ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿದ ಟ್ವಿಟ್ಟಿಗರು, ಹೇಳಿದ್ದೇನು?

|
Google Oneindia Kannada News

ಟ್ವಿಟ್ಟರ್‌ನಲ್ಲಿ #BJPFiledKarnataka ಟ್ರೆಂಡ್ ಆಗುತ್ತಿದೆ, ಅದರಲ್ಲಿ ಪೆಟ್ರೋಲ್ ಬೆಲೆಯಿಂದ ಹಿಡಿದು ಲಸಿಕೆಯವರೆಗೂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಎಡವಿದ್ದೆಲ್ಲಿ ಎನ್ನುವ ಕುರಿತು ಜನರು ಟ್ವೀಟ್ ಮಾಡುತ್ತಿದ್ದಾರೆ.

ಹಲವರು ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಟ್ವಿಟ್ಟರ್‌ನಲ್ಲಿ ಅಭಿಯಾನ ಕೈಗೊಂಡಿದ್ದಾರೆ. ಜನರು ಕೊರೊನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.

ಒಂದೆಡೆ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧವಾಗಿ ಮಾತನಾಡಿದ್ದು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂದು ಹೇಳಿದ್ದು, ಇದಕ್ಕೆ ಟ್ವಿಟ್ಟಿಗರು ಕೂಡ ಸಾಥ್ ನೀಡಿದ್ದಾರೆ. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಮಾಡಿದ್ದಾರೆ.

ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ

ಕರ್ನಾಟಕವು ಭಾರತದ ಅತ್ಯುನ್ನತ ಆರ್ಥಿಕ ಬೆಳವಣಿಗೆಯ ರಾಜ್ಯಗಳಲ್ಲಿ ಒಂದಾಗಿದೆ, ಆದರೆ ಬಿಜೆಪಿಯು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಧ್ವಂಸ ಮಾಡಿದೆ ಎಂದು ಮಾನವ್ ಗುಪ್ತಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿದ ಬಿಜೆಪಿ

ರಾಜ್ಯವು ಕೊರೊನಾದಿಂದ ನರಳುತ್ತಿದ್ದರೆ ರಾಜ್ಯ ಬಿಜೆಪಿಯು ವೆಂಟಿಲೇಟರ್, ಮಾಸ್ಕ್ ಸ್ಕ್ಯಾಮ್‌ನಲ್ಲಿ ತೊಡಗಿತ್ತು ಎಂದು ವಿಜಿ ಜೆ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ರವಾಹದ ಅನುದಾನ ಬಂದಿಲ್ಲ

ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರ ದೊರೆತಿಲ್ಲ, ಪ್ರವಾಹಕ್ಕೆ ಸಿಲುಕಿ ನಾಶವಾದವರ ಪುನರ್ವಸತಿಗೆ ಹಣ ನೀಡಿಲ್ಲ, ಮತ್ತು ಕೇಂದ್ರದಿಂದ ಯಾವುದೇ ಅನುದಾನ ಇದುವರೆಗೂ ಬಂದಿಲ್ಲ ಎಂದು ವಸೀಮ್ ಸುಲ್ತಾನ್ ಎಂಬುವವರು ಹೇಳಿದ್ದಾರೆ.

Recommended Video

ಯಾವ್ಯಾವ ಜಿಲ್ಲೆಗಳು Unlock: ಹೊಸ ಮಾರ್ಗಸೂಚಿಯಲ್ಲೇನಿದೆ? | CM Yediyurappa | Oneindia Kannada
ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ

ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ

ಅಂಜನ್ ಕುಮಾರ್ ಯಾದವ್ ಎಂಬುವವರು ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ‌ ಧೋರಣೆ ಅನುಸರಿಸುತ್ತಿದೆ. ಗುಜರಾತಿಗೆ 1,000 ಕೋಟಿ ಪರಿಹಾರ ಪ್ಯಾಕೇಜ್ ನೀಡಿದರೂ ಕರ್ನಾಟಕದಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಯಾವುದೇ ನಿರೀಕ್ಷಿತ ಸಹಕಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ

English summary
#BJPFailedKarnataka Hashtag Trending In Twitter After People Criticizes State Govt Policies, some tweets are mentioned here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X