ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ: ಹರಿದಿತ್ತು ಹಣದ ಹೊಳೆ

|
Google Oneindia Kannada News

Recommended Video

ಜಾಹೀರಾತಿಗೆಂದೇ ರಾಜಕೀಯ ಪಕ್ಷಗಳು ಖರ್ಚು ಮಾಡಿದ್ದು ಎಷ್ಟು ಗೊತ್ತೇ?

ಬೆಂಗಳೂರು, ಆಗಸ್ಟ್ 26: ಕರ್ನಾಟಕದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ಬಂದಿರಲಿಲ್ಲ. ಬಿಜೆಪಿ 105 ಸೀಟುಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿಗೆ ಸರ್ಕಾರ ರಚಿಸಲು ಇನ್ನೂ ಎಂಟು ಸೀಟುಗಳ ಕೊರತೆ ಎದುರಾಗಿತ್ತು. ಈ ಸ್ಥಿತಿಯನ್ನು ಬಳಸಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಚರ್ಚಿಸಿ ಸಮ್ಮಿಶ್ರ ಸರ್ಕಾರ ರಚಿಸಿದರು. ಪರಿಣಾಮವಾಗಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಕನಸು ಕಮರಿತು.

ಆದರೆ, ಸಮ್ಮಿಶ್ರ ಸರ್ಕಾರ ಬದುಕಿದ್ದು 14 ತಿಂಗಳು ಮಾತ್ರ. ಶಾಸಕರ ಅನರ್ಹತೆಯಿಂದಾಗಿ ಸದನದ ಒಟ್ಟು ಬಲಾಬಲ ಕುಸಿತಕಂಡಿದೆ. ಇದರ ಪ್ರಯೋಜನ ಪಡೆದ ಬಿಜೆಪಿ ತನ್ನಲ್ಲಿರುವ ಸದಸ್ಯರ ಬಲದೊಂದಿಗೆ ಸುಲಭವಾಗಿ ಸರ್ಕಾರ ರಚಿಸಿದೆ. ಉಪ ಚುನಾವಣೆ ನಡೆಯುವವರೆಗೂ ಬಿಜೆಪಿ ಸರ್ಕಾರಕ್ಕೆ ಆತಂಕವಿಲ್ಲ.

ಡಿಎಲ್‌ಎಫ್, ಭಾರತಿ ಕಂಪೆನಿ ಟ್ರಸ್ಟ್ ಬಿಜೆಪಿಗೆ ನೀಡಿದ್ದು 600 ಕೋಟಿ ರೂ. ದೇಣಿಗೆ ಡಿಎಲ್‌ಎಫ್, ಭಾರತಿ ಕಂಪೆನಿ ಟ್ರಸ್ಟ್ ಬಿಜೆಪಿಗೆ ನೀಡಿದ್ದು 600 ಕೋಟಿ ರೂ. ದೇಣಿಗೆ

ರಾಜ್ಯದಲ್ಲಿ ಬಿಜೆಪಿಯನ್ನು ಶತಾಯಗತಾಯ ಅಧಿಕಾರಕ್ಕೆ ತರಲು ಕೇಂದ್ರದ ನಾಯಕರು ಪ್ರಯತ್ನ ನಡೆಸಿದ್ದರು. ಅದಕ್ಕಾಗಿ ವ್ಯಾಪಕ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಅನೇಕ ಪ್ರಮುಖ ನಾಯಕರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮಾಧ್ಯಮಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಜಾಹೀರಾತುಗಳನ್ನು ನೀಡಿದ್ದರು. ಅದರ ಮೌಲ್ಯದ ಕುರಿತು ಎಕ್ಸ್‌ಚೇಂಜ್ ಫಾರ್ ಮೀಡಿಯಾ ಎಂಬ ವೆಬ್‌ಸೈಟ್ ವರದಿ ಪ್ರಕಟಿಸಿದೆ.

300 ಕೋಟಿ ರೂಪಾಯಿ ವ್ಯಯಿಸಿದ ಬಿಜೆಪಿ

300 ಕೋಟಿ ರೂಪಾಯಿ ವ್ಯಯಿಸಿದ ಬಿಜೆಪಿ

2018ರ ರಾಜ್ಯ ವಿಧಾನಸಭೆ ಚುನಾವಣೆಯ ಜಾಹೀರಾತಿಗಾಗಿಯೇ ಬಿಜೆಪಿ 300 ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಇದರಲ್ಲಿ ಸಿಂಹಪಾಲು ಜಾಹೀರಾತು ಸುದ್ದಿಪತ್ರಿಕೆಗಳಿಗೆ ಹಂಚಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವ್ಯಯಿಸಿದ ಜಾಹೀರಾತು ವೆಚ್ಚ ಸುಮಾರು 50-60 ಕೋಟಿ ರೂ. ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಮೂರು ಕೋಟಿ ರೂ. ವೆಚ್ಚದ ಜಾಹೀರಾತು ಸ್ಥಳವನ್ನು ಬಿಜೆಪಿ ಪಡೆದುಕೊಂಡಿತ್ತು. ಅದೇ ಪತ್ರಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ತಲಾ ಎರಡು ಕೋಟಿ ರೂ. ವೆಚ್ಚದ ಜಾಹೀರಾತು ಸ್ಥಳ ಖರೀದಿಸಿದ್ದವು.

ಆಂಗ್ಲ ಭಾಷಾ ಪತ್ರಿಕೆಯಲ್ಲೂ ಬಿಜೆಪಿ ಮುಂದು

ಆಂಗ್ಲ ಭಾಷಾ ಪತ್ರಿಕೆಯಲ್ಲೂ ಬಿಜೆಪಿ ಮುಂದು

ಇದಿಷ್ಟೇ ಅಲ್ಲದೆ ಬಿಜೆಪಿ, ಆಂಗ್ಲ ಮತ್ತು ಪ್ರಾದೇಶಿಕ ಭಾಷಾ ದಿನಪತ್ರಿಕೆಗಳಲ್ಲಿಯೂ (ಬ್ಯಾನರ್ ಜಾಹೀರಾತು ಮತ್ತು ಇತರೆ ಜಾಹೀರಾತು ಸೇರಿ) ಸಮಾನ ಆಸಕ್ತಿ ತೋರಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೆಚ್ಚಾಗಿ ಪ್ರಾದೇಶಿಕ ಪತ್ರಿಕೆಗಳಿಗೆ ಗಮನ ನೀಡಿದ್ದವು. ಪ್ರಜಾವಾಣಿ ಮತ್ತು ಕನ್ನಡಪ್ರಭದಂತಹ ಪ್ರಾದೇಶಿಕ ಪತ್ರಿಕೆಗಳು ಎರಡೂ ಪಕ್ಷಗಳಿಂದ ಹೆಚ್ಚು ಆದ್ಯತೆ ಪಡೆದುಕೊಂಡಿದ್ದವು. ಪ್ರಮುಖ ಪತ್ರಿಕೆಗಳ ಮಾಸ್ಟರ್ ಹೆಡ್ (ಪತ್ರಿಕೆ ಹೆಸರು ಮತ್ತು ಚಿಹ್ನೆ) ಕೆಳಭಾಗದ ಜಾಗವನ್ನು ಬಿಜೆಪಿ ಸುಮಾರು ಎರಡು ವಾರಗಳ ಕಾಲ ನಿರಂತರವಾಗಿ ಜಾಹೀರಾತಿಗಾಗಿ ಪಡೆದುಕೊಂಡಿತ್ತು.

ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್

ಎಇಪಿಯಿಂದಲೂ ಅಧಿಕ ಜಾಹೀರಾತು

ಎಇಪಿಯಿಂದಲೂ ಅಧಿಕ ಜಾಹೀರಾತು

2017ರಲ್ಲಿ ಸ್ಥಾಪನೆಯಾದ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ ವಿಜಯ ಕರ್ನಾಟಕದಲ್ಲಿ ಒಂದು ಸಂಪೂರ್ಣ ಪುಟದ ಜಾಹೀರಾತು ನೀಡಿತ್ತು. ಮಾಧ್ಯಮ ವರದಿಗಳ ಪ್ರಕಾರ ಆ ಜಾಹೀರಾತಿನ ಸ್ಥಳದ ಬೆಲೆ 50 ಲಕ್ಷ ರೂ. ಈ ರೀತಿ ಹಲವು ಜಾಹೀರಾತುಗಳನ್ನು ಪಕ್ಷ ನೀಡಿದೆ. ಈ ಮೂಲಕ ಪಕ್ಷವು ಇತರೆ ಮೂರು ದೊಡ್ಡ ಪಕ್ಷಗಳೊಂದಿಗೆ ಜಾಹೀರಾತು ಪೈಪೋಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಖಾಲಿ ಆಗುತ್ತಿದೆ ಕಾಂಗ್ರೆಸ್ ಖಜಾನೆ, ದುಂದು ವೆಚ್ಚ ಕಡಿತಕ್ಕೆ ಸೂಚನೆಖಾಲಿ ಆಗುತ್ತಿದೆ ಕಾಂಗ್ರೆಸ್ ಖಜಾನೆ, ದುಂದು ವೆಚ್ಚ ಕಡಿತಕ್ಕೆ ಸೂಚನೆ

ವಿದ್ಯುನ್ಮಾನದಲ್ಲಿಯೂ ಬಿಜೆಪಿ ಮುಂದೆ

ವಿದ್ಯುನ್ಮಾನದಲ್ಲಿಯೂ ಬಿಜೆಪಿ ಮುಂದೆ

ಉಳಿದಂತೆ ವಿದ್ಯುನ್ಮಾನ ಮಾಧ್ಯಮಗಳಿಗೆ ಒಂದಷ್ಟು ಮೊತ್ತ ಜಾಹೀರಾತಿನ ರೂಪದಲ್ಲಿ ಹರಿದಿವೆ.

'ಏಪ್ರಿಲ್ ಕೊನೆಯ ವಾರದಿಂದ ರಾಜಕೀಯ ಪಕ್ಷಗಳು ಕರ್ನಾಟಕ ಚುನಾವಣೆ ಸಂಬಂಧ ಜಾಹೀರಾತು ನೀಡಲು ಆರಂಭಿಸಿದವು. ಎರಡು ವಾರ ಸುಮಾರು 70 ಸ್ಲಾಟ್‌ಗಳಷ್ಟು ಜಾಹೀರಾತು ಸ್ಥಳವನ್ನು ಬಿಜೆಪಿಯೇ ಆಕ್ರಮಿಸಿತ್ತು. ಈ ಜಾಹೀರಾತುಗಳು ದಿನವಿಡೀ ಪ್ರಸಾರವಾಗುತ್ತಲೇ ಇದ್ದವು. ಕಾಂಗ್ರೆಸ್ ದಿನಕ್ಕೆ ಕೇವಲ ಐದು ಸ್ಲಾಟ್‌ನಂತೆ ತೀರಾ ಕಡಿಮೆ ಪ್ರಮಾಣದಲ್ಲಿ ಜಾಹೀರಾತುಗಳನ್ನು ನೀಡಿತ್ತು. ಬಳಿಕ ಅದು ದಿನಕ್ಕೆ 40ಕ್ಕೆ ಏರಿತು. ಅಂತಿಮವಾಗಿ 80-100 ಸ್ಲಾಟ್‌ಗಳಲ್ಲಿ ಕಾಂಗ್ರೆಸ್ ಜಾಹೀರಾತು ಪ್ರಸಾರವಾಗತೊಡಗಿತು. ಜೆಡಿಎಸ್ ಎರಡು ವಾರಗಳ ಕಾಲ ದಿನಕ್ಕೆ ಐದು ಸ್ಲಾಟ್‌ಗಳನ್ನು ಪಡೆದುಕೊಂಡಿತ್ತು' ಎಂದು ಟಿವಿ9 ಕನ್ನಡದ ನಿರ್ದೇಶಕ ಕ್ಲಿಫರ್ಡ್ ಪಿರೇರಾ ತಿಳಿಸಿದ್ದಾಗಿ ಪತ್ರಿಕೆ ವರದಿ ಮಾಡಿದೆ.

ಬಾರ್ಕ್‌ನ ಮೊದಲ ಹತ್ತು ಜಾಹೀರಾತುದಾರರಲ್ಲಿ ಬಿಜೆಪಿ ಕೂಡ ಒಂದು. 2018ರ ಏಪ್ರಿಲ್ 28 ರಿಂದ ಮೇ 4ರ ಅವಧಿಯಲ್ಲಿ ಬಿಜೆಪಿ 10,012 ಜಾಹೀರಾತು ಅಳವಡಿಕೆಗಳೊಂದಿಗೆ ಎರಡನೆಯ ಸ್ಥಾನ ಪಡೆದುಕೊಂಡಿದೆ.

70 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ: ಜನ್ಮದಿನದಂದು ಕೇಜ್ರಿವಾಲ್ ಸಂಕಲ್ಪ70 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ: ಜನ್ಮದಿನದಂದು ಕೇಜ್ರಿವಾಲ್ ಸಂಕಲ್ಪ

ಜಾಹೀರಾತು ಮಾರ್ಕೆಂಟಿಂಗ್ ಯೋಜನೆ

ಜಾಹೀರಾತು ಮಾರ್ಕೆಂಟಿಂಗ್ ಯೋಜನೆ

'ಅಧಿಕಾರಕ್ಕೆ ಬರಲು ಬಯಸಿರುವ ಯಾವುದೇ ಪಕ್ಷ ಚುನಾವಣೆ ಸಂದರ್ಭದಲ್ಲಿ ಅಧಿಕ ಮೊತ್ತವನ್ನು ಜಾಹೀರಾತಿಗೆ ಹೂಡಿಕೆ ಮಾಡಲು ಸಿದ್ಧವಿರುತ್ತದೆ' ಎಂದು 'ಬ್ರ್ಯಾಂಡ್ಸ್ ಆಫ್ ಡಿಸೈರ್'ನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಪರಿಣತ ಮತ್ತು ಸಿಇಒ ಸೌರಭ್ ಉಬೊವೆಜಾ ಹೇಳಿದ್ದಾರೆ.

'ಹಾಗೆಯೇ ಅಧಿಕಾರದಲ್ಲಿ ಇರುವ ಪಕ್ಷ ಸಾಮಾನ್ಯವಾಗಿ ಮಾರ್ಕೆಟಿಂಗ್ ಯೋಜನೆಗಳಲ್ಲಿ ಮತ್ತು ಪಕ್ಷದ ಕಾರ್ಯಕ್ರಮಗಳ ಮೂಲಕ ಪ್ರಚಾರ ನಡೆಸಲು ಅಧಿಕ ಹಣವನ್ನು ವ್ಯಯಿಸುತ್ತವೆ. ಹೀಗಾಗಿ ಇದು ಬಿಜೆಪಿಯ ಮಾರ್ಕೆಟಿಂಗ್ ಬಜೆಟ್ ಎನ್ನುವುದಕ್ಕಿಂತ ಸರ್ಕಾರದ ಮಾರ್ಕೆಟಿಂಗ್ ಎಂದ ಹೇಳಬಹುದು' ಎಂದು ತಿಳಿಸಿದ್ದಾರೆ.

ಮೊಬೈಲ್ ಸಂದೇಶಗಳ ಮೂಲಕ ಪ್ರಚಾರ

ಮೊಬೈಲ್ ಸಂದೇಶಗಳ ಮೂಲಕ ಪ್ರಚಾರ

ಇದು ಸಾಮಾಜಿಕ ಮಾಧ್ಯಮಗಳ ಯುಗ. ಟ್ವೀಟ್‌ಗಳು, ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಮತ್ತು ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಲು ಮಾಧ್ಯಮಗಳು ತೀವ್ರ ಕ್ರಿಯಾಶೀಲವಾಗಿರುತ್ತವೆ. ಚುನಾವಣೆ ಪ್ರಚಾರದಲ್ಲಿ ಪಕ್ಷಗಳ ಪ್ರತಿ ನಿಮಿಷದ ಚಟುವಟಿಕೆಗಳು, ಕಾರ್ಯಕ್ರಮಗಳ ಮಾಹಿತಿಯನ್ನು ನಿರಂತರವಾಗಿ ಒದಗಿಸುತ್ತಿರುತ್ತವೆ.

English summary
BJP had spent nearly Rs 300 core and Congress spent Rs 50-60 crore during Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X