ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

28 ಕೋಟಿ ರೂಪಾಯಿ ಬಿಜೆಪಿ ಹಣಕ್ಕೆ ಸೇಲ್ ಆದ್ರಾ ಎಚ್.ವಿಶ್ವನಾಥ್?

|
Google Oneindia Kannada News

Recommended Video

ಬಿಜೆಪಿ ಹಣಕ್ಕೆ ಸೇಲ್ ಆದ್ರಾ ಎಚ್.ವಿಶ್ವನಾಥ್?| SR Mahesh | Oneindia Kannada

ಬೆಂಗಳೂರು, ಜುಲೈ 19: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‌ನಲ್ಲಿ ತಂಗಿರುವ ಎಚ್.ವಿಶ್ವನಾಥ್ ಅವರು ಬಿಜೆಪಿ ನೀಡಿದ 28 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರಾ ಎಂಬ ಅನುಮಾನ ಇಂದಿನ ಸದನದಲ್ಲಿ ನಡೆದ ಚರ್ಚೆಯಿಂದ ಮುಂದೆ ಬಂದಿದೆ.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ಬಿಜೆಪಿಯ ಸದಸ್ಯರು ನನಗೆ ಐದು ಕೋಟಿ ರೂಪಾಯಿ ನೀಡಲು ಮನೆಗೆ ಬಂದಿದ್ದರು ಎಂದು ಹೆಸರುಗಳ ಸಮೇತ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಹೇಳಿದರು. ನಂತರ ಮಾತನಾಡಿದ ಸಾ.ರಾ.ಮಹೇಶ್ ಅವರು, ಅವರ ಮತ್ತು ಎಚ್.ವಿಶ್ವನಾಥ್ ಅವರ ನಡುವೆ ನಡೆದ ಸಂಭಾಷಣೆಯನ್ನು ಸದನದ ಮುಂದೆ ಬಿಚ್ಚಿಟ್ಟರು.

ವಿಶ್ವಾಸಮತ LIVE: ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್ವಿಶ್ವಾಸಮತ LIVE: ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್

'ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಮಾತನಾಡಿದಾಗ ನಾನು ಅವರನ್ನು ತೋಟದಲ್ಲಿ ಭೇಟಿಯಾಗಿ ನಿಮಗೆ ಮಂತ್ರಿ ಆಗುವ ಆಸೆ ಇದೆಯೇ ಎಂದು ಕೇಳಿದ್ದೆ. ಅದಕ್ಕೆ ಉತ್ತರಿಸಿದ ವಿಶ್ವನಾಥ್ ಹಾಗೇನೂ ಇಲ್ಲ, ಈ ಚುನಾವಣೆಯಲ್ಲಿ ಕೆಲವು ಸಾಲ ಮಾಡಿಕೊಂಡಿದ್ದೇನೆ, ಇದೇ ಸಮಯದಲ್ಲಿ ಬಿಜೆಪಿಯವರು ಪಕ್ಷಕ್ಕೆ ಬಂದರೆ 28 ಕೋಟಿ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ತಮ್ಮ ಬಳಿ ಅಂದು ಹೇಳಿದ್ದರು ಎಂದು ಸಾ.ರಾ.ಮಹೇಶ್ ಬಹಿರಂಗ ಪಡಿಸಿದರು.

ಚುನಾವಣೆಗೆ ಸಾಲ ಮಾಡಿಕೊಂಡಿದ್ದರು ವಿಶ್ವನಾಥ್: ಸಾ.ರಾ.ಮಹೇಶ್

ಚುನಾವಣೆಗೆ ಸಾಲ ಮಾಡಿಕೊಂಡಿದ್ದರು ವಿಶ್ವನಾಥ್: ಸಾ.ರಾ.ಮಹೇಶ್

ನನಗೆ ದೇವೇಗೌಡ ಅವರು ರಾಜಕೀಯ ಪುನರ್‌ ಜೀವನ ಕೊಟ್ಟಿದ್ದಾರೆ, ನಾನು ಪಕ್ಷ ಬಿಟ್ಟು ಹೋಗಲ್ಲ. ಆದರೆ ಚುನಾವಣೆ ಎದುರಿಸಲು ಸ್ವಲ್ಪ ಸಾಲ ಮಾಡಿಕೊಂಡಿದ್ದೇನೆ, ಆ ಸಾಲವನ್ನು ತೀರಿಸಲು ವ್ಯವಸ್ಥೆ ಮಾಡು ಎಂದು ನನಗೆ ಹೇಳಿದ್ದರು. ಬಿಜೆಪಿಯವರು ಅಂದು ಒಬ್ಬ ಪತ್ರಕರ್ತನ ಕಡೆಯಿಂದ ಆಫರ್ ಕಳುಹಿಸಿದ್ದರು ಎಂದು ಸಾ.ರಾ.ಮಹೇಶ್ ಹೇಳಿದರು.

'ಪತ್ರಕರ್ತ ಈಗಲೂ ವಿಧಾನಸೌಧದಲ್ಲಿ ಇದ್ದಾರೆ, ಹೆಸರು ಹೇಳಬಲ್ಲೆ'

'ಪತ್ರಕರ್ತ ಈಗಲೂ ವಿಧಾನಸೌಧದಲ್ಲಿ ಇದ್ದಾರೆ, ಹೆಸರು ಹೇಳಬಲ್ಲೆ'

ಅಷ್ಟೆ ಅಲ್ಲದೆ ಆ ಪತ್ರಕರ್ತ ಈಗ ಸದನದಲ್ಲಿ ಉಪಸ್ಥಿತರಿದ್ದಾರೆ ಸ್ಪೀಕರ್ ಅವರು ಒಪ್ಪುವುದಾದರೆ ನಾನು ಆ ಪತ್ರಕರ್ತನ ಹೆಸರನ್ನೂ ಹೇಳಲು ತಯಾರಾಗಿದ್ದೇನೆ ಎಂದು ಸಾ.ರಾ.ಮಹೇಶ್ ಹೇಳಿದರು. ಆದರೆ ಸ್ಪೀಕರ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ.

ಬಿಜೆಪಿ 'ಕೊಳ್ಳುಬಾಕತನ'ವನ್ನು ಸದನದಲ್ಲಿ ಬಯಲು ಮಾಡಿದ ಜೆಡಿಎಸ್ ಶಾಸಕಬಿಜೆಪಿ 'ಕೊಳ್ಳುಬಾಕತನ'ವನ್ನು ಸದನದಲ್ಲಿ ಬಯಲು ಮಾಡಿದ ಜೆಡಿಎಸ್ ಶಾಸಕ

'ಅಮೆರಿಕದಿಂದ ನಾನು ಕರೆ ಮಾಡಿ ಹಣ ನೀಡುವುದಾಗಿ ಹೇಳಿದ್ದೆ'

'ಅಮೆರಿಕದಿಂದ ನಾನು ಕರೆ ಮಾಡಿ ಹಣ ನೀಡುವುದಾಗಿ ಹೇಳಿದ್ದೆ'

ಮುಂದುವರೆದು ಮಾತನಾಡಿದ ಸಾ.ರಾ.ಮಹೇಶ್, ನನಗೆ ಅಷ್ಟೋಂದು ಹಣ ನೀಡಲು ಆಗುವುದಿಲ್ಲ. ಸ್ವಲ್ಪ-ಸ್ವಲ್ಪವಾಗಿ ತಿಂಗಳಿಗೆ ಇಷ್ಟು ಎಂದು ನೀಡಿ ನಿಮ್ಮ ಸಾಲ ತೀರಿಸುತ್ತೇವೆ. ನೀವು ಪಕ್ಷದಲ್ಲೇ ಇರಿ ಎಂದು ಹೇಳಿದ್ದೆ. ಅಷ್ಟೆ ಅಲ್ಲ, ಸಿಎಂ ಅವರ ಜೊತೆ ಅಮೆರಿಕಕ್ಕೆ ತೆರಳಿದ್ದಾಗ ಅಲ್ಲಿಂದಲೇ ಕರೆ ಮಾಡಿ ವಿಶ್ವನಾಥ್ ಅವರಿಗೆ ಹಣತೆಗೆದುಕೊಂಡು ಹೋಗುವಂತೆಯೂ ಹೇಳದ್ದೆ, ಅದಕ್ಕೆ ಅವರು ಒಪ್ಪಿದ್ದರೂ ಸಹ ಎಂದು ಸಾ.ರಾ.ಮಹೇಶ್ ಹೇಳಿದರು.

ನಾನು ಹೇಳಿದ್ದು ನನ್ನ ಮಕ್ಕಳಾಣೆಗೂ ಸತ್ಯ: ಸಾ.ರಾ.ಮಹೇಶ್

ನಾನು ಹೇಳಿದ್ದು ನನ್ನ ಮಕ್ಕಳಾಣೆಗೂ ಸತ್ಯ: ಸಾ.ರಾ.ಮಹೇಶ್

'ನಾನು ಸದನದಲ್ಲಿ ಈಗ ಹೇಳುತ್ತಿರುವುದೆಲ್ಲಾ ಸತ್ಯ, ವಿಶ್ವನಾಥ್ ಅವರನ್ನು ಕರೆಸಿ ನಾನು ಅವರ ಎದುರುಗಡೆಯೂ ಇದನ್ನು ಹೇಳುತ್ತೇನೆ. ನಾನು ಇಷ್ಟು ಹೊತ್ತು ಹೇಳಿದ್ದು, ನನ್ನ ತಾಯಿಯ ಆಣೆಗೂ, ನನ್ನ ಮಕ್ಕಳ ಆಣೆಗೂ ಸತ್ಯ ಎಂದು ಸಾ.ರಾ.ಮಹೇಶ್ ಹೇಳಿದರು. ಮುಂದುವರೆದು, ಅಂದು 28 ಕೋಟಿ ಆಫರ್ ತಿರಸ್ಕರಿಸಿದೆ ಎಂದಿದ್ದ ವಿಶ್ವನಾಥ್ ಈಗ ಎಷ್ಟಕ್ಕೆ ಸೇಲ್ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಅವರನ್ನು ಸದನಕ್ಕೆ ಕರೆಸಿ ಎಂದು ರೋಷಾವೇಶದಿಂದ ಹೇಳಿದರು.

English summary
BJP offered H Vishwanath 28 crore rupees some days before said JDS minister SR Mahesh. Vishwanath told me about this in personal he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X