ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರವೇ ವಿಶ್ವಾಸಮತಯಾಚನೆಗೆ ಬಿಜೆಪಿ ಒತ್ತಡ

|
Google Oneindia Kannada News

ಬೆಂಗಳೂರು, ಜುಲೈ 14 : 'ಸೋಮವಾರ ಎಚ್. ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲಿ ಅಥವ ಅವರು ಹೇಳಿದಂತೆ ವಿಶ್ವಾಸಮತಯಾಚನೆ ಮಾಡಲಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಪ್ರತಿಪಕ್ಷ ಬಿಜೆಪಿ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ಮಾಡಲಿದೆ ಎಂಬ ಸುಳಿವು ನೀಡಿದರು. ವಿಶ್ವಾಸಮತಯಾಚನೆ ಬಳಿಕ ಮುಂದಿನ ಕಲಾಪ ನಡೆಸುವಂತೆ ಒತ್ತಾಯಿಸುವ ನಿರೀಕ್ಷೆ ಇದೆ.

ಕರ್ನಾಟಕದ ಹೈಡ್ರಾಮಕ್ಕೆ ಒಂದು ವಾರ : ಯಾರು, ಏನು ಹೇಳಿದರು?ಕರ್ನಾಟಕದ ಹೈಡ್ರಾಮಕ್ಕೆ ಒಂದು ವಾರ : ಯಾರು, ಏನು ಹೇಳಿದರು?

'ಕಾಂಗ್ರೆಸ್‌ನವರು ಎಂ.ಟಿ.ಬಿ.ನಾಗರಾಜ್ ಮತ್ತು ಡಾ.ಕೆ.ಸುಧಾಕರ್ ಮನವೊಲಿಸಲು ಪ್ರಯತ್ನ ನಡೆಸಿದರು. ಆದರೆ, ಅವರಿಬ್ಬರು ನಿಮ್ಮ ಜೊತೆ ಇರಲ್ಲ ಎಂದು ಹೋದರು. ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದೆ' ಎಂದು ಯಡಿಯೂರಪ್ಪ ತಿಳಿಸಿದರು.

ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯಶಾಸಕರ ಜೊತೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯ

Karnataka assembly

'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಹೋದ ಶಾಸಕರನ್ನು ತಡೆದು ನಿಲ್ಲಿಸಲು ಸಾಧ್ಯವಾಗದ ಮುಖ್ಯಮಂತ್ರಿಗಳು ಈಗ ಬಹುಮತ ಸಾಬೀತು ಮಾಡಲು ಸಮಯ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾತಿನಲ್ಲಿ ರಾಜಕೀಯ ಪಿತೂರಿ ವಾಸನೆ ಬೀಸುತ್ತಿದೆ' ಎಂದು ದೂರಿದರು.

ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್

'ಸೋಮವಾರ ನಡೆಯುವ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಸೋಮವಾರವೇ ವಿಶ್ವಾಸಮತಯಾಚನೆಗೆ ಸಮಯಕೊಡಿ ಎಂದು ಸ್ಪೀಕರ್ ರಮೇಶ್ ಕುಮಾರ್‌ಗೆ ಮನವಿ ಮಾಡುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.

'ಮೈತ್ರಿ ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಬಹುಮತ ಕಳೆದುಕೊಂಡಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವಿಲ್ಲ' ಎಂದು ಯಡಿಯೂರಪ್ಪ ತಿಳಿಸಿದರು.

English summary
Opposition party of Karnataka BJP will demand for floor test on July 15, 2019. Karnataka Chief Minister H.D.Kumaraswamy announced that he will go for floor test after Congress and JD(S) MLAs resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X