ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ: ಕರ್ನಾಟಕದಲ್ಲಿ ಬಿಜೆಪಿಗೆ ಮೂರು ಸ್ಥಾನ, ಮೋದಿ ಅಭಿನಂದನೆ

|
Google Oneindia Kannada News

ಬೆಂಗಳೂರು ಜೂ.11: ಕರ್ನಾಟಕದಲ್ಲಿ ಖಾಲಿ ಇದ್ದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಸ್ಥಾನದಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ತಂತ್ರಗಾರಿಕೆ ಕಾರಣ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ರಾಜ್ಯಸಭಾ ಚುನಾವಣೆ ಬಳಿಕ ಶುಕ್ರವಾರ ಸಂಜೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜ್ಯದ ಮೂರು ಸ್ಥಾನ ಬಿಜೆಪಿ ಪಾಲಾಗಿದ್ದು ಖಚಿತವಾಯಿತು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.

ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ನರೇಂದ್ರ ಮೋದಿ : ಫೋಟೋ ವೈರಲ್ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ನರೇಂದ್ರ ಮೋದಿ : ಫೋಟೋ ವೈರಲ್

ಕಾರ್ಯಾಲಯದ ಮಾಹಿತಿ ಪ್ರಕಾರ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್, ಲೇಹರ್ ಸಿಂಗ್‌ ಸಿರೊಯಾ ಮತ್ತು ನಟ ಜಗ್ಗೇಶ್ ಸೇರಿ ರಾಜ್ಯದಲ್ಲಿ ಮೂರು ಸ್ಥಾನ ಬಾಚಿಕೊಂಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತ ವೈಖರಿ, ತಂತ್ರಗಾರಿಕೆಯಿಂದ ಈ ಸಾಧನೆ ಸಾಧ್ಯವಾಗಿದೆ. ಕೇಂದ್ರಕ್ಕೆ ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡಿದ ಈ ಕೊಡುಗೆ ಮುಂದಿನ ಚುನಾವಣೆಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೇ ಈ ತಂತ್ರಗಾರಿಕೆ ಮುಂದಿನ ಚುನಾವಣೆಗಳಿಗೆ ಪ್ರೇರಣೆಯು ಆಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಮುಖ ನಾಯಕರಿಂದ ಸಿಎಂಗೆ ಶ್ಲಾಘನೆ:

ಪ್ರಮುಖ ನಾಯಕರಿಂದ ಸಿಎಂಗೆ ಶ್ಲಾಘನೆ:

ಬಿಜೆಪಿ ಕರ್ನಾಟಕದಲ್ಲಿ ಮೂರು ಸ್ಥಾನ ಗೆದ್ದ ಸುದ್ದಿ ಹರಡುತ್ತಿದ್ದಂತೆ ಕೇಂದ್ರದ ವರಿಷ್ಠರು ಸೇರಿದಂತೆ ರಾಜ್ಯ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೂರವಾಣಿ ಕರೆಯ ಮೂಲಕ ನಿಮ್ಮ ಪರಿಶ್ರಮ ಕೆಲಸ ಮಾಡಿದೆ. ತಂತ್ರಗಾರಿಕೆ, ಪರಿಶ್ರಮಕ್ಕೆ ತಕ್ಕ ಫಲಿತಾಂಶ ನಾವು ನೋಡುತ್ತಿದ್ದೇವೆ. ಈ ಯಶಸ್ಸು ಕಂಡು ಹೆಮ್ಮೆ ಎನಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ.

ಶಾ ಮೆಚ್ಚುಗೆ ನುಡಿ

ಶಾ ಮೆಚ್ಚುಗೆ ನುಡಿ

ಇದೇ ವೇಳೆ ಬೊಮ್ಮಾಯಿಯನ್ನು ಸಂಪರ್ಕಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ರಾಜ್ಯಸಭಾ ಯಶಸ್ಸಿನ ಸಂತಸ ಹಂಚಿಕೊಂಡಿದ್ದಾರೆ. ಇಲ್ಲಿನ ಗೆಲುವು ರಾಜ್ಯದ ಬಿಜೆಪಿ ನಾಯಕತ್ವ ಏನೆಂಬುದನ್ನು ತೋರಿಸುತ್ತದೆ. ವಿಪಕ್ಷಗಳ ಜತೆಗೆ ಕಠಿಣ ಪೈಪೋಟಿ ನಡುವೆ ಬಿಜೆಪಿಗೆ ಮೂರು ಸ್ಥಾನ ಲಭಿಸಿವೆ. ಅಲ್ಲದೇ ಈ ಚುನಾವಣೆ ಬಳಿಕ ಸಂಸತ್ತಿನ ಮೇಲ್ಮನೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಸಂಖ್ಯೆ ಹೆಚ್ಚಾಗಿದೆ ಎಂದು ಶಾ ಮೆಚ್ಚುಗೆ ನುಡಿ ನುಡಿದಿದ್ದಾರೆ.

ರಾಜ್ಯ ನ್ಯಾಯಕರಿಂದಲೂ ಅಭಿನಂದನೆ

ರಾಜ್ಯ ನ್ಯಾಯಕರಿಂದಲೂ ಅಭಿನಂದನೆ

ಇದರ ಜತೆಗೆ ಬಿಜೆಪಿ ನಾಯಕರಾದ ಸಿ.ಟಿ.ರವಿ, ಕಂದಾಯ ಸಚಿವ ಆರ್. ಅಶೋಕ್‌ ಸೇರಿದಂತೆ ಮತ್ತಿತರ ರಾಜ್ಯ ನಾಯಕರು ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಅಡ್ಡ ಮತದಾನ ಮಾಡಿದ ವಿರೋಧ ಪಕ್ಷದ ನಾಯಕರಿಗೆ ಅವರ ಕಚೇರಿಗೆ ತೆರಳಿ ಸಿ. ಟಿ.ರವಿ ಕೃತಜ್ಞತೆ ತಲುಪಿಸಿದ್ದಾರೆ.

ಕರ್ನಾಟಕದಲ್ಲಿ ಸೋಲಿನ ರುಚಿ ಕಂಡ ಕಾಂಗ್ರೆಸ್

ಕರ್ನಾಟಕದಲ್ಲಿ ಸೋಲಿನ ರುಚಿ ಕಂಡ ಕಾಂಗ್ರೆಸ್

ರಾಜಸ್ಥಾನದಲ್ಲಿ ವಿಜಯ ಸಾಧಿಸಿದ ಕಾಂಗ್ರೆಸ್ ಕರ್ನಾಟಕದಲ್ಲಿ ಸೋಲಿನ ರುಚಿ ಕಂಡಿದೆ. ಕಾಂಗ್ರೆಸ್‌ ನಾಯಕರು ಮತ್ತು ಜೆಡಿಎಸ್ ಮುಖಂಡರು ಪರಸ್ಪರ ಕಿತ್ತಾಟಗಳು ಹಾಗೂ ಕಾಂಗ್ರೆಸ್‌ -ಜೆಡಿಎಸ್ ನಾಯಕರ ಅಡ್ಡಮತದಾನವು ಬಿಜೆಪಿಗೆ ಬಹುಮತ ಬರಲು ಸಾಧ್ಯವಾಯಿತು. ನಾಲ್ಕು ಸ್ಥಾನ ಪೈಕಿ ಒಂದರಲ್ಲಿ ಮಾತ್ರ ಕಾಂಗ್ರೆಸ್‌ನ ಜೈರಾಮ್ ರಮೇಶ್‌ ಅವರು ಬಹುಮತ ಪಡೆದಿದ್ದಾರೆ. ಉಳಿದ ಮೂರು ಸ್ಥಾನಗಳಲ್ಲಿ ಸೋಲು ಕಂಡಿದ್ದು, ಕುಪೇಂದ್ರ ರೆಡ್ಡಿ ಸೋಲಿನಿಂದ ಜೆಡಿಎಸ್ ಸಹ ಹಿನ್ನಡೆ ಅನುಭವಿಸಿದೆ.

English summary
pm narendra modi called to karnatak cm basavaraj bommai immediately rajyasabha election results were declared,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X