ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬಿಎಸ್ವೈ ವಿರುದ್ದ ಲೆಕ್ಕಕ್ಕೂ, ಜಮೆಗೂ ಎರಡಕ್ಕೂ ಇಲ್ಲದ ಯತ್ನಾಳ್ ಹೇಳಿಕೆಯ ಹಿಂದಿನ ಅಘೋರ ಶಕ್ತಿ?

|
Google Oneindia Kannada News

ಕರ್ನಾಟಕ ರಾಜಕಾರಣದಲ್ಲಿ, ಅದು ಪಕ್ಷ ಯಾವುದೇ ಇರಲಿ, ಕೆಲವರ ಹೇಳಿಕೆ ಅಂತಹ ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ಆದರೂ, ತಮ್ಮದೇ ಪಕ್ಷದ ಮುಖಂಡರ ವಿರುದ್ದ ಘನಗೋರ ಆಪಾದನೆ/ಟೀಕೆಯನ್ನು ಮಾಡುತ್ತಲೇ ಇರುತ್ತಾರೆ. ಅಂತಹ, ನಾಯಕರಲ್ಲಿ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್.

ತನಗೆ ಗೂಟದ ಕಾರು ಸಿಗಲಿಲ್ಲ ಎನ್ನುವ ಕಾರಣಕ್ಕಾಗಿಯೋ ಏನೋ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೇರಾನೇರಾ ಟಾರ್ಗೆಟ್ ಮಾಡುತ್ತಿರುವ ಯತ್ನಾಳ್ ಅವರಿಗೆ, ಬಿಎಸ್ವೈ, ರಾಜ್ಯ ಬಿಜೆಪಿಗೆ ಒಂದು ಶಕ್ತಿ ಎನ್ನುವುದರ ಕನಿಷ್ಠ ಅರಿವು ಇದೆಯೋ ಎನ್ನುವದರ ಬಗ್ಗೆ ಬಿಜೆಪಿಯಲ್ಲೇ ಗೊಂದಲವಿದೆ.

ಸಿಎಂ ಯಡಿಯೂರಪ್ಪ ಬದಲಾವಣೆಗೆ ಕರ್ನಾಟಕದಲ್ಲಿ ಯುದ್ಧ ನಡೆಯುತ್ತಿದೆ!ಸಿಎಂ ಯಡಿಯೂರಪ್ಪ ಬದಲಾವಣೆಗೆ ಕರ್ನಾಟಕದಲ್ಲಿ ಯುದ್ಧ ನಡೆಯುತ್ತಿದೆ!

ಅದೇನೋ ಇರಲಿ, ಯತ್ನಾಳ್, ಯಡಿಯೂರಪ್ಪನವರ ಬಗ್ಗೆ ಕಟುವಾದ ಹೇಳಿಕೆ ನೀಡುತ್ತಿರುವುದು ಇಂದು ನಿನ್ನೆಯ ವಿಚಾರವೇನೂ ಅಲ್ಲ. ಅವರ ಹೇಳಿಕೆಗೆ ಬಿಎಸ್ವೈ ಪ್ರತಿಕ್ರಿಯಿಸುವ ಒತ್ತಡವನ್ನೂ ತೆಗೆದುಕೊಳ್ಳುತ್ತಿಲ್ಲ. ಒಂದು ಬಾರಿ, ಅವರನ್ನು ಕರೆದು ಮಾತಾಡಿಸಿದ್ದರು.

ಸಿಎಂ ಯಡಿಯೂರಪ್ಪ ಕುರಿತು ಸ್ಪೋಟಕ ಮಾಹಿತಿ ಹೊರಹಾಕಿದ ಸಿದ್ದರಾಮಯ್ಯ!ಸಿಎಂ ಯಡಿಯೂರಪ್ಪ ಕುರಿತು ಸ್ಪೋಟಕ ಮಾಹಿತಿ ಹೊರಹಾಕಿದ ಸಿದ್ದರಾಮಯ್ಯ!

ಆದರೆ, ತಮ್ಮದೇ ಪಕ್ಷದ ಮುಖ್ಯಮಂತ್ರಿಯನ್ನು ಸಾರ್ವಜನಿಕವಾಗಿ ಮತ್ತು ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಯತ್ನಾಳ್ ಮಾತಾಡುತ್ತಿದ್ದಾರೆಂದರೆ, ಅದಕ್ಕೆ, ಬಿಜೆಪಿಯಲ್ಲೇ ಒಂದು ಬೆನ್ನೆಲುಬು ಇಲ್ಲದೇ ಇರಲು ಸಾಧ್ಯವೇ?

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೊಸದೇನೂ ಅಲ್ಲ

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೊಸದೇನೂ ಅಲ್ಲ

ಮುಖ್ಯಮಂತ್ರಿ ಬದಲಾವಣೆ ವಿಚಾರ ಹೊಸದೇನೂ ಅಲ್ಲ. ಆದರೆ, ಇಂತಹ ಪ್ರಮುಖ ನಿರ್ಧಾರದ ಬಗ್ಗೆ ಹೇಳಿಕೆ ನೀಡಲು ಬಸವನಗೌಡ ಯತ್ನಾಳ್ ಯಾರು. ಉಪಚುನಾವಣೆಯ ವೇಳೆ, ತಮ್ಮದೇ ಪಕ್ಷದವರ ಇಂತಹ ಹೇಳಿಕೆ, ಪಕ್ಷಕ್ಕೆ ರಿವರ್ಸ್ ಆಗಬಹುದು ಎನ್ನುವ ಸಾಧ್ಯತೆಯಿದ್ದರೂ, ಅವರ ಬಾಯಿಮುಚ್ಚಿಸುವ ಕೆಲಸ ಯಾಕೆ ನಡೆಯುತ್ತಿಲ್ಲ ಎನ್ನುವುದು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿರುವ ಮಾತು.

ಸಿಎಂ ಆಗಿ ಬಿಎಸ್ವೈ ಇನ್ನೇನು ಸ್ವಲ್ಪದಿನ ಮಾತ್ರ ಎನ್ನುವ ಹೇಳಿಕೆ

ಸಿಎಂ ಆಗಿ ಬಿಎಸ್ವೈ ಇನ್ನೇನು ಸ್ವಲ್ಪದಿನ ಮಾತ್ರ ಎನ್ನುವ ಹೇಳಿಕೆ

ಹಾಗಿದ್ದರೂ, ಯತ್ನಾಳ್ ಹೇಳಿಕೆಯ ಬಗ್ಗೆ ಬಿಜೆಪಿಯ ಆಯಕಟ್ಟಿನ ಮುಖಂಡರು ಪ್ರತಿಕ್ರಿಯಿಸುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ. ಸಿಎಂ ಆಗಿ ಬಿಎಸ್ವೈ ಇನ್ನೇನು ಸ್ವಲ್ಪದಿನ ಮಾತ್ರ ಎನ್ನುವ ಹೇಳಿಕೆಯನ್ನು ಯತ್ನಾಳ್ ನೀಡುತ್ತಿರುವುದು ಇದೇನು ಮೊದಲಲ್ಲ. ಹಾಗಾದರೆ, ಯತ್ನಾಳ್ ಅವರನ್ನು ಯಾರಾದರೂ ಮುಂದಕ್ಕೆ ಬಿಡುತ್ತಿದ್ದಾರಾ ಎನ್ನುವ ಪ್ರಶ್ನೆ, ಬಿಜೆಪಿ ಕಾರ್ಯಕರ್ತರಲ್ಲಿ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

2010ರಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲವೆಂದು ದೇವೇಗೌಡ್ರಿಗೆ ಜೈ ಎಂದವರು

2010ರಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲವೆಂದು ದೇವೇಗೌಡ್ರಿಗೆ ಜೈ ಎಂದವರು

ಬಸವನಗೌಡ ಯತ್ನಾಳ್ ಏನೂ ಸಚ್ಚಾರಿತ್ರ್ಯದ ರಾಜಕೀಯವನ್ನು ಹೊಂದಿಲ್ಲ. 2010ರಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲವೆಂದು ದೇವೇಗೌಡ್ರಿಗೆ ಜೈ ಎಂದವರು. ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿ, ಮುಖಭಂಗಗೊಂಡು ಮತ್ತೆ ಬಿಜೆಪಿಗೆ ಸೇರಿದವರು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಫರ್ ಅನ್ನು ಗೌಡ್ರು ನೀಡಿದ್ದರೂ, ಅದನ್ನು ಒಲ್ಲೆ ಅಂದಿದ್ದರು.

Recommended Video

India China Border : ಇವರು ಬುದ್ದಿ ಕಲಿಯಲ್ಲಾ | Oneindia Kannada
ಯತ್ನಾಳ್ ಹಿಂದಿನ ಅಘೋರ ಶಕ್ತಿಗಳು ಕರಾವಳಿ ಮೂಲದವರಾ?

ಯತ್ನಾಳ್ ಹಿಂದಿನ ಅಘೋರ ಶಕ್ತಿಗಳು ಕರಾವಳಿ ಮೂಲದವರಾ?

ಮೂಲಗಳ ಪ್ರಕಾರ, ಯತ್ನಾಳ್ ಎಷ್ಟು ಯಡಿಯೂರಪ್ಪನವರ ವಿರುದ್ದ ಮಾತನಾಡುತ್ತಾರೋ, ಅಷ್ಟು ಬಿಎಸ್ವೈ ತಮ್ಮ ಬಲವೃದ್ದಿ ಮಾಡಿಕೊಳ್ಳುತ್ತಿದ್ದಾರೆ. ಬಿಎಸ್ವೈ ವಿರುದ್ದ ಹಿಂಬಾಗಿಲಿನಿಂದ ಯಾರು ಕತ್ತಿಮಸಿಯುತ್ತಿದ್ದಾರೆ ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಹಾಗಾದರೆ, ಯತ್ನಾಳ್ ಹಿಂದಿನ ಅಘೋರ ಶಕ್ತಿಗಳು ಕರಾವಳಿ ಮೂಲದವರಾ?

English summary
BJP Senior Leader And MLA Basangouda Patil Yatnal Keep On Targeting CM Yediyurappa, Party Leaders Silence On This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X