ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆ

|
Google Oneindia Kannada News

ನವದೆಹಲಿ, ಮೇ 22: ಕೊರೊನಾ ವೈರಸ್‌ ಹಲವಾರು ಹೊಸ ಕಾಯಿಲೆಗಳಿಗೆ ಜನ್ಮ ನೀಡಿದೆ. ದೇಶದಲ್ಲೀಗ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ತಗುಲುತ್ತಿರುವ ಬ್ಲ್ಯಾಕ್‌ ಫಂಗಸ್‌ ಸೋಂಕು ಈಗ ಸಾಂಕ್ರಾಮಿಕವಾಗಿ ಹರಡುತ್ತಿದೆ. ಮ್ಯೂಕೋರ್ಮೈಕೋಸಿಸ್ ಎಂದೂ ಕರೆಯಲ್ಪಡುವ ಕಪ್ಪು ಶಿಲೀಂಧ್ರವು ಸೋಂಕು ಆಗಿದ್ದರು ದೀರ್ಘಕಾಲದವರೆಗೆ ಸ್ಟೆರಾಯ್ಡ್‌ ಬಳಕೆ ಮಾಡುತ್ತಿರುವವರಿಗೆ, ಆಕ್ಸಿಜನ್‌ ಅಥವಾ ವೆಂಟಿಲೇಟರ್‌ ಬೆಂಬಲಿತ ರೋಗಿಗಳಿಗೆ, ಸ್ವಚ್ಛವಾಗಿರದ ಆಸ್ಪತ್ರೆಯಲ್ಲಿದ್ದವರಿಗೆ, ಮಧುಮೇಹದಂತಹ ಇತರ ಕಾಯಿಲೆಗಳಿಗೆ ಔಷಧಿ ಪಡೆಯುವವರಲ್ಲಿ ಈ ಸೋಂಕು ಕಂಡು ಬರುತ್ತದೆ. ಈಗ ಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ದಂತವೈದ್ಯರು ಸರಳವಾದ ಸಲಹೆಯನ್ನು ನೀಡಿದ್ದಾರೆ.

ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಬ್ಲ್ಯಾಕ್‌ ಫಂಗಸ್‌ ಸೋಂಕು ಮಾರಕ

ಕೊರೊನಾ ಸೋಂಕಿನ ಔಷಧಿಗಳು ಸೋಂಕಿತರ ದೇಹವನ್ನು ದುರ್ಬಲಗೊಳಿಸಬಹುದು. ಈ ಔಷಧಿಗಳು ಮಧುಮೇಹಿಗಳು ಮತ್ತು ಮಧುಮೇಹವಿಲ್ಲದ ಕೊರೊನಾ ರೋಗಿಗಳಲ್ಲಿನ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಬಹುದು. ಇದು ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಈ ಸೋಂಕು ಬಾರದಿರಲು ನಮ್ಮ ಹಲ್ಲನ್ನು ಶುಚಿಯಾಗಿರಿಸುವುದು ಅತೀ ಮುಖ್ಯ ಎಂದು ದಂತ ವೈದ್ಯರು ಹೇಳುತ್ತಾರೆ. ದಂತವೈದ್ಯರ ಪ್ರಕಾರ, ನಾವು ನಮ್ಮ ಹಲ್ಲನ್ನು ಶುಚಿಯಾಗಿ ಇರಿಸುವ ಮೂಲಕ ಬ್ಲ್ಯಾಕ್‌ ಫಂಗಸ್‌ ಸೋಂಕು ತಗಲುವುದನ್ನು ತಡೆಯಬಹುದಾಗಿದೆ.

ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ ಬ್ಲ್ಯಾಕ್ ಫಂಗಸ್; ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ

ಬ್ಲ್ಯಾಕ್‌ ಫಂಗಸ್‌ ಸೋಂಕಿನ ಲಕ್ಷಣಗಳೇನು?

ನಾಲಿಗೆ, ಒಸಡುಗಳು ಬಣ್ಣರಹಿತವಾಗುವುದು, ಮೂಗಿನಲ್ಲಿ ಉಸಿರಾಡಲು ಕಷ್ಟವಾಗುವುದು, ತೀವ್ರ ನೋವು, ಮುಖದಲ್ಲಿ ಊತ, ಕಣ್ಣುಗಳ ಕೆಳಗೆ ಜೋತು ಬೀಳುವುದು, ಅಸ್ವಸ್ಥತೆ, ಜ್ವರ ಮತ್ತು ತಲೆನೋವು ಬ್ಲ್ಯಾಕ್‌ ಫಂಗಸ್‌ ಸೋಂಕಿನ ಪ್ರಮುಖ ಲಕ್ಷಣವಾಗಿದೆ. ಹಾಗಿದ್ದರೆ ಈ ಸೋಂಕನ್ನು ತಡೆಗಟ್ಟುವುದು ಹೇಗೆ ಇಲ್ಲಿದೆ ದಂತವೈದ್ಯರ ಮೂರು ಸಲಹೆಗಳು.

Dentist shares simple oral tips to prevent the Black fungus infection

ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ

ಕೊರೊನಾದಿಂದ ಚೇತರಿಕೆಗೊಂದ ಬಳಿಕ ಸ್ಟೆರಾಯ್ಡ್‌ ಬಳಕೆ ಇತರ ಔಷಧಿಗಳನ್ನು ಸೇವಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಬೆಳೆಯುತ್ತದೆ. ಈ ಶಿಲೀಂಧ್ರಗಳು ಸೈನಸ್, ಶ್ವಾಸಕೋಶ ಮತ್ತು ಮೆದುಳಿಗೂ ಸಮಸ್ಯೆಯನ್ನು ಉಂಟುಮಾಡುತ್ತದೆ. ದಿನಕ್ಕೆ ಎರಡು / ಮೂರು ಬಾರಿ ಹಲ್ಲುಜ್ಜುವ ಮೂಲಕ ಹಾಗೂ ಬಾಯಿಯನ್ನು ಸ್ವಚ್ಛಗೊಳಿಸುವ ಮೂಲಕ ಈ ಸೋಂಕು ಬಾರದಂತೆ ತಡೆಗಟ್ಟಬಹುದಾಗಿದೆ.

ಬಾಯಿಯನ್ನು ಪದೇ ಪದೇ ಸ್ವಚ್ಛಗೊಳಿಸುವುದು

ಈ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಉತ್ತಮ ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕೊರೊನಾ ಸೋಂಕಿತರ ಕೋವಿಡ್‌ ವರದಿ ನೆಗೆಟಿವ್‌ ಬಂದ ಬಳಿಕ ಆ ವ್ಯಕ್ತಿಯು ತಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗೆಯೇ ಪದೇ ಪದೇ ಬಾಯಿಯನ್ನು ಸ್ವಚ್ಛಗೊಳಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

 ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ

ಟೂತ್ ಬ್ರಷ್ ಮತ್ತು ಟಂಗ್‌ ಕ್ಲೀನರ್ ಅನ್ನು ಸ್ಯಾನಿಟೈಝ್‌ ಮಾಡುವುದು

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಯು ತಮ್ಮ ಟೂತ್ ಬ್ರಷ್ ಹಾಗೂ ಟಂಗ್‌ ಕ್ಲೀನರ್‌ ಅನ್ನು ಬದಲಾಯಿಸಬೇಕು. ಹಾಗೆಯೇ ಹೊಸ ಟೂತ್ ಬ್ರಷ್ ಮತ್ತು ಟಂಗ್‌ ಕ್ಲೀನರ್‌ ಅನ್ನು ಬಳಸಿದ ಬಳಿಕ ಅದನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಬೇಕು. ಮೌತ್‌ ವಾಷರ್‌ಗಳನ್ನು ಬಳಸಿ ಬಾಯಿ ಸ್ವಚ್ಛಗೊಳಿಸಬೇಕು. ಹಾಗೆಯೇ ಟೂತ್ ಬ್ರಷ್ ಮತ್ತು ಟಂಗ್‌ ಕ್ಲೀನರ್‌ ಅನ್ನು ನಿಯಮಿತವಾಗಿ ಸ್ಯಾನಿಟೈಝ್‌ಗೊಳಿಸಬೇಕು.

Recommended Video

Virat Kohli ಕ್ರಿಕೆಟ್ ಗುರು ಸುರೇಶ್ ಬಾತ್ರ ಇನ್ನಿಲ್ಲ | Oneindia Kannada

(ಒನ್ಇಂಡಿಯಾ ಸುದ್ದಿ)

English summary
Black Fungus Treatment: Dentist shares simple oral hygiene tips you must follow to prevent this fungal infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X