• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ಸಂಜೆ 4 ಗಂಟೆಗೆ ಬೆಂಗಳೂರಿಗೆ ಜೆ. ಪಿ. ನಡ್ಡಾ ಆಗಮನ

|
Google Oneindia Kannada News

ಬೆಂಗಳೂರು, ಜುಲೈ 27; ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಂದುವರೆದಿದೆ. ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದು, ಹೊಸ ಮುಖ್ಯಮಂತ್ರಿ ಯಾರು? ಎಂಬ ಕುತೂಹಲ ಮುಂದುವರೆದಿದೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆಗಮಿಸುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ.

ಬಿಕ್ಕಟ್ಟಿನಲ್ಲೇ ಬಿಎಸ್‌ವೈ ನಿರ್ಗಮನ; ಹಿಂದಿನ ನೆನಪುಗಳು ಬಿಕ್ಕಟ್ಟಿನಲ್ಲೇ ಬಿಎಸ್‌ವೈ ನಿರ್ಗಮನ; ಹಿಂದಿನ ನೆನಪುಗಳು

ಹೊಸ ಮುಖ್ಯಮಂತ್ರಿ ಆಯ್ಕೆಗೆ ಶಾಸಕರ ಜೊತೆ ಸಭೆ ನಡೆಸಲು ಕೇಂದ್ರಿಂದ ವೀಕ್ಷಕರಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಆಗಮಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾ ಎಂಬ ಸುದ್ದಿ ಇತ್ತು. ಆದರೆ ಅವರು ತಝಕಿಸ್ತಾನ್ ಪ್ರವಾಸಕ್ಕೆ ತೆರಳಲಿದ್ದಾರೆ.

ಬಿಎಸ್‌ವೈ ರಾಜೀನಾಮೆ; ದೆಹಲಿಯಿಂದ ಬರಲಿದ್ದಾರೆ ಬಿಜೆಪಿ ವೀಕ್ಷಕರು ಬಿಎಸ್‌ವೈ ರಾಜೀನಾಮೆ; ದೆಹಲಿಯಿಂದ ಬರಲಿದ್ದಾರೆ ಬಿಜೆಪಿ ವೀಕ್ಷಕರು

ಶಾಸಕರಿಗೆ ಸಂದೇಶ; ಬಿಜೆಪಿಯ ಎಲ್ಲಾ ಶಾಸಕರಿಗೆ ಬೆಂಗಳೂರಿಗೆ ಬರುವಂತೆ ಸಂದೇಶ ರವಾನೆ ಮಾಡಲಾಗಿದೆ. ಬುಧವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆ ಇದ್ದು, ಸಭೆಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಣೆ ನಡೆಯಲಿದೆ.

ಯಡಿಯೂರಪ್ಪ ವರಿಷ್ಟರಿಗೆ ಕೊಟ್ಟ ಸಂದೇಶವೇನು ಯಡಿಯೂರಪ್ಪ ವರಿಷ್ಟರಿಗೆ ಕೊಟ್ಟ ಸಂದೇಶವೇನು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಅರುಣ್ ಸಿಂಗ್ ರಾಜ್ಯದ ಹಿರಿಯ ನಾಯಕರ ಜೊತೆ ಇಂದು ಸಭೆ ಪ್ರತ್ಯೇಕ ಸಭೆ ನಡೆಸುವ ನಿರೀಕ್ಷೆ ಇದೆ. ಸೋಮವಾರ ರಾತ್ರಿ ಬಿ. ಎಲ್. ಸಂತೋಷ್ ಸಹ ಬೆಂಗಳೂರಿಗೆ ಬಂದಿದ್ದು, ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ಹೈಕಮಾಂಡ್ ನಾಯಕರ ತಂಡ ಪ್ರತಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಿದ್ದಾರೆಯೇ? ಅಥವ ಒಟ್ಟಾಗಿ ಶಾಸಕರ ಜೊತೆ ಸಭೆ ನಡೆಸಲಿದ್ದಾರೆಯೇ? ಎಂಬುದು ಇನ್ನೂ ಅಂತಿಮವಾಗಿಲ್ಲ.

ಭಾರೀ ಮಳೆ, ಪ್ರವಾಹ ಪರಿಸ್ಥಿತಿ ಹಿನ್ನಲೆಯಲ್ಲಿ ಹಲವಾರು ಶಾಸಕರು ಕ್ಷೇತ್ರದಲ್ಲಿದ್ದಾರೆ. ಎಲ್ಲರಿಗೂ ಬೆಂಗಳೂರಿಗೆ ಆಗಮಿಸುವಂತೆ ಸಂದೇಶವನ್ನು ಪಕ್ಷದ ವತಿಯಿಂದ ಕಳಿಸಲಾಗಿದೆ.

   ಯಡಿಯೂರಪ್ಪರನ್ನು ಹೊಗಳಿದ ಜೆ ಪಿ ನಡ್ಡಾ: ಹಾಗಾದ್ರೆ ಸಿಎಂ ಸೇಫಾಗ್ತಾರಾ?? | Oneindia Kannada

   ಹಂಗಾಮಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ಕಾವೇರಿ' ನಿವಾಸದಲ್ಲಿದ್ದಾರೆ. ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಕೆಲವು ಶಾಸಕರು ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.

   English summary
   Karnataka chief minister B. S. Yediyurappa submitted resignation on July 26, 2021. BJP president J. P. Nadda will come to Bengaluru today for next process.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X