ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟೀಲ್ ಹೇಳಿರುವುದು ಸರಿ, 'ನಮಗೆ' ಇರುವುದು 36 ಜಿಲ್ಲೆ: ಬಿಜೆಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಕರ್ನಾಟಕದಲ್ಲಿ 34 ಜಿಲ್ಲೆಗಳು ಇವೆಯೆಂದು ಹೆಳಿ ಹಾಸ್ಯಕ್ಕೆ ಗುರಿಯಾಗಿರುವ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

ಬಿಜೆಪಿ ಸಂಘಟನೆ ದೃಷ್ಟಿಯಿಂದ ಕರ್ನಾಟಕವನ್ನು 36 ಜಿಲ್ಲೆಗಳಾಗಿ ನಾವು ವಿಗಂಡಿಸಿಕೊಂಡಿದ್ದೇವೆ ಎಂದು ಬಿಜೆಪಿ ಸದಸ್ಯರು ತಮ್ಮ ಅಧ್ಯಕ್ಷರ ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 36 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಹೆಸರಿನ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿರುವ ಜಿಲ್ಲೆಗಳೆಷ್ಟು?: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರಕಾರ 34! ರಾಜ್ಯದಲ್ಲಿರುವ ಜಿಲ್ಲೆಗಳೆಷ್ಟು?: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರಕಾರ 34!

Recommended Video

Bharat Ratna for Veer Savarkar Maharshtra BJP Manifesto

ಯಾದಗಿರಿ ಜಿಲ್ಲೆಗೆ ನಿನ್ನೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿದ್ದು ಈಗ 32 ನೇ ಜಿಲ್ಲೆಗೆ ನಾನು ಬಂದಿದ್ದೇನೆ ಎಂದು ಹೇಳಿದ್ದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು 'ರಾಜ್ಯದ 34 ಜಿಲ್ಲೆಗೆ ಭೇಟಿ ನೀಡಿದ್ದೇನೆ' ಎಂದು ಹೇಳಿದ್ದರು.

'ರಾಜ್ಯದ ಮಾಹಿತಿ ಇಲ್ಲದವರಿಗೆ ರಾಜ್ಯಾಧ್ಯಕ್ಷ ಸ್ಥಾನ'

'ರಾಜ್ಯದ ಮಾಹಿತಿ ಇಲ್ಲದವರಿಗೆ ರಾಜ್ಯಾಧ್ಯಕ್ಷ ಸ್ಥಾನ'

ನಳಿನ್ ಕುಮಾರ್ ಕಟೀಲ್ ಅವರ ಈ ಹೇಳಿಕೆ ಭಾರಿ ಟ್ರೋಲ್‌ಗೆ ಗುರಿಯಾಗಿತ್ತು, ಕರ್ನಾಟಕದಲ್ಲಿ ಇರುವುದು 30 ಜಿಲ್ಲೆಗಳು ಆದರೆ ಕಟೀಲ್ ಅವರು 34 ಜಿಲ್ಲೆ ಎಂದು ಹೇಳುತ್ತಿದ್ದಾರೆ. ರಾಜ್ಯದ ಬಗ್ಗೆ ಮಾಹಿತಿ ಇಲ್ಲದವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ ಎಂದು ಹಾಸ್ಯ ಮಾಡಲಾಗಿತ್ತು.

ನೋಟೀಸ್ ಗೆ ಉತ್ತರ ಕೊಡದ ಯತ್ನಾಳ್ ಗೆ ನಳಿನ್ ಚಾಟಿನೋಟೀಸ್ ಗೆ ಉತ್ತರ ಕೊಡದ ಯತ್ನಾಳ್ ಗೆ ನಳಿನ್ ಚಾಟಿ

36 ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

36 ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಆದರೆ ತಮ್ಮ ಪಕ್ಷದ ಅಧ್ಯಕ್ಷನ ಬೆಂಬಲಕ್ಕೆ ಬಂದಿರುವ ಬಿಜೆಪಿ ಬೆಂಬಲಿಗರು ಬಿಜೆಪಿಯು ಪಕ್ಷ ಸಂಘಟನೆಯ ಅನುಕೂಲಕ್ಕಾಗಿ ರಾಜ್ಯವನ್ನು 36 ಜಿಲ್ಲೆಗಳಾಗಿ ವಿಭಾಗ ಮಾಡಿಕೊಂಡಿದೆ ಎಂದು ಹೇಳಿದ್ದು, 36 ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಟೀಲ್ ಎರಡು ಸಂಖ್ಯೆ ಹೇಳಿದ್ದಾರೆ, ಯಾವುದು ಸರಿ?

ಕಟೀಲ್ ಎರಡು ಸಂಖ್ಯೆ ಹೇಳಿದ್ದಾರೆ, ಯಾವುದು ಸರಿ?

ಬಿಜೆಪಿ ಸದಸ್ಯರು ಬೆಂಬಲಕ್ಕೆ ನಿಂತರೂ ನಳಿನ್ ಕಟೀಲ್ ಮೇಲೆ ಟ್ರೋಲ್ ದಾಳಿ ನಿಂತಿಲ್ಲ. ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇರುವುದು 36 ಜಿಲ್ಲೆ ಆದರೆ ಕಟೀಲ್ ಅವರು ನಿನ್ನೆ ಮೊದಲಿಗೆ 'ರಾಜ್ಯದ 31 ಜಿಲ್ಲೆ ಪ್ರವಾಸ ಮಾಡಿದ್ದು ಈಗ 32ನೇ ಜಿಲ್ಲೆಗೆ ಬಂದಿದ್ದೇನೆ' ಎಂದ್ದಿದ್ದರು, ನಂತರ ಭಾಷಣದಲ್ಲಿ ಮಾತನಾಡುತ್ತಾ 34 ಜಿಲ್ಲೆ ಎಂದರು ಹಾಗಿದ್ದರೆ ಯಾವುದು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಬಿಜೆಪಿ ಮೇಲಿನ ಯಡಿಯೂರಪ್ಪ ಹಿಡಿತ ತಪ್ಪಿಸಲು ನಳಿನ್ ಕಟೀಲ್ ಯತ್ನಬಿಜೆಪಿ ಮೇಲಿನ ಯಡಿಯೂರಪ್ಪ ಹಿಡಿತ ತಪ್ಪಿಸಲು ನಳಿನ್ ಕಟೀಲ್ ಯತ್ನ

ತಪ್ಪನ್ನು ಒಪ್ಪಿಕೊಂಡರೆ ಏನಾಗಿಬಿಡುತ್ತದೆ?

ತಪ್ಪನ್ನು ಒಪ್ಪಿಕೊಂಡರೆ ಏನಾಗಿಬಿಡುತ್ತದೆ?

ಅಷ್ಟೂ ಅಲ್ಲದೆ, ಆದ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳದೆ ಅದರ ಸಮರ್ಥನೆಗೆ ಇಳಿದಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

English summary
BJP releases 36 districts list in support of BJP president Nalin Kumar Kateel statement. BJP says, 'For party sake we created some extra districts, so Nalin Kumar is right'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X