ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕಾಗಿ ಅಮಿತ್ ಶಾರಿಂದ 30:30:40 ಸೂತ್ರ ಪ್ರಕಟ

ಕರ್ನಾಟಕ ಬಿಜೆಪಿಯಲ್ಲಿನ ಬಿಕ್ಕಟ್ಟು ಉಪಶಮನ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವಿಗಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 30:30:40 ಸೂತ್ರವನ್ನು ಪ್ರಕಟಿಸಿದ್ದಾರೆ. ಏನಿದು ಸೂತ್ರ? ಮುಂದೆ ಓದಿ...

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮೇ 27: ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು' ಮುಂದಿನ ಸಿಎಂ ಅಭ್ಯರ್ಥಿ' ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದು ನೆನಪಿರಬೇಕಲ್ಲವೇ, ಇದಾದ ಬಳಿಕ ಮತ್ತೊಂದು ಮಹತ್ವದ ಘೋಷಣೆಯನ್ನು ಅಮಿತ್ ಹೊರಡಿಸಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲಿನ ಬಿಕ್ಕಟ್ಟು ಉಪಶಮನ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವಿಗಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 30:30:40 ಸೂತ್ರವನ್ನು ಪ್ರಕಟಿಸಿದ್ದಾರೆ. ಏನಿದು ಸೂತ್ರ? ಮುಂದೆ ಓದಿ...

ಕರ್ನಾಟಕ ಬಿಜೆಪಿಯಲ್ಲಿದ್ದ ಬಿಕ್ಕಟ್ಟು ಈಗ ತಕ್ಕ ಮಟ್ಟಿಗೆ ಶಮನವಾಗಿದೆ ಎಂಬ ಭರವಸೆಯೊಂದಿಗೆ ಅಮಿತ್ ಶಾ ಅವರು ಮುಂದಿನ ಮಹತ್ವ ಘಟ್ಟವಾದ ಟಿಕೆಟ್ ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

BJP's 30:30:40 formula to kill dissent and win Karnataka in 2018 polls

ಅಸೆಂಬ್ಲಿ ಟಿಕೆಟ್ ಹಂಚಿಕೆಗಾಗಿಯೇ ಬಿಕ್ಕಟ್ಟು ಉಂಟಾಗಿದ್ದು, ಇದರ ಪರಿಹಾರಕ್ಕಾಗಿ 30:30:40 ಸಮತೋಲನ ಸೂತ್ರವನ್ನು ಮುಂದಿಟ್ಟಿದ್ದಾರೆ. ಹೈಕಮಾಂಡ್ ಹೇಳಿದ ಮೇಲೆ ತಲೆತಗ್ಗಿಸಿ ಪಾಲಿಸುವುದು ರಾಜ್ಯ ನಾಯಕರ ವಿಧೇಯತೆಯಾಗಿರುವುದರಿಂದ ಬಹುತೇಕ ಈ ಸೂತ್ರ ಮುಂದಿನ ಚುನಾವಣೆ ಗೆಲುವಿಗೂ ಸಿದ್ಧಸೂತ್ರವಾಗಲಿದೆ.

2018ರ ವಿಧಾನಸಭಾ ಚುನಾವಣೆಗಾಗಿ ಮಾಡಿಕೊಂಡಿರುವ ಈ ಯೋಜನೆಯಂತೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಟಿಕೆಟ್ ಹಂಚಿಕೆ ವಿಷಯದಲ್ಲಿ ಶೇ 30ರಷ್ಟು ಪಾಲು ಹೊಂದಿದ್ದಾರೆ.ಶೇ 30ರಷ್ಟು ಆರೆಸ್ಸೆಸ್ ಸೂಚಿಸಿದ ಅಭ್ಯರ್ಥಿಗಳಿಗೆ ಸಿಗಲಿದೆ. ಶೇ 40ರಷ್ಟು ಹೈಕಮಾಂಡ್ ತನ್ನಲ್ಲೇ ಉಳಿಸಿಕೊಳ್ಳಲಿದೆ. ಈ ರೀತಿ ಟಿಕೆಟ್ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಂಡು ಸಂಭಾವ್ಯ ಪಟ್ಟಿ ತಯಾರಿಸುವಂತೆ ಅಮಿತ್ ಶಾ ಅವರು ನಿರ್ದೇಶನ ನೀಡಿದ್ದಾರೆ. ಆದರೆ, ಅಂತಿಮ ನಿರ್ಧಾರ ಎಂದೆಂದಿಗೂ ಬಿಜೆಪಿ ಹೈಕಮಾಂಡ್ ನದ್ದಾಗಿರುತ್ತದೆ.

ಹೈಕಮಾಂಡ್ ತನ್ನ ಆಯ್ಕೆಯ ಅಭ್ಯರ್ಥಿಗಳನ್ನು ಸೂಚಿಸುವ ಮುನ್ನ ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ, ಅನಂತ್ ಕುಮಾರ್, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಹಾಗೂ ಆರ್ ಅಶೋಕ್ ಅವರ ಸಲಹೆಯನ್ನು ಪಡೆದುಕೊಳ್ಳಲಿದೆ.

English summary
The BJP in Karnataka may have just managed to find a way to keep all its leaders happy and end dissent and differences between leaders. With ticket distribution being the root cause of problems in the party, the senior leadership of the BJP is likely to adopt a 30:30:40 balance formula.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X