ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀರ್ ಮನೆ ಮೇಲೆ ಇಡಿ ದಾಳಿ ಹಿಂದಿನ ರೂವಾರಿ ಯಾರು? ಬಿಜೆಪಿ ಸ್ಪೋಟಕ ಹೇಳಿಕೆ

|
Google Oneindia Kannada News

ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ/ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಇಲಾಖೆಯ ಅಧಿಕಾರಿಗಳ ದಾಳಿ, ಈಗ ನಿರೀಕ್ಷೆಯಂತೆ ರಾಜಕೀಯ ಆಯಾಮವನ್ನು ಪಡೆಯುತ್ತಿದೆ. ಕಾಂಗ್ರೆಸ್-ಬಿಜೆಪಿ ಕೆಸೆರೆರೆಚಾಟ ನಡೆಸುತ್ತಿದೆ.

ದಾಳಿಯ ನಂತರ ಮಾಧ್ಯಮದರಿಗೆ ಪ್ರತಿಕ್ರಿಯೆ ನೀಡಿದ್ದ ಜಮೀರ್, ನನ್ನ ವಿರೋಧಿಗಳು ದೂರು ನೀಡಿರಬಹುದು ಎನ್ನುವ ಆರೋಪವನ್ನು ಮಾಡಿದ್ದಾರೆ. ಹಾಗಾದರೆ, ಜಮೀರ್ ವಿರುದ್ದ ಹೋಗಿರುವ ಮೂರು ದೂರುಗಳನ್ನು ನೀಡಿರುವವರು ಯಾರು ಎನ್ನುವ ಪ್ರಶ್ನೆ, ಕಾಂಗ್ರೆಸ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ!ಶಾಸಕ ಜಮೀರ್ ಅಹಮದ್ ರಾಜ ವಿಲಾಸಿ ಬಂಗಲೆ ರಹಸ್ಯ ಸ್ಟೋರಿ!

"ನನ್ನ ಮನೆಯ ನಿರ್ಮಾಣದ ಸಂಬಂಧ ದಾಳಿ ನಡೆಸಿದ್ದಾರೆ, ನನ್ನ ವಿರುದ್ಧ ಮೂರು ನಾಲ್ಕು ದೂರುಗಳು ಹೋಗಿದ್ದಾವಂತೆ. ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳಿಗೆ ಎಲ್ಲಾ ಸಹಕಾರ ನೀಡಿದ್ದೇವೆ. ಮನೆ ನಿರ್ಮಾಣಕ್ಕೆ ಮಾಡಿದ ವೆಚ್ಚದ ಬಗ್ಗೆ ಮಾಹಿತಿ ಕೇಳಿದರು, ನಾನು 2006 ರಲ್ಲಿ ಈ ಜಾಗ ತೆಗೆದುಕೊಂಡಾಗಿನಿಂದ ದಾಖಲೆ ನೀಡಿದ್ದಾನೆ" ಎಂದು ಜಮೀರ್ ಹೇಳಿದ್ದರು.

 ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಇಡಿ ದಾಳಿಯ ಸೀಕ್ರೇಟ್ ಏನು? ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಇಡಿ ದಾಳಿಯ ಸೀಕ್ರೇಟ್ ಏನು?

ಜಮೀರ್ ವಿರುದ್ದ ಇಡಿಗೆ ದೂರು ನೀಡಿದವರು ಯಾರು? ಬಿಜೆಪಿಯವರ ಪ್ರಕಾರ, ಕಾಂಗ್ರೆಸ್ಸಿನ ಇಬ್ಬರು ಹಿರಿಯ ನಾಯಕರ ಚಿತಾವಣಿಯೇ ದಾಳಿಗೆ ಕಾರಣ. ಆದರೆ, ಕಾಂಗ್ರೆಸ್ಸಿನವರ ಪ್ರಕಾರ, ಬಿಜೆಪಿಯಲ್ಲಿ ಎಲ್ಲರೂ ಸಾಚಾನಾ, ಇದೊಂದು ಪೂರ್ವನಿಯೋಜಿತ ದಾಳಿ ಎನ್ನುವುದು.

ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ

ಬುರುಡೆ ರಾಮಯ್ಯ ಎನ್ನುವ ಹ್ಯಾಷ್ ಟ್ಯಾಗ್ ಅನ್ನು ಬಿಜೆಪಿ ಕರ್ನಾಟಕ ಘಟಕ ಟ್ವೀಟ್ ಮಾಡಿದ್ದು ಹೀಗೆ, "ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ #IMAZameer ಈಗ #ED ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ @siddaramaiah ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆ!" ಎನ್ನುವ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ.

 ಐವತ್ತು ಸಾವಿರ ಲೀಡ್ ನಿಂದ ಅವರನ್ನು ವಿನ್ ಮಾಡಿಸುವ ಜವಾಬ್ದಾರಿ ನನ್ನದು

ಐವತ್ತು ಸಾವಿರ ಲೀಡ್ ನಿಂದ ಅವರನ್ನು ವಿನ್ ಮಾಡಿಸುವ ಜವಾಬ್ದಾರಿ ನನ್ನದು

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಎಲ್ಲಿಂದ ಸ್ಪರ್ಧಿಸಬೇಕು ಎನ್ನುವುದು ಈಗಲೇ ಚರ್ಚೆಯ ವಿಷಯವಾಗಿದೆ. ಬಾದಾಮಿಯಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರೂ, ಚಾಮರಾಜಪೇಟೆಯ ಹೆಸರೂ ಕೇಳಿ ಬರುತ್ತಿದೆ. ಖುದ್ದು, ಕ್ಷೇತ್ರದ ಹಾಲೀ ಶಾಸಕರಾದ ಜಮೀರ್ ಅಹ್ಮದ್ ಖಾನ್ ಅವರು, "ಸಿದ್ದರಾಮಯ್ಯನವರು ಇಲ್ಲಿಂದ ಸ್ಪರ್ಧಿಸಲಿ. ನಾಮಪತ್ರ ಸಲ್ಲಿಸಿ ಹೋಗಲಿ, ಐವತ್ತು ಸಾವಿರ ಲೀಡ್ ನಿಂದ ಅವರನ್ನು ವಿನ್ ಮಾಡಿಸಿಕೊಂಡು ಬರುವ ಜವಾಬ್ದಾರಿ ನನ್ನದು" ಎಂದು ಜಮೀರ್ ಹೇಳಿದ್ದರು.

 ಸಚಿವ ಎಸ್.ಟಿ.ಸೋಮಶೇಖರ್ ಆರೋಪ, ಕಾಂಗ್ರೆಸ್ಸಿನವರಿಗೇ ಬೊಟ್ಟು ತೋರಿದ ಸಚಿವರು

ಸಚಿವ ಎಸ್.ಟಿ.ಸೋಮಶೇಖರ್ ಆರೋಪ, ಕಾಂಗ್ರೆಸ್ಸಿನವರಿಗೇ ಬೊಟ್ಟು ತೋರಿದ ಸಚಿವರು

"ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿಯ ಹಿಂದೆ ರಾಜಕೀಯವಿಲ್ಲ. ಆ ಸಂಸ್ಥೆಗೆ (ಐಎಂಐ) ಸಂಬಂಧ ಪಟ್ಟವರು ದೂರು ನೀಡಿರಬಹುದು. ಈ ವಿಚಾರದಲ್ಲಿ ಕಾಂಗ್ರೆಸ್ಸಿನವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೊಂಡು ಬರುತ್ತಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರಿಗೆ ಅಜೀರ್ಣವಾಗಿರುತ್ತದೆ. ಅವರಿಗೆ ಇದರ ಅನುಭವ ಎಲ್ಲಾ ಇದೆ"ಎಂದು ಸಚಿವ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.

Recommended Video

ಬೊಮ್ಮಾಯಿ ಸಂಪುಟದಿಂದ ವಿಜಯೇಂದ್ರ ಹೊರಗೆ | Oneindia Kannada
 ಡಿ.ಕೆ.ಶಿವಕುಮಾರ್ ಅವರಿಗೆ ಈ ಐಟಿ/ಇಡಿ ದಾಳಿಯ ಬಗ್ಗೆ ಭಾರೀ ಅನುಭವವಿದೆ

ಡಿ.ಕೆ.ಶಿವಕುಮಾರ್ ಅವರಿಗೆ ಈ ಐಟಿ/ಇಡಿ ದಾಳಿಯ ಬಗ್ಗೆ ಭಾರೀ ಅನುಭವವಿದೆ

"ಡಿ.ಕೆ.ಶಿವಕುಮಾರ್ ಅವರಿಗೆ ಈ ಐಟಿ/ಇಡಿ ದಾಳಿಯ ಬಗ್ಗೆ ಭಾರೀ ಅನುಭವವಿದೆ, ಅವರೇ ಯಾಕೆ ಇಡಿಯ ಬಳಿ ಜಮೀರ್ ಅಹ್ಮದ್ ಖಾನ್ ವಿರುದ್ದ ಯಾಕೆದೂರು ನೀಡಿರಬಾರದು"ಎಂದು ಪ್ರಶ್ನಿಸಿರುವ ಸೋಮಶೇಖರ್, "ಡಿಕೆಶಿಯವರೇ ಮಾಹಿತಿಯನ್ನು ಸೋರಿಕೆ ಮಾಡಿ, ದಾಳಿ ನಡೆಸಲು ಕಾರಣರಾಗಿರಬಹುದು. ಹಾಗಾಗಿ, ಕೆಲವೊಂದು ವಿಚಾರಗಳಲ್ಲಿ ರಾಜಕೀಯ ತೂರಿಸಲು ಹೋಗಬಾರದು"ಎಂದು ಸೋಮಶೇಖರ್ ಸಲಹೆಯನ್ನು ನೀಡಿದ್ದಾರೆ.

English summary
Karnataka BJP says Siddaramaiah is the Person Behind ED Raid on Congress MLA Zameer Ahmed Khan. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X