ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿಗೆ ಸ್ವಾಗತಿಸಿದ ಬಿಜೆಪಿ!

|
Google Oneindia Kannada News

ಬೆಂಗಳೂರು, ಮೇ 12 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಇಂದು ಅಂತ್ಯಗೊಳ್ಳುತ್ತಿದೆ. ಕರ್ನಾಟಕ ಬಿಜೆಪಿ ಟ್ವೀಟರ್ ಮೂಲಕ ಮುಖ್ಯಮಂತ್ರಿಗಳಿಗೆ ಬೆಂಗಳೂರಿಗೆ ಸ್ವಾಗತ ಕೋರಿ ಲೇವಡಿ ಮಾಡಿದೆ.

ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ರಾತ್ರಿಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್ ಅವರು ಸಹ ರೆಸಾರ್ಟ್‌ನಲ್ಲಿದ್ದಾರೆ.

ಮಡಿಕೇರಿ ರೆಸಾರ್ಟ್‌ ಸೇರಿದ ಕುಮಾರಸ್ವಾಮಿಮಡಿಕೇರಿ ರೆಸಾರ್ಟ್‌ ಸೇರಿದ ಕುಮಾರಸ್ವಾಮಿ

ಪ್ರತಿಪಕ್ಷ ಬಿಜೆಪಿ ಕುಮಾರಸ್ವಾಮಿ ಅವರು ರೆಸಾರ್ಟ್‌ ವಾಸ್ತವ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ರಾಜ್ಯದಲ್ಲಿ ಭೀಕರ ಬರವಿದ್ದು ಮುಖ್ಯಮಂತ್ರಿಗಳು ಅತ್ತಗಮನ ಹರಿಸಬೇಕು ಎಂದು ಪ್ರತಿಪಕ್ಷ ಒತ್ತಾಯಿಸಿತ್ತು. ಇಂದು ವಾಸ್ತವ್ಯ ಮುಗಿಯುವ ಕಾರಣ ಬೆಂಗಳೂರಿಗೆ ಸ್ವಾಗತ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದೆ. ಮುಂದಿನ ಕಾರ್ಯಕ್ರಮ ಏನು? ಎಂದು ಪ್ರಶ್ನೆ ಮಾಡಿದೆ.

5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ

12 ಗಂಟೆ ಸುಮಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯಿಂದ ಹೊರಡಲಿದ್ದು, ಮದ್ದೂರಿನಲ್ಲಿ ವಿವಾಹವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಸೋಮವಾರ ಮತ್ತು ಮಂಗಳವಾರ ಅವರು ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನೂರೆಂಟು ಪ್ರಶ್ನೆ ಹುಟ್ಟುಹಾಕುತ್ತಿರುವ ಸಿಎಂ ರೆಸಾರ್ಟ್ ವಾಸ್ತವ್ಯ..!ನೂರೆಂಟು ಪ್ರಶ್ನೆ ಹುಟ್ಟುಹಾಕುತ್ತಿರುವ ಸಿಎಂ ರೆಸಾರ್ಟ್ ವಾಸ್ತವ್ಯ..!

ಕರ್ನಾಟಕ ಬಿಜೆಪಿ ಟ್ವೀಟ್

ಭಾನುವಾರ ಬೆಳಗ್ಗೆ ಕರ್ನಾಟಕ ಬಿಜೆಪಿ ಅಧಿಕೃತ ಖಾತೆಯಿಂದ 'ವೆಲ್‌ ಕಮ್ ಟು ಬೆಂಗಳೂರು ಎಚ್.ಡಿ.ಕುಮಾರಸ್ವಾಮಿ ಅವರೇ ರೆಸಾರ್ಟ್ ವಾಸ್ತವ್ಯ ಚೆನ್ನಾಗಿತ್ತು ಅಂದು ಕೊಳ್ಳುತ್ತೇವೆ' ಎಂದು ಟ್ವೀಟ್ ಮಾಡಲಾಗಿದೆ.

ಮುಂದಿನ ಕೆಲಸ ಏನು?

ಮುಂದಿನ ಕೆಲಸ ಏನು?

ಬೆಂಗಳೂರಿಗೆ ಬಂದ ಮೇಲೆ ಮುಂದಿನ ಕೆಲಸವೇನು? ಎಂದು ಬಿಜೆಪಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.

ಬೇರೆ ರೆಸಾರ್ಟ್‌ ಭೇಟಿ, ವಿದೇಶ ಪ್ರವಾಸ, ಅಳುವುದು, ಬಿಜೆಪಿಗೆ ಬೈಯುವುದು? ಯಾವುದು ಮುಂದಿನ ಕೆಲಸ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬರ ಪರಿಸ್ಥಿತಿ ಬಗ್ಗೆ ನೋಡಿ

ಬರ ಪರಿಸ್ಥಿತಿ ಬಗ್ಗೆ ನೋಡಿ

ನಿಮ್ಮ ಕಾರ್ಯಕ್ರಮಗಳಲ್ಲಿ ಬಿಡುವಿದ್ದರೆ ಒಮ್ಮೆ ಬೆಂಗಳೂರಿನ ಮೂಲ ಸೌಕರ್ಯ ಹೇಗಿದೆ ನೋಡಿ. ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಒಮ್ಮೆ ಗಮನ ಹರಿಸಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸಲಹೆ ನೀಡಿದೆ.

ಸಾ.ರಾ.ಮಹೇಶ್ ಹೇಳಿಕೆ

ಸಾ.ರಾ.ಮಹೇಶ್ ಹೇಳಿಕೆ

ಇಬ್ಬನಿ ರೆಸಾರ್ಟ್ ಬಳಿ ಮಾತನಾಡಿದ ಸಚಿವ ಸಾ.ರಾ.ಮಹೇಶ್ ಅವರು, 'ನಾವೆಲ್ಲರೂ ಮನುಷ್ಯರು, ನಮಗೂ ಖಾಸಗಿ ಬದುಕಿದೆ. ಮುಖ್ಯಮಂತ್ರಿ ಹಾಗೂ ಅವರ ಕುಟುಂಬಸ್ಥರು ವಿಶ್ರಾಂತಿಗಾಗಿ ಬಂದಿದ್ದಾರೆ. ಕೆಲವೊಮ್ಮೆ ಯಂತ್ರಗಳೇ ಕೈ ಕೊಡುತ್ತದೆ ಅಲ್ಲವೇ?' ಎಂದು ಪ್ರಶ್ನಿಸಿದರು.

ಉಪ ಚುನಾವಣೆ ಪ್ರಚಾರ

ಉಪ ಚುನಾವಣೆ ಪ್ರಚಾರ

ಸೋಮವಾರ ಮತ್ತು ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಅವರು ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ. ಮೇ 19ರಂದು ಚುನಾವಣೆ ನಡೆಯಲಿದೆ.

English summary
In a tweet Karnataka BJP welcomed Chief Minister H.D.Kumaraswamy to Bengaluru. H.D.Kumaraswamy in two days rest and he stayed in Ibbani resort, Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X