ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರತ್ಯೇಕತಾವಾದಿಗಳ ಜತೆ ಕೈ ಜೋಡಿಸಿ ತ್ರಿಪುರಾದಲ್ಲಿ ಗೆದ್ದ ಬಿಜೆಪಿ'

|
Google Oneindia Kannada News

"ತ್ರಿಪುರಾದಲ್ಲಿ ಬಂದ ಫಲಿತಾಂಶದಿಂದ ನಮಗೆ ಜುಗುಪ್ಸೆ ಆಗಿದೆ. ಇಪ್ಪತ್ತೈದು ವರ್ಷಗಳಿಂದ ಅಲ್ಲಿ ಸಿಪಿಎಂ ಅಧಿಕಾರದಲ್ಲಿತ್ತು. ಯುವ ಜನರಲ್ಲಿ ಬದಲಾವಣೆ ನಿರೀಕ್ಷೆಯಿತ್ತು ಅನಿಸುತ್ತದೆ. ಆದರೆ ಅಲ್ಲಿನ ಪ್ರತ್ಯೇಕತಾವಾದಿಗಳ ಜತೆ ಕೈ ಜೋಡಿಸಿ ಬಿಜೆಪಿ ಗೆಲುವು ಪಡೆದಿದೆ" ಎಂದು ಪ್ರತಿಕ್ರಿಯೆ ನೀಡಿದರು ಸಿಪಿಎಂನ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ.

ಇದೊಂದು ಚುನಾವಣೆ ಸೋಲು ಸಿಪಿಎಂನ ಭವಿಷ್ಯ ನಿರ್ಧರಿಸುವುದಿಲ್ಲ. ಈಗ ದೇಶದಲ್ಲಿ ದುಡ್ಡಿನ ರಾಜಕಾರಣ ನಡೆಯುತ್ತಿದೆ. ವಿಚ್ಛಿದ್ರಕಾರಿ ಶಕ್ತಿಗಳು ಒಂದಾಗಿ ಪಡೆದಿರುವ ಗೆಲುವು ಇದು. ಇನ್ನು ಈಶಾನ್ಯ ರಾಜ್ಯಗಳ ಚುನಾವಣೆಯ ಫಲಿತಾಂಶವು ಕರ್ನಾಟಕ ವಿಧಾನಸಭೆ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ

ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಾಗೇಪಲ್ಲಿ- ಗುಡಿಬಂಡೆ ವಿಧಾನಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಾಗಿ ತಿಳಿಸಿದ ಅವರು, ರಾಜ್ಯದ ಇಪ್ಪತ್ನಾಲ್ಕು ಕ್ಷೇತ್ರದಲ್ಲಿ ಸಿಪಿಎಂನಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಅವರು ತಿಳಿಸಿದರು.

BJP win in Tripura by joining hands with separatists: GV Srirama Reddy

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಯಿಂದ ಪಕ್ಷ ಇಲ್ಲದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಇತ್ತೀಚೆಗೆ ಸಿಪಿಎಂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಶ್ರೀರಾಮ ರೆಡ್ಡಿ ಹೇಳಿದರು.

English summary
BJP win in Tripura by joining hands with separatists, said by CPI (M) Karnataka secretary GV Srirama Reddy to One India Kannada, when asked for reaction. There may be anti incumbency also, he further added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X