ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ವರ್ತೂರು ಪ್ರಕಾಶ್ ಮನೆ ಬಳಿ ವಾಮಾಚಾರ!

|
Google Oneindia Kannada News

ಕೋಲಾರ, ಮೇ 13 : ಕರ್ನಾಟಕದಲ್ಲಿ ಮತ್ತೆ ಮಾಟ-ಮಂತ್ರದ ರಾಜಕೀಯ ಆರಂಭವಾಗಿದೆ. ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮನೆಯ ಸಮೀಪ ವಾಮಾಚಾರ ನಡೆದಿದೆ. ಜೆಡಿಎಸ್ ನಾಯಕರು ಇದನ್ನು ಮಾಡಿಸಿದ್ದಾರೆ ಎಂದು ಶಾಸಕರ ಅಭಿಮಾನಿಗಳು ಆರೋಪಿಸಿದ್ದಾರೆ.

ಕೋಲಾರ ಬೈರೇಗೌಡ ನಗರದಲ್ಲಿರುವ ವರ್ತೂರು ಪ್ರಕಾಶ್ ಅವರ ಮನೆಯ ಸಮೀಪ ಬುಧವಾರ ಬೆಳಗ್ಗೆ ಅರಿಶಿನ, ಕುಂಕುಮ, ಮೇಕೆ ತಲೆ, ಮಡಿಕೆ ಪತ್ತೆಯಾಗಿದೆ. ಶಾಸಕರಿಗೆ ಕೆಡುಕು ಉಂಟು ಮಾಡಲು ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. [ಅಧಿಕಾರಿಗೆ ಬೆದರಿಕೆ ಹಾಕಿದ ವರ್ತೂರು ವಿರುದ್ಧ ದೂರು]

varthur prakash

ವರ್ತೂರು ಪ್ರಕಾಶ್ ಬೆಂಬಲಿಗರಾದ ವಕ್ಕಲೇರಿ ರಾಜಪ್ಪ ಅವರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶಾಸಕರ ಜನಪರ ಕಾರ್ಯಗಳನ್ನು ಸಹಿಸದೆ ವಿರೋಧಿಗಳು ವಾಮಾಚಾರದ ಮೊರೆ ಹೋಗಿದ್ದಾರೆ ಎಂದು ದೂರಿದರು. [ವಾಮಾಚಾರ ಹೆಸರಿನಲ್ಲಿ ಭಯ ಹುಟ್ಟಿಸುವ ಸಿಎಂ]

ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣೆಯಲ್ಲಿ ಶಾಸಕರ ಬೆಂಬಲಿಗರನ್ನು ಮಣಿಸಲು ಜೆಡಿಎಸ್ ಪಕ್ಷದವರು ಈ ವಾಮಾಚಾರ ಮಾಡಿಸಿದ್ದಾರೆ ಎಂದು ರಾಜಪ್ಪ ಆರೋಪಿಸಿದರು. [ಪರಮೇಶ್ವರ, ದೇವೇಗೌಡ ನಡುವೆ ನಿಂಬೆಹಣ್ಣು, ಬಟ್ಟೆ ಜಗಳ!]

ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ವರ್ತೂರು ಪ್ರಕಾಶ್ ವಿರುದ್ಧ ತನಿಖೆ ನಡೆಯುತ್ತಿದೆ. ಮತ್ತೊಂದು ಕಡೆ ಅವರ ವಿರುದ್ಧ ಅಕ್ರಮ ಆಸ್ತಿಗಳಿಗೆ ದೂರು ದಾಖಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಅವರ ಮನೆ ಬಳಿ ವಾಮಾಚಾರ ನಡೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

English summary
Some miscreants performed black magic rituals near Kolar MLA Varthur Prakash house on Tuesday night. Varthur Prakash supporters said, black magic performed by JDS leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X