• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಂಕಷ್ಟ; ಜನರಿಗೆ ನೆರವಾಗುವಂತೆ ಸ್ವಪಕ್ಷದವರಿಗೆ ಸಿದ್ದರಾಮಯ್ಯ ಮನವಿ

|

ಬೆಂಗಳೂರು, ಏಪ್ರಿಲ್ 23: ಕೊರೊನಾ ಎರಡನೇ ಅಲೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಈ ಮುನ್ನವೇ ಕೊರೊನಾ ತೀವ್ರತೆಯ ಕುರಿತು ಎಚ್ಚರಿಕೆ ನೀಡಿದ್ದರೂ ಅದನ್ನು ಅಲಕ್ಷಿಸಿ ಇಂದು ಜನರಿಗೆ ಇಂಥ ಸಂಕಷ್ಟ ತಂದೊಡ್ಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಎರಡನೇ ಅಲೆ ರಾಜ್ಯ ಮತ್ತು ದೇಶವನ್ನು ಬಾಧಿಸುತ್ತಿದೆ. ಭ್ರಷ್ಟ, ಬೇಜವಾಬ್ದಾರಿ, ಅದಕ್ಷ ಮತ್ತು ಜನವಿರೋಧಿ ಸ್ವಭಾವದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿವೆ. ತಜ್ಞರು 2020ರ ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆ ಪ್ರದರ್ಶಿಸಲಿದೆ ಎಂದು ಹೇಳಿದ್ದರು. ಸರ್ಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಬದಲಾಗಿ ಹಲವು ಸಚಿವರು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿಯೇ 'ನಾವು ಕೋವಿಡ್ ವಿರುದ್ಧ ಜಯ ಸಾಧಿಸುವ ಹಂತಕ್ಕೆ ಬಂದಿದ್ದೇವೆ. ಕೊರೊನಾವನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಜಯಘೋಷ ಮಾಡಲಾರಂಭಿಸಿದರು ಎಂದು ಕಿಡಿಕಾರಿದರು. ಮುಂದೆ ಓದಿ...

ಇಂಥ ತುಘಲಕ್ ದರ್ಬಾರ್ ಮಾಡಬೇಡಿ; ಕಿಡಿಕಾರಿದ ಸಿದ್ದರಾಮಯ್ಯಇಂಥ ತುಘಲಕ್ ದರ್ಬಾರ್ ಮಾಡಬೇಡಿ; ಕಿಡಿಕಾರಿದ ಸಿದ್ದರಾಮಯ್ಯ

"ಎಚ್ಚರಿಕೆ ಕೊಟ್ಟರೂ ಅಲಕ್ಷ್ಯ ತೋರಿದ ಸರ್ಕಾರ"

ಕೊರೊನಾ ವಿರುದ್ಧ ಜಯಸಾಧಿಸಿದ್ದೇವೆ ಎಂದು ಕೆಲವು ನಾಯಕರು ಜನಘೋಷ ಮಾಡಿದ ಸಂದರ್ಭದಲ್ಲೂ ತಜ್ಞರು, ನಾವಿನ್ನೂ ಕೊರೊನಾ ವಿರುದ್ಧ ಗೆಲುವು ಸಾಧಿಸಿಲ್ಲ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರಲಿದೆ ಎಂದು ಎಚ್ಚರಿಕೆ ನೀಡುತ್ತಲೇ ಬಂದರು. ಈ ಎಚ್ಚರಿಕೆಗಳನ್ನು ಸರ್ಕಾರಗಳು ಕಸದ ಬುಟ್ಟಿಗೆ ಎಸೆದವು. ಸಮರ್ಪಕವಾಗಿ ಪರೀಕ್ಷೆಯನ್ನೂ ನಡೆಸುತ್ತಿಲ್ಲ, ನಡೆಸಿದ ಪರೀಕ್ಷೆಗಳ ವರದಿ ವಾರವಾದರೂ ಜನರ ಕೈಗೆ, ವೈದ್ಯರ ಕೈಗೆ ಸಿಗುತ್ತಿಲ್ಲ ಎಂದು ದೂರಿದರು.

"ಜನರನ್ನು ಬಿಜೆಪಿ ಕೊಲೆ ಮಾಡುತ್ತಿದೆ"

ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಲ್ಯಾಬುಗಳು, ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐಸಿಯು, ವೆಂಟಿಲೇಟರ್‌ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಈ ಸಿದ್ಧತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಜನ ಕೊರೊನಾದಿಂದ ಮರಣ ಹೊಂದಿದರು ಎಂಬುದಕ್ಕಿಂತ ಬಿಜೆಪಿ ಸರ್ಕಾರ ತಮ್ಮ ಅದಕ್ಷತೆ ಮತ್ತು ಉಡಾಫೆ ಸ್ವಭಾವದಿಂದಾಗಿ ಅಮಾಯಕ ಜನಗಳ ಕೊಲೆಗಳಿಗೆ ಕಾರಣರಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಅನವಶ್ಯಕ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದೀರಿ"

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರಗಳಿಗೆ ಸಾವನ್ನಪ್ಪಿದವರ ಶವಸಂಸ್ಕಾರವನ್ನೂ ಘನತೆಯಿಂದ ನಡೆಸಲು ಸಾಧ್ಯವಾಗದಷ್ಟರ ಮಟ್ಟಿಗೆ ಪರಿಸ್ಥಿತಿ ಅರಾಜಕವಾಗಿದೆ. ಈಸರ್ಕಾರಗಳಿಂದ ಜನ ಏನನ್ನೂ ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಹತಶಾರಾಗಿದ್ದಾರೆ. ಕಳೆದ ವರ್ಷ ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ ಮಾಡಿದ ಅರಾಜಕತೆ ಮತ್ತು ತುಘಲಕ್‌ಶಾಹಿ ಆಡಳಿತವನ್ನೇ ಬಿಜೆಪಿ ಈಗಲೂ ಮಾಡುತ್ತಿದೆ. ಏಕಾಏಕಿ ಕಫ್ರ್ಯೂ ವಿಧಿಸುವುದು, ಬೀದಿಗಳಲ್ಲಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿ ಓಡಿಸುವುದು, ಅಂಗಡಿ ಮುಂಗಟ್ಟುಗಳನ್ನು ಯಾವುದೇ ಮುನ್ಸೂಚನೆ ನೀಡದೆ ಮುಚ್ಚಿಸುವುದು ಮತ್ತು ಬಾಯಿಗೆ ಬಂದಂತೆ ಸಚಿವರುಗಳು, ಅಧಿಕಾರಿಗಳು ಮಾತನಾಡಿ ಜನರಲ್ಲಿ ಗೊಂದಲ ಹುಟ್ಟಿಸುವುದನ್ನೇ ಈಗಲೂ ಮಾಡುತ್ತಿದ್ದಾರೆ ಎಂದು ಹೇಳಿದರು.

 ಸ್ವಪಕ್ಷದವರಿಗೆ ಕರೆ ನೀಡಿದ ಸಿದ್ದರಾಮಯ್ಯ

ಸ್ವಪಕ್ಷದವರಿಗೆ ಕರೆ ನೀಡಿದ ಸಿದ್ದರಾಮಯ್ಯ

ಜನರು ಸಂಕಷ್ಟದಲ್ಲಿರುವಾಗ, ದುಡಿಮೆಯಿಲ್ಲದೆ ಕೈಯಲ್ಲಿ ಹಣವಿಲ್ಲದಿರುವಾಗ ಸರ್ಕಾರ ಅವರ ಕಡೆಯ ಹನಿ ರಕ್ತವನ್ನೂ ಹೀರಲು ಹೊರಟಿದೆ. ಇಂತಹ ಜನದ್ರೋಹಿ ಆಡಳಿತವನ್ನು ನಾನು ಚರಿತ್ರೆಯಲ್ಲಿ ಎಲ್ಲೂ ಓದಿಲ್ಲ ಮತ್ತು ಕೇಳಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಕಳೆದ ಬಾರಿ ಜನರ ಜೊತೆ ನಿಂತು ಅನ್ನ, ಆಹಾರದ ವ್ಯವಸ್ಥೆ ಮಾಡಲು ಶ್ರಮಿಸಿದ್ದರು. ಹಾಗೆಯೇ ರೈತರು ಬೆಳೆದ ತರಕಾರಿ, ಹಣ್ಣು ಇತರೆ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ತಲುಪಿಸುವ ಕೆಲಸ ಮಾಡಿದ್ದರು.
ಕೋವಿಡ್ 2ನೇ ಅಲೆ ರಾಕ್ಷಸ ರೂಪ ತಳೆಯುತ್ತಿರುವ ಈ ಸಂದರ್ಭದಲ್ಲೂ ತಾವು ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬ್ಯುಲೆನ್ಸ್‍ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಕಳೆದ ಬಾರಿಯಂತೆ ಮಾಡಿ ಎಂದು ಮನವಿ ಮಾಡಿದರು.

English summary
BJP government in central and state neglected the warning of experts regarding corona 2nd wave leads to this situation blames opposition leader siddaramaiah,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X