ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ-ತೆನೆ ಬೇಟೆಯ ಭಯ, 'ರೆಸಾರ್ಟ್ ರಾಜಕೀಯ'ಕ್ಕೆ ಮೊರೆ ಹೋದ ಬಿಜೆಪಿ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 18: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಗಾಳ ಹಾಕುತ್ತಿದ್ದ ಬಿಜೆಪಿ ಇದೀಗ ತನ್ನ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ರಾಜಕೀಯದತ್ತ ಹೊರಳಿಕೊಂಡಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹೈದರಾಬಾದ್ ನಲ್ಲಿರುವ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಇಂದಿನಿಂದ ಬಿಜೆಪಿ ಶಾಸಕರೂ ರೆಸಾರ್ಟ್ ರಾಜಕೀಯಕ್ಕೆ ಹೊರಟಿದ್ದಾರೆ.

ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್‌ ಶಾಸಕನಿಗೆ ಗಾಳ?ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್‌ ಶಾಸಕನಿಗೆ ಗಾಳ?

ಇಂದು ರಾತ್ರಿ 9 ಗಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಶಾಂಗ್ರಿಲಾ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಡ್ಡಾಯ ಹಾಜರಿರುವಂತೆ ಎಲ್ಲಾ 104 ಶಾಸಕರಿಗೆ ಸೂಚಿಸಲಾಗಿದೆ.

 BJP MLAs to meet at 9 pm today at Shangri-La Hotel

ಸಭೆ ಬಳಿಕ ಮನೆಗೆ ಮರಳುವಂತಿಲ್ಲ. ಹೋಟೆಲ್ ನಲ್ಲೇ ವಾಸ್ತವ್ಯ ಹೂಡಬೇಕು ಎಂದು ಶಾಸಕರಿಗೆ ಬಿಜೆಪಿ ನಾಯಕರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಶನಿವಾರ ಹೋಟೆಲ್ ನಿಂದ ನೇರವಾಗಿ ವಿಧಾನಸೌಧಕ್ಕೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ನಂತರ ಶಾಸಕರು ಪ್ರಮಾಣ ವಚನ ಮತ್ತು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್ ತೆಕ್ಕೆಗೆ ಜಾರಿದ್ದಾರೆ ಎಂಬ ಸುದ್ದಿಗಳು ಓಡಾಡುತ್ತಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ರಾಜಕೀಯ ಆರಂಭವಾಗಿದೆ.

English summary
Karnataka Politics: Resort politics: BJP MLAs to meet at 9 pm today at Shangri-La Hotel in Bengaluru. Today they will stay in the same hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X