ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ; ಜುಲೈ 26ರ ಸಭೆ ರದ್ದು!

|
Google Oneindia Kannada News

ಬೆಂಗಳೂರು, ಜುಲೈ 20; ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್ ರದ್ದುಗೊಳಿಸಲಾಗಿದೆ.

ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಹೈಕಮಾಂಡ್ ನಾಯಕರ ಸೂಚನೆಯಂತೆ ಜುಲೈ 26ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದರು. ಆದರೆ ಮಂಗಳವಾರ ಸಭೆ ರದ್ದುಗೊಂಡಿರುವ ಮಾಹಿತಿ ಬಂದಿದೆ.

ಗುಜರಾತ್ ಕೇಶುಭಾಯಿ ಪಟೇಲ್ ರೀತಿ ಕರ್ನಾಟಕ ಸಿಎಂ ಪಟ್ಟದಿಂದ ಯಡಿಯೂರಪ್ಪ ಔಟ್! ಗುಜರಾತ್ ಕೇಶುಭಾಯಿ ಪಟೇಲ್ ರೀತಿ ಕರ್ನಾಟಕ ಸಿಎಂ ಪಟ್ಟದಿಂದ ಯಡಿಯೂರಪ್ಪ ಔಟ್!

ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಗೊಳಿಸಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟವನ್ನು ಆಯೋಜನೆ ಮಾಡಲಾಗಿದೆ. ಜುಲೈ 25ರ ರಾತ್ರಿ ಭೋಜನಕೂಟ ನಡೆಯಲಿದೆ.

 ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ

BJP Legislative Party Meeting On July 26 Cancelled

ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಜುಲೈ 25ರ ಸಂಜೆ 7.30ಕ್ಕೆ ಭೋಜನಕೂಟ ನಡೆಯಲಿದೆ. ಜುಲೈ 26ರಂದು ಯಡಿಯೂರಪ್ಪ ನೇತೃತ್ವದ ಸರ್ಕಾರ 2 ವರ್ಷಗಳನ್ನು ಪೂರೈಸಲಿದೆ.

 'ಯಡಿಯೂರಪ್ಪ ಬದಲಿಗೆ ಪ್ರಾಮಾಣಿಕ, ಹಿಂದೂ ಪರ ಸಿಎಂ ಆಯ್ಕೆಯಾಗ್ತಾರೆ': ಬಿಜೆಪಿ ಮುಖಂಡ 'ಯಡಿಯೂರಪ್ಪ ಬದಲಿಗೆ ಪ್ರಾಮಾಣಿಕ, ಹಿಂದೂ ಪರ ಸಿಎಂ ಆಯ್ಕೆಯಾಗ್ತಾರೆ': ಬಿಜೆಪಿ ಮುಖಂಡ

ಯಡಿಯೂರಪ್ಪ ದಹೆಲಿಯಿಂದ ವಾಪಸ್ ಆದ ಬಳಿಕ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಆದ್ದರಿಂದ ಜುಲೈ 26ರಂದು ಕರೆದಿದ್ದ ಸಭೆ ಕುತೂಹಲಕ್ಕೆ ಕಾರಣವಾಗಿತ್ತು.

ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್ ರದ್ದುಗೊಳಿಸಲಾಗಿದ್ದು, ಕರ್ನಾಟಕ ಬಿಜೆಪಿಯಲ್ಲಿನ ಮುಂದಿನ ಬೆಳವಣಿಗೆ ಬಗ್ಗೆ ಹಲವಾರು ವಿಶ್ಲೇಷಣೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ ಚರ್ಚೆಗೆ ಸದ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದೆಯೇ? ಕಾದು ನೋಡಬೇಕಿದೆ.

English summary
In a latest development legislative party meeting on July 26 called by Karnataka chief minister B. S. Yediyurappa cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X