ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'RSS ಕಾರ್ಖಾನೆಯಲ್ಲಿ ತಯಾರಾಗಿರುವ ಮತ್ತೊಬ್ಬ ದಡ್ಡ ಸಿ.ಟಿ.ರವಿ'

By ಡಾ. ಎಚ್ ಸಿ ಮಹದೇವಪ್ಪ
|
Google Oneindia Kannada News

ಚುನಾವಣಾ ವರ್ಷದಲ್ಲಿ ಕೋಮುವಾದ ಹರಡಿ ಜನ ಸಾಮಾನ್ಯರ ಮನಸ್ಸನ್ನು ತಪ್ಪು ಮಾಹಿತಿಗಳ ಮೂಲಕ ಹೇಗಾದರೂ ಹಾಳುಮಾಡಿಯೇ ಸಿದ್ಧ ಎಂದು ನಿರ್ಧರಿಸಿರುವ ಬಿಜೆಪಿಗರು ಇದೀಗ ಅಕ್ಷರಶಃ ದೇಶದ್ರೋಹಿ ಮಾರ್ಗವನ್ನು ಹಿಡಿದಿರುವುದು ಅತ್ಯಂತ ಸ್ಪಷ್ಟವಾಗಿದ್ದು ಇದಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ ಟಿ ರವಿ ಅವರ ಹೇಳಿಕೆಯೇ ಜೀವಂತ ಸಾಕ್ಷಿಯಾಗಿದೆ.

ಈಗಾಗಲೇ ಹೇಳಲಾದಂತೆ ಅತ್ಯಂತ ಶತದಡ್ಡರನ್ನು ಸೃಷ್ಟಿಸುವ ಕಾರ್ಖಾನೆಯಾಗಿರುವ ಆರ್ ಎಸ್ ಎಸ್ ನ ಕಾರ್ಖಾನೆಯಲ್ಲಿ ತಯಾರಾಗಿರುವ ಮತ್ತೊಬ್ಬ ದಡ್ಡರಂತೆ ಕಾಣುವ ಸಿ ಟಿ ರವಿಯವರು ಭಾರತದ ಇತಿಹಾಸದ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದೇ ಮಾತನಾಡುವುದು ಅಪಾಯಕಾರಿ ಸಂಗತಿಗಳಲ್ಲಿ ಒಂದು.

ಹಿಜಾಬ್, ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತ ಅಷ್ಟೇ : ತಸ್ಲೀಮಾ ನಸ್ರೀನ್ಹಿಜಾಬ್, ಬುರ್ಖಾ ಪುರುಷರ ದಬ್ಬಾಳಿಕೆಯ ಸಂಕೇತ ಅಷ್ಟೇ : ತಸ್ಲೀಮಾ ನಸ್ರೀನ್

ಈತನಿಗೂ ವೈಯಕ್ತಿಕವಾಗಿ ನಮ್ಮ ದೇಶದ ರಾಷ್ಟ್ರಧ್ವಜದ ಮೇಲೆ ಗೌರವ ಇಲ್ಲ ಎಂಬ ಸಂಗತಿಯನ್ನು ಸ್ವತಃ ಆತ ಒಪ್ಪಿಕೊಂಡಿದ್ದು ನಮ್ಮ ದೇಶದ ಪ್ರಸ್ತುತ ರಾಷ್ಟ್ರ ಧ್ವಜವನ್ನು ಬದಲಾಯಿಸುವ ಆಶಯವನ್ನು ಆತ ಹೊಂದಿರುವುದು ಈ ಮೂಲಕ ಸ್ಪಷ್ಟವಾಗಿ ಕಾಣುತ್ತಿದೆ.

ಕೇವಲ ರಾಷ್ಟ್ರ ಧ್ವಜ ಮಾತ್ರವಲ್ಲದೇ ನಮ್ಮ ದೇಶದ ಜನರ ಬದುಕಿನ ಶಕ್ತಿಯಾದ ಸಂವಿಧಾನದ ಬಗ್ಗೆಯೂ ಇವರಿಗೆ ಇದೇ ರೀತಿಯಾದ ಅಭಿಪ್ರಾಯವಿದ್ದು, ಈ ಹಿಂದೆ ಹಲವು ಸಂದರ್ಭಗಳಲ್ಲಿ ಅದು ಸಾಬೀತಾಗಿದೆ. ಅಖಂಡ ಭಾರತ ನನ್ನ ಗುರಿ ಎಂದು ಹೇಳುತ್ತಿರುವ ಸಿ ಟಿ ರವಿಯವರು ಈಗಲೂ ಅಖಂಡ ಭಾರತದ ಒಳಗೇ ಇದ್ದಾರೆ ಎಂಬ ಸಂಗತಿಯನ್ನು ಮರೆತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

'ಸದನದಲ್ಲಿ ಮಲ್ಲಯುದ್ಧಕ್ಕೆ ಇಳಿದು 2023ರ ಚುನಾವಣೆ ಟ್ರೈಲರ್ ತೋರಿಸಿದ ಕಾಂಗ್ರೆಸ್''ಸದನದಲ್ಲಿ ಮಲ್ಲಯುದ್ಧಕ್ಕೆ ಇಳಿದು 2023ರ ಚುನಾವಣೆ ಟ್ರೈಲರ್ ತೋರಿಸಿದ ಕಾಂಗ್ರೆಸ್'

 ಆರ್ ಎಸ್ ಎಸ್ ಕಚೇರಿಯ ಮೇಲೆ ತ್ರಿವರ್ಣ ಧ್ವಜ

ಆರ್ ಎಸ್ ಎಸ್ ಕಚೇರಿಯ ಮೇಲೆ ತ್ರಿವರ್ಣ ಧ್ವಜ

ಇನ್ನು ಕೆಲವು ದಶಕಗಳ ಕಾಲ ನಾಗಪುರದ ತಮ್ಮ ಆರ್ ಎಸ್ ಎಸ್ ಕಚೇರಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಯೋಗ್ಯತೆ ಇಲ್ಲದ ಇವರು ಮತ್ತು ಇವರು ಇಸ್ಲಾಮಾಬಾದ್ ನಲ್ಲಿ ಧ್ವಜ ನೆಡುತ್ತಾರೆ ಎಂದು ಹೇಳಿದರೆ ನಮಗೆ ಎಲ್ಲಿಂದ ನಗಬೇಕು ಎಂದೇ ಅರ್ಥವಾಗುವುದಿಲ್ಲ. ಇನ್ನು ಮುಸ್ಲಿಂ ಸಮುದಾಯವನ್ನು ಸದಾ ದ್ವೇಷದಿಂದಲೇ ಕಾಣುವ ಮತ್ತು ಆ ದ್ವೇಷವನ್ನೇ ದೇಶಪ್ರೇಮ ಎಂದು ತಪ್ಪಾಗಿ ಭಾವಿಸಿರುವ ಸಿ ಟಿ ರವಿಯವರು ಪಾಕಿಸ್ತಾನ, ಬಾಂಗ್ಲಾದೇಶಗಳು ಸೇರಿದ ಅಖಂಡ ಭಾರತ ಬೇಕೆಂದು ಕೇಳುವುದು ಮೂರ್ಖತನದ ಸಂಕೇತ.

 ಪ್ರತ್ಯೇಕಗೊಂಡ ನಂತರದಲ್ಲಿ ರೂಪುಗೊಂಡಿರುವ ದೇಶ

ಪ್ರತ್ಯೇಕಗೊಂಡ ನಂತರದಲ್ಲಿ ರೂಪುಗೊಂಡಿರುವ ದೇಶ

ನಮ್ಮ ದೇಶ ಅಖಂಡವಲ್ಲ, ಇದು ಪ್ರತ್ಯೇಕಗೊಂಡ ನಂತರದಲ್ಲಿ ರೂಪುಗೊಂಡಿರುವ ದೇಶ, ಹೀಗಾಗಿ ನಮಗೆ ಹಿಂದಿನ ಅಖಂಡ ಭಾರತವೇ ಬೇಕು ಎಂಬುದು ಸಿ ಟಿ ರವಿಯವರ ವಾದ. ದುರಾದೃಷ್ಟದ ಸಂಗತಿ ಎಂದರೆ ಸದ್ಯ ಭಾರತ ದೇಶದಲ್ಲಿ ಆಡಳಿತ ನಡೆಸುತ್ತಿರುವ ಇವರಿಂದ ದೇಶದ ಜನ ಜನರು ಅಂತರಂಗ ಮತ್ತು ಬಹಿರಂಗ ಎರಡರಲ್ಲೂ ಕುಸಿದಿದ್ದಾರೆ. ನಿರುದ್ಯೋಗ, ಕಡಿಮೆ ಜೀವನ ಮಟ್ಟ, ಬೆಲೆ ಏರಿಕೆ, ಸಾಮಾಜಿಕ ವೈಷಮ್ಯ, ಹಸಿವು ಹಾಗೂ ಇನ್ನೂ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ.

 ಆರ್ ಎಸ್ ಎಸ್ ನ ಕುಮ್ಮಕ್ಕಿನಿಂದ ದೇಶದ್ರೋಹಿಯಾಗಿ ಬದಲಾಗಿರುವ ಈಶ್ವರಪ್ಪ

ಆರ್ ಎಸ್ ಎಸ್ ನ ಕುಮ್ಮಕ್ಕಿನಿಂದ ದೇಶದ್ರೋಹಿಯಾಗಿ ಬದಲಾಗಿರುವ ಈಶ್ವರಪ್ಪ

ಹೀಗಿರುವಾಗ ಇರುವ ದೇಶ ವಾಸಿಗಳನ್ನೇ ಸರಿಯಾಗಿ ನಡೆಸಿಕೊಳ್ಳಲು ಯೋಗ್ಯತೆ ಇಲ್ಲದ ಇವರುಗಳು ಪಾಕಿಸ್ತಾನ, ಬಾಂಗ್ಲಾದೇಶಗಳೂ ಬೇಕೆಂದು ಕೇಳುವುದು ಹಾಸ್ಯಾಸ್ಪದ ಮತ್ತು ದುರಾದೃಷ್ಟದ ಸಂಗತಿಯಾಗಿದೆ. ಇನ್ನು ಆರ್ ಎಸ್ ಎಸ್ ನ ಕುಮ್ಮಕ್ಕಿನಿಂದ ದೇಶದ್ರೋಹಿಯಾಗಿ ಬದಲಾಗಿರುವ ಈಶ್ವರಪ್ಪ ಮತ್ತು ಅದೇ ಹಾದಿಯಲ್ಲಿ ಮಾತನಾಡುತ್ತಿರುವ ಸಿ ಟಿ ರವಿಯವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ!

 ಮತ್ತೊಬ್ಬ ದೇಶದ್ರೋಹಿ ಈ ಸಿ ಟಿ ರವಿ

ಮತ್ತೊಬ್ಬ ದೇಶದ್ರೋಹಿ ಈ ಸಿ ಟಿ ರವಿ

ಇನ್ನು ದೇಶದ್ರೋಹಿ ಹೇಳಿಕೆ ನೀಡಿದ ಈಶ್ವರಪ್ಪನವರಿಗೆ ಎಚ್ಚರಿಸಬೇಕಿದ್ದ ಮುಖ್ಯಮಂತ್ರಿಗಳು "ಈಶ್ವರಪ್ಪನವರಿಂದ ಕಾನೂನು ಉಲ್ಲಂಘನೆ ಆಗಿದೆಯೇ?" ಎಂದು ಕೇಳುತ್ತಿದ್ದು ತಮ್ಮ ಈ ಬೇಜವಾಬ್ದಾರಿ ಮಾತಿಗೆ ಅವರು ಬಹಿರಂಗವಾಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇನ್ನು ಪಾಕಿಸ್ತಾನದ ಪ್ರೇಮದ ಮೂಲಕ ದೇಶದ್ರೋಹವನ್ನೇ ಮೈಗೂಡಿಸಿಕೊಂಡಿರುಂತಹ ನಡವಳಿಕೆಯನ್ನು ತೋರುತ್ತಿರುವ ಬಿಜೆಪಿಗರು ದೇಶಪ್ರೇಮ ಎಂಬ ಪದವನ್ನು ಉಚ್ಚರಿಸುವ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ!

Recommended Video

ಶ್ರೇಯಸ್ ವರ್ಷದ ದುಡಿಮೆ ಎಷ್ಟು?? ಹೇಗಿದೆ ಲೈಫ್ ಸ್ಟೈಲ್?? | Oneindia Kannada

English summary
BJP National General Secretary C T Ravi Is Another Fool From RSS, Article By Dr.H.C.Mahadevappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X