ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಆರೋಪದ ಬಗ್ಗೆ ಅರವಿಂದ ಲಿಂಬಾವಳಿ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜುಲೈ 08 : 'ಬಿಜೆಪಿ ನಾಯಕರು ಪಕ್ಷೇತರ ಶಾಸಕರನ್ನು ಹೈಜಾಕ್ ಮಾಡಿದ್ದಾರೆ' ಎಂಬ ಡಿ.ಕೆ.ಶಿವಕುಮಾರ್ ಆರೋಪವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಳ್ಳಿಹಾಕಿದರು.

ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರವನ್ನು ರಾಜ್ಯ ಪಾಲರು ಕೂಡಲೇ ವಜಾ ಮಾಡಬೇಕು. ಎಚ್.ಡಿ.ಕುಮಾರಸ್ವಾಮಿ ಅವರು ನೈತಿಕತೆ ಕಳೆದುಕೊಂಡ ಮೇಲೂ ಅಧಿಕಾರಕ್ಕೆ ಅಂಟಿ ಕುಳಿತು ಕೊಂಡಿದ್ದಾರೆ' ಎಂದು ಆರೋಪಿಸಿದರು.

ಜೆಡಿಎಸ್‌ನ ಎಲ್ಲಾ ಸಚಿವರ ರಾಜೀನಾಮೆ : ಎಚ್.ಡಿ.ಕುಮಾರಸ್ವಾಮಿಜೆಡಿಎಸ್‌ನ ಎಲ್ಲಾ ಸಚಿವರ ರಾಜೀನಾಮೆ : ಎಚ್.ಡಿ.ಕುಮಾರಸ್ವಾಮಿ

BJP not hijacked any Congress, JDS MLAs says Arvind Limbavali

'ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅನಗತ್ಯವಾಗಿ ಬಿಜೆಪಿ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನು ಬೆದರಿಸುವ ಕೆಲಸವನ್ನು ಶಿವಕುಮಾರ್ ಮಾಡಿದ್ದಾರೆ' ಎಂದು ದೂರಿದರು.

ಬಂದೂಕು ಭಯದಲ್ಲಿ ನಮ್ಮ ಶಾಸಕರನ್ನು ಹಿಡಿದಿಟ್ಟಿದ್ದಾರೆ: ಡಿಕೆಶಿಬಂದೂಕು ಭಯದಲ್ಲಿ ನಮ್ಮ ಶಾಸಕರನ್ನು ಹಿಡಿದಿಟ್ಟಿದ್ದಾರೆ: ಡಿಕೆಶಿ

ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, 'ನಾಗೇಶ್ ನನಗೆ ಬೇರೆಯವರ ಕೈಯಲ್ಲಿ ಕರೆ ಮಾಡಿಸಿದ್ದರು. ಸಂತೋಷ್ (ಯಡಿಯೂರಪ್ಪ ಆಪ್ತ ಸಹಾಕಯಕ) ನಮ್ಮನ್ನು ಕಿಡ್ನಾಪ್ ಮಾಡಿಸಿ ಮುಂಬೈಗೆ ಕರೆದುಕೊಂಡು ಹೋಗ್ತಿದ್ದಾರೆ' ಎಂದು ಹೇಳಿದರು.

ರಾಜೀನಾಮೆ ವಾಪಸ್ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?ರಾಜೀನಾಮೆ ವಾಪಸ್ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?

'1 ಗಂಟೆಯೊಳಗೆ ವಿಮಾನ ನಿಲ್ದಾಣಕ್ಕೆ ಬನ್ನಿ ಎಂದು ಕಣ್ಣೀರು ಹಾಕಿದ್ದರು. ಆದರೆ, 1 ಗಂಟೆ ಇದ್ದ ವಿಮಾನ ಬೇಗ ಟೇಕ್ ಆಫ್ ಮಾಡಿಸಿದ್ದಾರೆ. ಇದು ಖಂಡನೀಯ ನಮ್ಮ ಪ್ರಯತ್ನ ಮಾಡುತ್ತೇವೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

English summary
BJP Leader and Former minister Arvind Limbavali clarified that BJP not hijacked and Congress and JD(S) MLAs. He also ruled out the allegation made by D.K.Shiva Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X