ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸ ಉಲ್ಲೇಖಿಸಿ ಬಿಎಸ್ವೈಯತ್ತ ಬೊಟ್ಟು ಮಾಡಿದ ಸಿ.ಟಿ.ರವಿ?

|
Google Oneindia Kannada News

ವಿಜಯನಗರ ಸಾಮ್ಯಾಜ್ಯದ ಆಡಳಿತ, ಅಳಿಯ ರಾಮರಾಯನ ಕೈಗೆ ಬಂದ ನಂತರ ಏನಾಯಿತು ಎನ್ನುವ ವೃತ್ತಾಂತವನ್ನು ಮುಂದಿಟ್ಟುಕೊಂಡು , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಹಾಕಿರುವ ಫೇಸ್ ಬುಕ್ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.

'ನಂಬಬೇಕಾದವರನ್ನು ನಂಬದ ಅಳಿಯ ರಾಮರಾಯನ ವೈಭೋಗದ ಜೀವನ, ಸ್ವಾರ್ಥ ಕೇಂದ್ರಿತ ಅಧಿಕಾರ ಜನಮಾನಸದಲ್ಲಿ ಬಿತ್ತಿದ ಅಸಹನೆಯ ಬೀಜ, ನಿಧಾನಕ್ಕೆ ಮರವಾಗಿ ಬೆಳೆಯತೊಡಗಿತು' ಎಂದು ರವಿ, ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

"70 ವರ್ಷ ಹಿಂದಕ್ಕೆ ಹೋಗಿದ್ದು ದೇಶವಲ್ಲ, ಸಿದ್ದರಾಮಯ್ಯ ಮೆದುಳು''

'ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಮರೆಯಲಾಗದ ಮಹಾಸಾಮ್ರಾಜ್ಯದ ಪತನ ನಮಗೆ ಪಾಠ ಕಲಿಸಲಾರದೆ?

ಸಿ.ಟಿ.ರವಿಯವರು ಯಾವ ಕಾರಣಕ್ಕಾಗಿ ವಿಜಯನಗರ ಸಾಮ್ರಾಜ್ಯದ ಕಥೆಯನ್ನು ಈಗಿನ ಕಾಲಘಟ್ಟದಲ್ಲಿ ಬಳಸಿಕೊಂಡರು ಎನ್ನುವ ವಿಚಾರ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಇನ್ನು, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ರವಿಯವರ ಪೋಸ್ಟಿಗೂ, ಯಡಿಯೂರಪ್ಪನವರಿಗೂ ಒಂದಕ್ಕೊಂದು ಲಿಂಕ್ ಮಾಡಿದ್ದಾರೆ. ಸಿ.ಟಿ.ರವಿ ಮಾಡಿದ ಪೋಸ್ಟಿನ ಆಯ್ದ ಕಾಪಿ ಹೀಗಿದೆ:

 ಆದರೂ, ಸಿಎಂ ತೋರಿದ ಅಸಾಧಾರಣ ರಾಜಕೀಯಕ್ಕೆ ಬಿಲ ಸೇರಿದ ಅತೃಪ್ತರು ಆದರೂ, ಸಿಎಂ ತೋರಿದ ಅಸಾಧಾರಣ ರಾಜಕೀಯಕ್ಕೆ ಬಿಲ ಸೇರಿದ ಅತೃಪ್ತರು

 ಸಿ.ಟಿ.ರವಿ ಪೋಸ್ಟಿಗೆ ದಿನೇಶ್ ಗುಂಡೂರಾವ್ ವ್ಯಂಗ್ಯಭರಿತ ಟ್ವೀಟ್

ಸಿ.ಟಿ.ರವಿ ಪೋಸ್ಟಿಗೆ ದಿನೇಶ್ ಗುಂಡೂರಾವ್ ವ್ಯಂಗ್ಯಭರಿತ ಟ್ವೀಟ್

.@CTRavi_BJPಯವರೇ ನಿಮ್ಮ ಫೇಸ್‌ಬುಕ್ ಕಥನ ಓದಲು ಸೊಗಸಾಗಿದೆ. 'ಅಳಿಯ ರಾಮರಾಯ'ರ ಉದಾಹರಣೆ ಕೊಟ್ಟು ಯಡಿಯೂರಪ್ಪರವರ ಭಟ್ಟಂಗಿ ರಾಜಕಾರಣದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಆದರೆ ನಿಮ್ಮ ಈ ಬರಹ BSYರವರಿಗೆ 'ದುಷ್ಮನ್ ಕಹಾ ಹೇ' ಎಂದರೆ 'ಬಗಲ್ ಮೆ ಹೇ' ಎಂಬಂತಾಗಲಿಲ್ಲವೇ?" ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

 ಮಹಾಸಾಮ್ರಾಜ್ಯ ವಿಜಯನಗರದ ಏಳುಬೀಳುಗಳ ಕಥೆಯನ್ನು ಓದುತ್ತಿದ್ದೆ

ಮಹಾಸಾಮ್ರಾಜ್ಯ ವಿಜಯನಗರದ ಏಳುಬೀಳುಗಳ ಕಥೆಯನ್ನು ಓದುತ್ತಿದ್ದೆ

ನಿನ್ನೆ ರಾತ್ರಿ ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರದ ಏಳುಬೀಳುಗಳ ಕಥೆಯನ್ನು ಓದುತ್ತಿದ್ದೆ. ಆಗ ನನ್ನ ನೆನಪಿನಂಗಳದಲ್ಲಿ ವಿ.ನಾಗರಾಜ್ ಅವರು ಹೇಳಿದ "ಅಳಿಯ ರಾಮರಾಯ"ರ ಕಥೆ ನೆನಪಾಯಿತು‌. ಹದಿಮೂರನೆಯ ಶತಮಾನದಲ್ಲಿ ಭಾರತದ ದಕ್ಷಿಣ ಭಾಗ ಇತಿಹಾಸದಲ್ಲಿ ಕಂಡು ಕೇಳರಿಯದ ಭಯಾನಕ ದಾಳಿಯನ್ನು ಎದುರಿಸಬೇಕಾಯಿತು. ಮಲ್ಲಿಕಾಫರ್ ಎಂಬ ಅನಾಗರೀಕ ದಾಳಿಕೋರನ ನೇತೃತ್ವದಲ್ಲಿ ಖಿಲ್ಜಿಯ ಸೈನ್ಯ ದಕ್ಷಿಣದ ನಾಲ್ಕು ಪ್ರಮುಖ ಸಾಮ್ರಾಜ್ಯಗಳನ್ನು ಇತಿಹಾಸ ಪುಟದಿಂದ ಅಳಿಸಿ ಹಾಕಿತ್ತು.

 ಮಕ್ಕಳ ಮಾರಣಹೋಮ, ಅತ್ಯಾಚಾರ, ದೇವಸ್ಥಾನಗಳ ಲೂಟಿ, ಗೋಹತ್ಯೆ

ಮಕ್ಕಳ ಮಾರಣಹೋಮ, ಅತ್ಯಾಚಾರ, ದೇವಸ್ಥಾನಗಳ ಲೂಟಿ, ಗೋಹತ್ಯೆ

ದೇವಗಿರಿಯ ಯಾದವರು, ವಾರಂಗಲ್ಲಿನ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು ಹಾಗೂ ಮಧುರೆಯ ಪಾಂಡ್ಯರು ಆಳುತ್ತಿದ್ದ ಸಮೃದ್ಧ ರಾಜ್ಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಇತಿಹಾಸಕ್ಕೆ ತಳ್ಳಲ್ಪಟ್ಟರು. ಕನ್ನಡ ನಾಡಿನ ಹೆಮ್ಮೆಯ ಅರಸು ಮನೆತನ ಹೊಯ್ಸಳರ ರಾಜಧಾನಿ ದ್ವಾರಸಮುದ್ರ ಅನಾಗರೀಕರ ದಾಳಿಗೆ ತುತ್ತಾಗಿ ಹಳೆಬೀಡಾಯಿತು. ಮಾತೆಯರ ಆಕ್ರಂದನ, ಮನೆ ಮಕ್ಕಳ ಮಾರಣಹೋಮ, ಅತ್ಯಾಚಾರ, ದೇವಸ್ಥಾನಗಳ ಲೂಟಿ, ಗೋಹತ್ಯೆ, ಖಡ್ಗದ ಬಾಯಿಯ ಮತಾಂತರ ಎಗ್ಗಿಲ್ಲದೆ ಸಾಗಿತ್ತು.

 ಮುಂದೆ ಏನು ಗತಿ ದೇವರೇ ಎಂದು ಮೊರೆ ಇಡುತ್ತಿದ್ದರು

ಮುಂದೆ ಏನು ಗತಿ ದೇವರೇ ಎಂದು ಮೊರೆ ಇಡುತ್ತಿದ್ದರು

ಸಹಸ್ರಾರು ವರ್ಷಗಳ ಕಲೆ, ಸಂಸ್ಕೃತಿ, ಪರಂಪರೆ ನಾಶದ ಅಂಚಿಗೆ ತಳ್ಳಲ್ಪಟ್ಟಿತು. "ಸರ್ವೇ ಜನ ಸುಖಿನೋ ಭವಂತು" ಎಂದು ಪ್ರಾರ್ಥಿಸುತ್ತಿದ್ದ ಸಂಸ್ಕೃತಿಯೊಂದು ವಿಗ್ರಹ ಭಂಜಕರಿಂದ ಮೂಲ ದೇವರುಗಳನ್ನು ಉಳಿಸಿಕೊಳ್ಳಲು, ದೇಗುಲದ ಮೂರ್ತಿಗಳನ್ನು ಬಚ್ಚಿಡುತ್ತಾ, ಸಂಕಟಪಡುತ್ತಿದ್ದರು. ಮುಂದೆ ಏನು ಗತಿ ದೇವರೇ ಎಂದು ಮೊರೆ ಇಡುತ್ತಿದ್ದರು. ದಾಳಿಗೆಂದು ಬಂದವರು ಕೇವಲ ಸಾಮ್ರಾಜ್ಯ ಆಕಾಂಕ್ಷಿಗಳಾಗಿರಲಿಲ್ಲ, ಸಂಪತ್ತಿನ ಸೂರೆ ಒಂದೇ ಅವರ ಗುರಿಯಾಗಿರಲ್ಲ.

 ಸಂಸ್ಕೃತಿಯ ರಕ್ಷಣೆಗಾಗಿ ಬಲಿಷ್ಠವಾದ ಸಾಮ್ರಾಜ್ಯವೊಂದರ ಅಗತ್ಯತೆಯ ಇತ್ತು

ಸಂಸ್ಕೃತಿಯ ರಕ್ಷಣೆಗಾಗಿ ಬಲಿಷ್ಠವಾದ ಸಾಮ್ರಾಜ್ಯವೊಂದರ ಅಗತ್ಯತೆಯ ಇತ್ತು

ಸಂಪತ್ತಿನ ಸಂಗ್ರಹದೊಂದಿಗೆ, ಖಡ್ಗದ ಮೊನೆಯನ್ನು ತೋರಿಸಿ ಮತಾಂತರಿಸುವ, ಭಾರತದ ಸಂಸ್ಕೃತಿಯನ್ನು ನಾಶಗೊಳಿಸುವ ಹುನ್ನಾರವೂ ಇವರುಗಳದ್ದಾಗಿತ್ತು. ಇಂಥಹ ಸಂಕಷ್ಟದ ಕಾಲಘಟ್ಟದಲ್ಲಿ ಧರ್ಮ ಸಂಪ್ರದಾಯ, ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಬಲಿಷ್ಠವಾದ ಸಾಮ್ರಾಜ್ಯವೊಂದರ ಅಗತ್ಯತೆಯ ಇತ್ತು. ಈ ಸಂದರ್ಭದಲ್ಲಿ ಜನನವಾದ ಸಾಮ್ರಾಜ್ಯ ವಿಜಯನಗರ.

 ಮಹರ್ಷಿ ವಿದ್ಯಾರಣ್ಯರು ಅಳಿದುಳಿದ ಸಾಮಂತರೆನ್ನೆಲ್ಲಾ ಒಟ್ಟುಗೂಡಿಸಿ

ಮಹರ್ಷಿ ವಿದ್ಯಾರಣ್ಯರು ಅಳಿದುಳಿದ ಸಾಮಂತರೆನ್ನೆಲ್ಲಾ ಒಟ್ಟುಗೂಡಿಸಿ

ಮಹರ್ಷಿ ವಿದ್ಯಾರಣ್ಯರು ಅಳಿದುಳಿದ ಸಾಮಂತರೆನ್ನೆಲ್ಲಾ ಒಟ್ಟುಗೂಡಿಸಿ, ಸನಾತನ ಧರ್ಮದ ಸಂರಕ್ಷಣೆಯ ಸಂಕಲ್ಪ ಮಾಡಿಸಿ, ಹರಿಹರ ಬುಕ್ಕರ ನಾಯಕತ್ವದಲ್ಲಿ ಸ್ಥಾಪನೆಯಾದ ಮಹಾಸಾಮ್ರಾಜ್ಯ "ವಿಜಯನಗರ ಸಾಮ್ರಾಜ್ಯ". ಧರ್ಮಕ್ಕೆ, ಸಮಾಜಕ್ಕೆ ಮತ್ತು ಸಾಮ್ರಾಜ್ಯಕ್ಕೆ ನಿಷ್ಠರಾದ ಗಂಡುಗಲಿಗಳು ದಕ್ಷಿಣದ ಆಯಕಟ್ಟಿನ ಜಾಗದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದರು. ಕಳೆದುಹೋದ ಭೂಭಾಗಗಳನ್ನು ಜಯಿಸುತ್ತಾ ಸಾಮ್ರಾಜ್ಯವನ್ನು ವಿಸ್ತರಿಸಿದರು.

 ಆಯಕಟ್ಟಿನ ಜಾಗಗಳಲ್ಲಿ ಇದ್ದ ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕುತ್ತಾನೆ

ಆಯಕಟ್ಟಿನ ಜಾಗಗಳಲ್ಲಿ ಇದ್ದ ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕುತ್ತಾನೆ

ಆದರೆ ಆತನ ದೊಡ್ಡ ಸಮಸ್ಯೆ ಎಂದರೆ ಎಲ್ಲರ ಮೇಲೂ ಅನುಮಾನ. "ಅನುಮಾನಂ ಪೆದ್ದ ರೋಗಂ" ಎಂಬ ಮಾತಿನಂತೆ ಆತ ಆಯಕಟ್ಟಿನ ಜಾಗಗಳಲ್ಲಿ ಇದ್ದ ಸಾಮ್ರಾಜ್ಯ ನಿಷ್ಠರನ್ನು ಒಬ್ಬೊಬ್ಬರಾಗಿ ಹೊರನೂಕಿ, ಆ ಜಾಗದಲ್ಲಿ ತನ್ನ ಹೊಗಳು ಭಟ್ಟರನ್ನು ನೇಮಕ ಮಾಡಲು ತೊಡಗಿದೆ. ಸುತ್ತಡೆಯಲ್ಲಿ ಹೊಗಳು ಭಟ್ಟರದ್ದೇ ಕಾರುಬಾರು, ಆಯಕಟ್ಟಿನ ಜಾಗದಲ್ಲಿ ಇರಬೇಕಾದವರು ರಾಜಧಾನಿಯಲ್ಲಿ ಸ್ಥಿರವಾದರು. ಸಾಮ್ರಾಜ್ಯದ ನೈಜ ವಿಚಾರಗಳನ್ನು ರಾಜನಿಗೆ ತಲುಪಿಸುವವರೆಲ್ಲ ಮೂಲೆಗುಂಪಾದರು, ಅವರದ್ದು ಅರಣ್ಯರೋದನವಾಯಿತು.

Recommended Video

Students Vs Lecturer: Online Class ಗಳ ಹಣೆಬರಹ ಹೇಗಿದೆ ಅಂತ ಒಮ್ಮೆ ನೋಡಿ ನಕ್ಕುಬಿಡಿ | Oneindia Kannda
 ರಾಮರಾಯನ ಸಾವಿನ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮುಂದಾದರು

ರಾಮರಾಯನ ಸಾವಿನ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮುಂದಾದರು

ಏನು ಮಾಡುವುದು ವ್ಯಕ್ತಿಗತ ಲಾಭಕ್ಕೆ ಆಯಕಟ್ಟಿನ ಸ್ಥಳದಲ್ಲಿದ್ದವರೆಲ್ಲ ರಾಮರಾಯನ ಸಾವಿನ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೈಗೆ ಸಿಕ್ಕಿದ್ದನ್ನು ತುಂಬಿಸಿಕೊಂಡು ಹೊರಟರು. ಅರಾಜಕತೆ ತಾಂಡವವಾಡಿ, ಆರು ತಿಂಗಳು ಲೂಟಿ ಮಾಡಿದ ಅಸಹಿಷ್ಣು ರಕ್ಕಸರು ಸಿಕ್ಕಿದ್ದಕ್ಕೆಲ್ಲಾ ಕೊಳ್ಳಿ ಇಟ್ಟರು. ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಮರೆಯಲಾಗದ ಮಹಾಸಾಮ್ರಾಜ್ಯದ ಪತನ ನಮಗೆ ಪಾಠ ಕಲಿಸಲಾರದೆ?

English summary
BJP National General Secretary CT Ravi facebook post on ramaraya Has caused a huge debate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X