ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!

|
Google Oneindia Kannada News

ಚಾಮರಾಜನಗರ, ಮೇ 07 : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ ಕರಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ವಲಯದಲ್ಲಿ ಎರಡು ಕರಿ ಚಿರತೆಗಳು ಸಂಚಾರ ನಡೆಸುತ್ತಿರುವ 24 ಛಾಯಾಚಿತ್ರಗಳು ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ದಾಖಲಾಗಿವೆ.

ಬಂಡೀಪುರ ಉದ್ಯಾನದಲ್ಲಿ 100ಕ್ಕೂ ಅಧಿಕ ಹುಲಿಗಳು, ಅಪರೂಪದ ಪ್ರಾಣಿ ಪಕ್ಷಿಗಳಿವೆ. ಆದರೆ, ಇದೇ ಮೊದಲ ಬಾರಿಗೆ ಈ ಅರಣ್ಯ ವ್ಯಾಪ್ತಿಯಲ್ಲಿ ಕರಿ ಚಿರತೆಗಳು ಪತ್ತೆಯಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಅರಣ್ಯ ಇಲಾಖೆ ಇಟ್ಟಿದ್ದ ಕ್ಯಾಮರಾದಲ್ಲಿ ಚಿರತೆಗಳ ಚಲನವಲನ ಪತ್ತೆಯಾಗಿದೆ. [ನಾಗರಹೊಳೆ ಅಭಯಾರಣ್ಯದಲ್ಲಿವೆ 72 ಹುಲಿಗಳು]

leopard

4 ವರ್ಷಗಳ ಹಿಂದೆ ಬಂಡೀಪುರ ಮತ್ತು ಮಧುಮಲೈ ಹುಲಿ ರಕ್ಷಿತಾರಣ್ಯ ಪ್ರದೇಶದ ಹೆದ್ದಾರಿಯ ಬಂಡೆಯ ಮೇಲೆ ಕರಿಚಿರತೆ ಪತ್ತೆಯಾಗಿತ್ತು. ಆ ನಂತರದ ವರ್ಷಗಳಲ್ಲಿ ಕರಿ ಚಿರತೆ ಪತ್ತೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ನಾಗರಹೊಳೆ ಉದ್ಯಾನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ 2 ವರ್ಷದ ಹಿಂದೆ ಕರಿ ಚಿರತೆ ಪ್ರತ್ಯಕ್ಷವಾಗಿತ್ತು. ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ನಲ್ಲಿದ್ದ ಪ್ರವಾಸಿಗರು ಅದನ್ನು ನೋಡಿದ್ದರು. ಆದರೆ, ಬಂಡೀಪುರ ಅರಣ್ಯ ವಲಯದಲ್ಲಿ ಮೊದಲ ಬಾರಿ ಕರಿ ಚಿರತೆ ದರ್ಶನವಾಗಿದೆ. [ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ, ಗ್ರಾಮಸ್ಥರ ಚಿಂತೆ]

ಆಕರ್ಷಕ ಟೂರ್ ಪ್ಯಾಕೇಜ್ : ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ನೂತನ ಆಕರ್ಷಕ ರಜಾ ಪ್ಯಾಕೇಜ್‍ ಘೋಷಣೆ ಮಾಡಿದೆ. ಈ ವಿಶೇಷ ರಿಯಾಯಿತಿ ಮೇ ಮತ್ತು ಜೂನ್ ತಿಂಗಳುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕಬಿನಿ ರಿವರ್ ಲಾಡ್ಜ್, ಬಂಡೀಪುರ ಸಫಾರಿ ಲಾಡ್ಜ್ ಹಾಗೂ ಭೀಮೇಶ್ವರಿ ಅಡ್ವೆಂಚರ್ ಮತ್ತು ನೇಚರ್ ಕ್ಯಾಂಪ್ ಹೊರತು ಪಡಿಸಿ ಉಳಿದೆಲ್ಲಾ ಘಟಕಗಳಿಗೂ ಇದರು ಅನ್ವಯವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ www.junglelodges.com ಹಾಗೂ ಕೇಂದ್ರ ಕಚೇರಿಯನ್ನು 080-4055 4055 ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.

English summary
Surprise. Black leopard movements have been captured on trap cameras put up in the Bandipur National Park, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X