ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದ ಬಿಜೆಪಿ: ಕುಮಾರಸ್ವಾಮಿ ದ್ವಿಪತ್ನಿ ವಿಚಾರ ಪ್ರಸ್ತಾಪ

|
Google Oneindia Kannada News

ಸಾರ್ವಜನಿಕ ಜೀವನದಲ್ಲಿ ಇರುವವರು ಆಡುವ ಮಾತಿನ ಮೇಲೆ ನಿಗಾ ಇಲ್ಲದಿದ್ದರೆ, ಅವರಿಗೂ ಮತ್ತು ಅವರು ಪ್ರತಿನಿಧಿಸುವ ಪಕ್ಷಕ್ಕೂ ಶೋಭೆಯನ್ನು ತರುವುದಿಲ್ಲ. ಆದರೆ, ಈ ಉಪ ಚುನಾವಣೆಯ ಪ್ರಚಾರ ಸಾಗುತ್ತಿರುವ ರೀತಿಯನ್ನು ನೋಡಿದರೆ, ಪಕ್ಷಗಳು ಸಭ್ಯತೆಯನ್ನು ಕಳೆದುಕೊಳ್ಳುವತ್ತ ಸಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಂಘ ಪರಿವಾರ, ಬಿಜೆಪಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ. ಇವರ ಸಾಲುಸಾಲು ಟೀಕೆಗೆ ಉತ್ತರ ಕೊಡಲು, ಕರ್ನಾಟಕ ಬಿಜೆಪಿಯ ಐಟಿ ಘಟಕ ವೈಯಕ್ತಿಕ ಮಟ್ಟಕ್ಕೆ ಇಳಿದದ್ದು ವಿಷಾದನೀಯ.

 ಪೊಲೀಸ್‌ ಕ್ವಾಟ್ರಸ್‌ ಮೂರೇ ವರ್ಷಕ್ಕೇ ಬೀಳುತ್ತಿದೆ, ಇದಕ್ಕಿಂತ ಭ್ರಷ್ಟಾಚಾರ ಬೇಕಾ? ಪೊಲೀಸ್‌ ಕ್ವಾಟ್ರಸ್‌ ಮೂರೇ ವರ್ಷಕ್ಕೇ ಬೀಳುತ್ತಿದೆ, ಇದಕ್ಕಿಂತ ಭ್ರಷ್ಟಾಚಾರ ಬೇಕಾ?

ಮುಸ್ಲಿಂ ಸಮುದಾಯದ ಓಲೈಕೆಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್/ಮಾತಿನ ಸಮರ ನಡೆಯುತ್ತಿತ್ತು. ಇದರ ಜೊತೆಗೆ, ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಪ್ರಧಾನಿಯವರನ್ನು ಹೆಬ್ಬೆಟ್ಟು ಎಂದು ಸಂಭೋದಿಸಿತ್ತು. ಇದಕ್ಕೆ ವಿಷಾದ ವ್ಯಕ್ತ ಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಅನ್ನು ಡಿಲಿಟ್ ಮಾಡಿಸಿದ್ದರು.

ಆದರೂ, ಬಿಜೆಪಿಯವರು ರಾಹುಲ್ ಗಾಂಧಿಯವರನ್ನು ಡ್ರಗ್ಸ್ ಪೆಡ್ಲರ್ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದರು. ಇದನ್ನು ಬಿಜೆಪಿಯ ಕೆಲವು ಮುಖಂಡರು ಸಮರ್ಥಿಸಿಕೊಂಡಿದ್ದಾರೆ ಕೂಡಾ. ಈಗ, ಬಿಜೆಪಿಯ ಐಟಿ ಘಟಕ ಇನ್ನೊಂದು ಆವಾಂತರವನ್ನು ಮಾಡಿಕೊಂಡಿದೆ.

ಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ

ಕುಮಾರಸ್ವಾಮಿ ಮತ್ತು ಅವರ ತಂದೆ ಕುಟುಂಬ ರಾಜಕಾರಣ ಮಾಡಿಕೊಂಡು ಬಂದವರು

ಕುಮಾರಸ್ವಾಮಿ ಮತ್ತು ಅವರ ತಂದೆ ಕುಟುಂಬ ರಾಜಕಾರಣ ಮಾಡಿಕೊಂಡು ಬಂದವರು

"ಜೀವನವಿಡೀ ಕುಮಾರಸ್ವಾಮಿ ಮತ್ತು ಅವರ ತಂದೆ ಕುಟುಂಬ ರಾಜಕಾರಣ ಮಾಡಿಕೊಂಡು ಬಂದವರು. ಆರ್ ಎಸ್ ಎಸ್ ಶಾಖೆಗೆ ಬಂದರೆ, ಎಲ್ಲವೂ ಅರ್ಥವಾಗುತ್ತದೆ"ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಎಚ್ಡಿಕೆಗೆ ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, "ನನಗೆ RSS ಸಹವಾಸ ಬೇಡ, ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೆ, ನೀಲಿಚಿತ್ರ ನೋಡಿಕೊಂಡು ಇರಲಿಲ್ಲವೇ, ಸಂಘದ ಶಾಖೆ ಇವರಿಗೆ ಇದನ್ನೇ ಕಲಿಸಿದ್ದು. ಅದನ್ನು ಕಲಿಯಲು ನಾನು ಅಲ್ಲಿಗೆ ಹೋಗಬೇಕಾಗಿಲ್ಲ"ಎಂದು ಎಚ್ಡಿಕೆ ತಿರುಗೇಟು ನೀಡಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ (ದ್ವಿಪತ್ನಿ ವಿಚಾರದ ಬಗ್ಗೆ ಬಿಜೆಪಿ ಟ್ವೀಟ್)

ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ (ದ್ವಿಪತ್ನಿ ವಿಚಾರದ ಬಗ್ಗೆ ಬಿಜೆಪಿ ಟ್ವೀಟ್)

"√ ಸಿಗ್ನಲ್ ಜಂಪ್
√ ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ )
√ ಭ್ರಷ್ಟಾಚಾರ
√ ಸ್ವಜನ ಪಕ್ಷಪಾತ
√ ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ

ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ @hd_kumaraswamy ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ?" ಇದು ಕರ್ನಾಟಕ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ (ಟ್ವಿಟ್ಟರ್) ಘಟಕದಿಂದ ಮಾಡಲಾಗಿರುವ ಟ್ವೀಟ್. 'ಬೈಗಮಿ' ಎನ್ನುವ ಪದವನ್ನು ಬಿಜೆಪಿ ಇಲ್ಲಿ ಬಳಕೆ ಮಾಡಿದೆ. ಇದರ ಅರ್ಥ ದ್ವಿಪತ್ನಿ ಎಂದು

 ಅವರು ಬಳಸಿದ ಪದ, ಮುಂದಿನ ದಿನಗಳಲ್ಲಿ ಅವರಿಗೇ ತಿರುವುಮುರುವು ಆಗಲಿದೆ

ಅವರು ಬಳಸಿದ ಪದ, ಮುಂದಿನ ದಿನಗಳಲ್ಲಿ ಅವರಿಗೇ ತಿರುವುಮುರುವು ಆಗಲಿದೆ

"ಬಿಜೆಪಿಯವರು ಟ್ವೀಟ್ ನಲ್ಲಿ ನನ್ನ ಬಗ್ಗೆ ಏನು ಪದ ಬಳಕೆ ಮಾಡಿದ್ದಾರೋ, ಅದು ದಿನನಿತ್ಯ ಅದೇ ಆಧಾರದ ಮೇಲೆ ನಡೆಯುತ್ತಿರುವಂತದ್ದು. ಹಾಗಾಗಿ, ಅದರ ಬಗ್ಗೆ ಹೆಚ್ಚಿನ ಚರ್ಚೆ ಅನಾವಶ್ಯಕ. ಇತ್ತೀಚಿನ ನಮ್ಮ ಪಕ್ಷದ ಬೆಳವಣಿಗೆಯಿಂದ ಎರಡೂ ಪಕ್ಷಗಳಿಗೆ ಚಿಂತೆಯಾಗಿದೆ. ಬಿಜೆಪಿಯವರ ಮನೆಯಲ್ಲಿ ಹೆಗ್ಗಣ ಬಿದ್ದಿದೆ, ಅವರು ಮಾಡಿದಂತಹ ಕರ್ಮಕಾಂಡಗಳು, ಅವರು ಬಳಸಿದ ಪದ, ಮುಂದಿನ ದಿನಗಳಲ್ಲಿ ಅವರಿಗೇ ತಿರುವುಮುರುವು ಆಗಲಿದೆ"ಎಂದು ಕುಮಾರಸ್ವಾಮಿಯವರು ಬಿಜೆಪಿಯ ದ್ವಿಪತ್ನಿ ಪದ ಬಳಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕದ್ದುಮುಚ್ಚಿ ನಾನು ಯಾವುದನ್ನೂ ಮಾಡಿಲ್ಲ, ತಪ್ಪಾಗಿರುವುದನ್ನು ಸದನದಲ್ಲೇ ಪ್ರಸ್ತಾವಿಸಿದ್ದೇನೆ

ಕದ್ದುಮುಚ್ಚಿ ನಾನು ಯಾವುದನ್ನೂ ಮಾಡಿಲ್ಲ, ತಪ್ಪಾಗಿರುವುದನ್ನು ಸದನದಲ್ಲೇ ಪ್ರಸ್ತಾವಿಸಿದ್ದೇನೆ

"ನಾನು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರಕಾರವನ್ನು ಮಾಡಿರಬಹುದು, ಆದರೆ, ನಾನು ಯಾವುದಕ್ಕೂ ರಾಜಿಯಾಗುವುದಿಲ್ಲ. ಅಭಿವೃದ್ದಿ, ನಾಡಿನ ವಿಚಾರದ ಬಗ್ಗೆ ಮಾತನಾಡುವ ಬದಲು, ವೈಯಕ್ತಿಕ ವಿಚಾರವನ್ನು ಬಿಜೆಪಿಯವರು ಕೆದಕುತ್ತಿದ್ದಾರೆ. ಸಮಾಜದಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ, ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡಿದರೆ, ನಾನು ಅದಕ್ಕೆ ಉತ್ತರ ನೀಡಲು ಸಿದ್ದನಿದ್ದೇನೆ. ಕದ್ದುಮುಚ್ಚಿ ನಾನು ಯಾವುದನ್ನೂ ಮಾಡಿಲ್ಲ, ತಪ್ಪಾಗಿರುವುದನ್ನು ಸದನದ ಕಲಾಪದಲ್ಲೇ ಪ್ರಸ್ತಾವಿಸಿದ್ದೇನೆ. ನನ್ನದು ಏನಿದ್ದರೂ ತೆರೆದ ಪುಟ" ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

English summary
BJP Slams HD Kumaraswamy for his statement on RSS shakha; tweets about Former CM's second marriage. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X