ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಫೋನ್ ಉಡುಗೊರೆ ವಿವಾದ: ಬಿಜೆಪಿಗರಿಂದ ಸರ್ಕಾರಕ್ಕೆ ನೀತಿಪಾಠ

By Manjunatha
|
Google Oneindia Kannada News

ಬೆಂಗಳೂರು, ಜುಲೈ 18: ಸಚಿವ ಡಿ.ಕೆ.ಶಿವಕುಮಾರ್ ಅವರು ಉಡುಗೊರೆಯಾಗಿ ನೀಡಿದ್ದ ಐಫೋನ್‌ಗಳನ್ನು ಸ್ವೀಕರಿಸಲು ಬಿಜೆಪಿ ಸಂಸದರು ನಿರಾಕರಿಸಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಎಲ್ಲಾ ಸಂಸದರಿಗೆ ಬೆಲೆ ಬಾಳುವ ಆಪಲ್ ಐಫೋನ್ ಮತ್ತು ಮೋಚಿ ಬ್ಯಾಂಡ್‌ನ ಲೆದರ್ ಬ್ಯಾಗನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಅದನ್ನು ಬಿಜೆಪಿ ಸಂಸದರು ಹಿಂದಿರುಗಿಸುತ್ತಿದ್ದಾರೆ.

ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್

ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಬಿ.ಎಸ್.ಯಡಿಯೂರಪ್ಪ ಅವರು, ಬಿಜೆಪಿಯ ಸಂಸದರು ಉಡುಗೊರೆಯನ್ನು ಸ್ವೀಕರಿಸುವುದಿಲ್ಲ. ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಜನರಿಗೆ ರಾಜ್ಯದ ವಾಸ್ತವ ಸ್ಥಿತಿ ತಿಳಿಸಬೇಕು. ಇದರಿಂದ ಕಳೆದ ಸರ್ಕಾರದ ಆಡಳಿತ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಕಾವೇರಿ ವಿವಾದ ಕುರಿತ ದಾಖಲೆಗಳ ಜೊತೆ ಗಿಫ್ಟ್‌

ಕಾವೇರಿ ವಿವಾದ ಕುರಿತ ದಾಖಲೆಗಳ ಜೊತೆ ಗಿಫ್ಟ್‌

ಸಂಸತ್ ಅಧಿವೇಶನದ ನಡೆಯುತ್ತಿರುವ ಕಾವೇರಿ ವಿವಾದ ಕುರಿತು ರಾಜ್ಯ ಸಂಸದರ ಜೊತೆ ಮುಖ್ಯಮಂತ್ರಿ ಸಭೆ ಆಯೋಜಿಸಿದ್ದರು. ಹಾಗಾಗಿ ಕಾವೇರಿ ವಿವಾದ ಕುರಿತ ದಾಖಲೆಗಳ ಜೊತೆ ಐಫೋನ್ ಮತ್ತು ಮೋಚಿ ಬ್ಯಾಂಡ್‌ನ ಲೆದರ್‌ ಬ್ಯಾಗನ್ನು ರಾಜ್ಯದ ಎಲ್ಲ ಸಂಸದರಿಗೆ ಕಳುಹಿಸಲಾಗಿತ್ತು.

ರಾಜೀವ್ ಚಂದ್ರಶೇಖರ್ ಮೊದಲು

ದುಬಾರಿ ಗಿಫ್ಟ್‌ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದ್ದು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಅವರು ನಿನ್ನೆಯೇ ಟ್ವಿಟ್ಟರ್ ಮೂಲಕ ಈ ವಿಷಯವನ್ನು ಹೊರಗೆಡವಿದ್ದರು. ತಮಗೆ ನೀಡಿರುವ ಐಫೋನ್ ಅನ್ನು ವಾಪಾಸ್ ನೀಡಿದ್ದಾಗಿ ಹೇಳಿದ್ದರು. ಅಲ್ಲದೆ ಸರ್ಕಾರಿ ಹಣವನ್ನು ಪೌರ ಕಾರ್ಮಿಕರಿಗೆ ಸಂಬಳ ನೀಡಲು ಬಳಸುವಂತೆ ಸಲಹೆ ನೀಡಿದ್ದರು.

ರಾಜ್ಯ ಸರ್ಕಾರದ ಮೊಬೈಲ್‌ ಗಿಫ್ಟ್‌ ವಾಪಸ್‌ ಕೊಟ್ಟ ಸಂಸದ ರಾಜೀವ್‌ರಾಜ್ಯ ಸರ್ಕಾರದ ಮೊಬೈಲ್‌ ಗಿಫ್ಟ್‌ ವಾಪಸ್‌ ಕೊಟ್ಟ ಸಂಸದ ರಾಜೀವ್‌

'ಸರ್ಕಾರದ ಹಣ ಉಡುಗೊರೆಗೆ ಬಳಸುವುದು ಪಾಪ'

ಕೇಂದ್ರ ಸಚಿವ ಅನಂತ್‌ಕುಮಾರ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ತಮ್ಮ ಕಚೇರಿಗೆ ಕಾವೇರಿ ವಿವಾದದ ದಾಖಲೆಗಳ ಜೊತೆ ಕಳುಹಿಸಲಾಗಿದ್ದ ಐಫೋನ್ ಮತ್ತು ಬ್ಯಾಗನ್ನು ಸೋಮವಾರವೇ ವಾಪಸ್ ಕಳುಹಿಸದ್ದಾಗಿ ಹೇಳಿದ್ದಾರೆ. ಸರ್ಕಾರ ತನ್ನ ಹಣವನ್ನು ಉಡುಗೊರೆಗಳ ಬದಲಿಗೆ, ರೈತರಿಗೆ , ಪೌರ ಕಾರ್ಮಿಕರ ಸಂಬಳಕ್ಕೆ ಬಳಸಲಿ ಎಂದಿದ್ದಾರೆ.

ಕುಮಾರಸ್ವಾಮಿಗೆ ವಿಷಯ ತಿಳಿದಿಲ್ಲ

ಕುಮಾರಸ್ವಾಮಿಗೆ ವಿಷಯ ತಿಳಿದಿಲ್ಲ

ದುಬಾರಿ ಉಡುಗೊರೆ ಬಗ್ಗೆ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದಾಗ ಈ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಎಲ್ಲ ಸಂಸದರ ಕಚೇರಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಉಡುಗೊರೆಗಳು ಹೋಗಿದ್ದವು.

ಉಡುಗೊರೆ ಕಳುಹಿಸಿದ್ದು ಡಿಕೆಶಿ

ಉಡುಗೊರೆ ಕಳುಹಿಸಿದ್ದು ಡಿಕೆಶಿ

ಉಡುಗೊರೆಗಳನ್ನು ಕಳುಹಿಸಿದ್ದ ತಾವೇ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅಲ್ಲದೆ ತಮ್ಮ ಈ ಕಾರ್ಯವನ್ನು ಅವರು ಸಮರ್ಥಿಸಿಕೊಂಡು, 'ಉಡುಗೊರೆ ಕಳಿಸಿದ್ದು ನಾನೆ, ಅದಕ್ಕೇನು ನನ್ನನ್ನು ಗಲ್ಲಿಗೆ ಏರಿಸಿತ್ತೀರಾ' ಎಂದು ಮಾಧ್ಯಮಗಳಿಗೆ ಕೋಪದಿಂದ ಪ್ರಶ್ನೆ ಮಾಡಿದರು.

ಡಿಕೆಶಿಗೆ ಮುಖಭಂಗ : ಬಿಜೆಪಿ ಸಂಸದರಿಂದ ದುಬಾರಿ ಐಫೋನ್ ವಾಪಸ್!ಡಿಕೆಶಿಗೆ ಮುಖಭಂಗ : ಬಿಜೆಪಿ ಸಂಸದರಿಂದ ದುಬಾರಿ ಐಫೋನ್ ವಾಪಸ್!

English summary
BJP MP's decided to give back I phone's which given by DK Shivakumar by government money. BJP minister Ananth Kumar said it is a sin to use government money for this kind of gifts is a sin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X