕರ ಹೆಸರನ್ನು ಕೈಬಿಟ್ಟು ಸಮನ್ವಯ ಸಮಿತಿಯ ನಿರ್ಣಯವನ್ನು ಗಾಳಿಗೆ ತೂರಿದ್ದಾರೆ. ಇದು ಎರಡೂ ಪಕ್ಷಗಳ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡುವ ಸಾಧ್ಯತೆ ಇದೆ.

ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ?

ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ?

ಕುಮಾರಸ್ವಾಮಿ ಅವರ ಈ ಏಕಪಕ್ಷೀಯ ನಿರ್ಧಾರ ಮತ್ತು ಈ ನಿರ್ಧಾರದ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೆ ಮಾಹಿತಿಯೇ ಇಲ್ಲದಿರುವುದು ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಕುಮಾರಸ್ವಾಮಿ ಅವರ ಈ ಹಠಾತ್ ನಡೆ ಮೈತ್ರಿ ಪಕ್ಷಗಳ ನಡುವೆ ಇನ್ನಷ್ಟು ಕಂದರ ನಿರ್ಮಿಸುವ ಸಾಧ್ಯತೆ ದಟ್ಟವಾಗಿದೆ.

English summary
Kumaraswamy left out 5 congress MLAs name from Board and corporation list which given by congress to approval. This may create dissent between both the coalition parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X