ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿಯ ಕಲ್ಯಾ ಗ್ರಾಮದಲ್ಲಿ ವಾಮಾಚಾರಿಗಳ ಕಾಟ

By ಪೂರ್ಣಚಂದ್ರ ಮಾಗಡಿ
|
Google Oneindia Kannada News

ಇಂದಿನ ವೈಜ್ಞಾನಿಕ ಯುಗದಲ್ಲೂ ವಾಮಾಚಾರ ಎಂದರೆ ಜನರು ಬೆಚ್ಚಿ ಬೀಳುತ್ತಾರೆ. ರಾಮನಗರದ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದಲ್ಲಿ ನಿರಂತರವಾಗಿ ವಾಮಾಚಾರ ನಡೆಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ.

ನೂರಕ್ಕೂ ಹೆಚ್ಚು ಮನೆಗಳಿರುವ ಕಲ್ಯಾ ಗ್ರಾಮದಲ್ಲಿ ಕಂಡಕ್ಟರ್ ರಾಜಣ್ಣರ ಮನೆಯ ಮುಂದೆ ಮೂರು ಬಾರಿ ವಾಮಾಚಾರ ನಡೆದಿದೆ. ಮೂರು ದಿನಗಳ ಹಿಂದೆ ನಡೆದ ವಾಮಾಚಾರದ ಸಂದರ್ಭದಲ್ಲಿ ಹಂದಿಯ ರಕ್ತದಲ್ಲಿ ''ನೀನು ಸಾಯಬೇಕು'' ಎಂದು ಬರೆದಿರುವುದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.

Black magic

ಈಗಾಗಲೇ ಮೂರು ಬಾರಿ ರಾಜಣ್ಣ ಮನೆಯ ಮುಂದೆ ವಾಮಾಚಾರ ನಡೆಸಲಾಗಿದೆ. ಮೊದಲು ಮಡಿಕೆಯಲ್ಲಿ ವಾಮಾಚಾರ ಮಾಡಲಾಗಿತ್ತು. ಮತ್ತೊಂದು ಬಾರಿ ಮಣ್ಣಿನಲ್ಲಿ ಮಾನವ ಆಕೃತಿ ಮಾಡಿ ತಾಳಿ ಕರಿಮಣಿ ಹಾಕಿ, ತೆಂಗಿನಗರಿಯಲ್ಲಿ ಚಟ್ಟದ ಆಕೃತಿಯಲ್ಲಿ ಬೊಂಬೆಯನ್ನು ಕೂರಿಸಿ ಹೊಸ ಬಿಳಿ ಬಟ್ಟೆಗಳನ್ನು ಸುಟ್ಟು ಕೂದಲುಗಳನ್ನಿಟ್ಟಿದ್ದರು. [ಸರ್ಕಾರದ ರಕ್ಷಣೆಗೆ ಮಾಟ, ಮಂತ್ರ, ವಾಮಾಚಾರ?]

ಮೂರು ದಿನಗಳ ಹಿಂದೆ ವಾಚಾರದ ಜೊತೆಗೆ ಹಂದಿಯ ರಕ್ತದಲ್ಲಿ ''ನೀನು ಸಾಯಬೇಕು'' ಎಂದು ಬರೆದಿಟ್ಟಿದ್ದಾರೆ. ಮಧ್ಯರಾತ್ರಿಯಲ್ಲಿ ಈ ವಾಮಾಚಾರ ನಡೆದಿದ್ದು, ಬೆಳಗ್ಗೆ ಬಾಗಿಲು ತೆರೆದಾಕ್ಷಣ ಮನೆಯವರು ಇದನ್ನು ನೋಡಿ ಆತಂಕ ಗೊಂಡಿದ್ದಾರೆ. ಗ್ರಾಮದ ಜನರು ವಾಮಚಾರ ಮಾಡಿದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. [ಮೂಢನಂಬಿಕೆ ಚಕ್ರಸುಳಿಯಲ್ಲಿ ಕಳ್ಳಿಪಾಳ್ಯ ಗ್ರಾಮಸ್ಥರು]

ಯಾವಾಗಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಹತ್ತಿರವಾದಾಗ ರಾಜಣ್ಣ ಮನೆಯ ಮುಂದೆ ವಾಮಾಚಾರ ನಡೆಯುತ್ತಿತ್ತು. ಆದರೆ, ಈ ಬಾರಿ ಅಮಾವಾಸ್ಯೆ ಹತ್ತಿರವಾದಾಗ ಗ್ರಾಮಸ್ಥರು ವಾಮಾಚಾರಿಗಳನ್ನು ಹಿಡಿಯಲು ಕಾದು ಕುಳಿತಿದ್ದರು. ಆದ್ದರಿಂದ ಮಂಗಳವಾರ ರಾತ್ರಿ ಮಾಟಮಂತ್ರ ಮಾಡಿ ಮನೆಯ ಬಾಗಿಲ ಬಳಿ ತಂದುಹಾಕಲಾಗಿದೆ.

ಕಾಕತಾಳೀಯ ಎಂಬಂತೆ ಈ ವಾಮಾಚಾರ ನಡೆದ ನಂತರ ಮನೆಯ ಕೆಲವು ಮಂದಿಗೆ ಕೈಕಾಲು ನೋವು ಸೇರಿದಂತೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಮಾಟ ಮಂತ್ರದಿಂದ ಹೆದರದಂತೆ ರಾಜಣ್ಣ ಕುಟುಂಬದವರಿಗೆ ಮನವಿ ಮಾಡಿದ್ದೇವೆ. ಈಗಾಲಗೇ ಮೂರು ಬಾರಿ ಇಂತಹ ಕೃತ್ಯ ನಡೆದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮಸ್ಥರು ಮತ್ತು ರಾಜಣ್ಣ ಕುಟುಂಬದವರು ಸೇರಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಟ ಮಂತ್ರ ಎಂದು ಜನರನ್ನ ಬೆದರಿಸುವ ಮಂದಿ ಕೈಗೆ ಸಿಕ್ಕರೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಕಲ್ಯಾ ಗ್ರಾಮದ ಜನರು ಕಾದು ಕುಳಿತಿದ್ದಾರೆ.

English summary
Practice of black magic still going on in Ramanagar district Magadi taluk Kalya village. Anonymous performing black magic in front of conductor Rajanna house in village for three times. Villagers field complaint in Magadi police station about this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X