ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ನಂತರ ಬಿಜೆಪಿ ಕಣ್ಣು ಶ್ರೀರಾಮುಲು ಮೇಲೆ!

|
Google Oneindia Kannada News

ಬೆಂಗಳೂರು, ಡಿ. 7 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿರುವ ಬಿಜೆಪಿ ನಾಯಕರು ಸದ್ಯ, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರತ್ತ ಗಮನ ಹರಿಸಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಶ್ರೀರಾಮುಲು ಅವರನ್ನೂ ಪಕ್ಷಕ್ಕೆ ಸೇರಿಸಿಕೊಂಡು ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆಗಳನ್ನು ಚುರುಕುಗೊಳಿಸಲು ಪಕ್ಷ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಶ್ರೀರಾಮುಲು ಅವರೊಂದಿಗೆ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಕೆಲವು ಮುಖಂಡರು ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ. (ಬಿಜೆಪಿಗೆ ಮರಳಲು ಸಜ್ಜಾದ ಶ್ರೀರಾಮುಲು)

Sriramulu

ಬಿ.ಎಸ್.ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆ ಕುರಿತ ಪ್ರಕ್ರಿಯೆಗಳು ನಡೆಯಲು ಎರಡರಿಂದ ಮೂರು ವಾರಗಳ ಕಾಲಾವಕಾಶ ಬೇಕಾಗಿದೆ. ಈ ಸಮಯದಲ್ಲಿ ಶ್ರೀರಾಮುಲು ಅವರ ಜೊತೆ ಮಾತುಕತೆ ನಡೆಸಿ, ಅವರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇಕಾದ ಪೂರ್ವ ಸಿದ್ಧತೆಗಳನ್ನು ನಡೆಸಿ ಇಬ್ಬರನ್ನೂ ಏಕಕಾಲದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. (ಬಿಜೆಪಿಗೆ ಮರಳಲು ಯಡಿಯೂರಪ್ಪಗೆ ಆಹ್ವಾನ)

ರಾಷ್ಟ್ರೀಯ ನಾಯಕರ ಒಪ್ಪಿಗೆ ಇಲ್ಲ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಒಂದು ಗುಂಪು ಶ್ರೀರಾಮುಲು ಅವರ ಜೊತೆ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಮಾತುಕತೆ ನಡೆಸಿ, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದೆ. ಆದರೆ, ಶ್ರೀರಾಮುಲು ಸೇರ್ಪಡೆಗೆ ರಾಷ್ಟ್ರೀಯ ನಾಯಕರು ಇನ್ನೂ ಒಪ್ಪಿಗೆ ನೀಡಿಲ್ಲ. (ಬಿಎಸ್ಆರ್, ಬಿಜೆಪಿ ವಿಲೀನಕ್ಕೆ ವೇದಿಕೆ ಸಜ್ಜು)

ಗುರುವಾರ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಮ್ಮತಿ ಸೂಚಿಸಿರುವ ರಾಷ್ಟ್ರೀಯ ನಾಯಕರು ಶ್ರೀರಾಮುಲು ಬಗ್ಗೆ ಇನ್ನೂ ಮೌನ ವಹಿಸಿದ್ದಾರೆ. ಅದರಲ್ಲೂ ಶ್ರೀರಾಮುಲು ಸೇರ್ಪಡೆಗೆ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ತಮ್ಮ ಒಪ್ಪಿಗೆಯನ್ನು ನೀಡಬೇಕಾಗಿದೆ. ರಾಷ್ಟ್ರೀಯ ನಾಯಕರ ಒಪ್ಪಿಗೆ ದೊರೆತರೆ ಶ್ರೀರಾಮುಲು ಸಹ ಬಿಜೆಪಿಗೆ ಮರಳಲಿದ್ದಾರೆ. (ದುರ್ಗಕ್ಕೆ ಬರುವ ವೇಳೆಗೆ ಯಡಿಯೂರಪ್ಪ ಬದಲಾದರು!)

English summary
After B.S.Yeddyurappa now Karnataka BJP wants BSR Congress president and former minister B.Sriramulu back to party. State BJP leaders already meets Sriramulu and formally invite him to party. But party national leaders yet to be take final decision on Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X