ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕನ ರಾಸಲೀಲೆ ಬಹಿರಂಗ: ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ

|
Google Oneindia Kannada News

ಮೈಸೂರು, ನ 28: ಕರ್ನಾಟಕ ಬಿಜೆಪಿ ನಾಯಕ, ಮಾಜಿ ಸಚಿವರೊಬ್ಬರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

"ಇದೇನು ಮೊದಲಲ್ಲ, ಈ ಹಿಂದೆಯೂ ಹನಿ ಟ್ರ್ಯಾಪ್ ವಿಡಿಯೋ ಬಹಿರಂಗಗೊಂಡಿತ್ತು. ಈ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ

ಕೆ.ಆರ್ ಪೇಟೆಯ ಕಿಕ್ಕೇರಿಯಲ್ಲಿ ಮಗನ ಸೋಲನ್ನ ಕಂಡು ಕಣ್ಣೀರು ಹಾಕಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರಿಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!

ಜೊತೆಗೆ, "ನಾನು ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತಿಲ್ಲ" ಎಂದು ಕುಮಾರಸ್ವಾಮಿ, ಸದಾನಂದ ಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರ ಧರ್ಮಾಪುರದಲ್ಲಿ ಕುಮಾರಸ್ವಾಮಿ ಪ್ರಚಾರದ ವೇಳೆ ಈ ಮಾತನ್ನು ಹೇಳಿದ್ದಾರೆ.

ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ

ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ

"ನನ್ನದು ಡ್ರಾಮಾ ಕಣ್ಣೀರಲ್ಲ. ಕಣ್ಣೀರು ಹಾಕುವುದು ನಮ್ಮ ಕುಟುಂಬದ ಪೇಟೆಂಟ್ ಎಂದು ಕರೆದರೂ ಪರವಾಗಿಲ್ಲ. ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ. ನಿಮ್ಮ ಯೋಗ್ಯತೆಗೆ ಎಷ್ಟು ಹಳ್ಳಿಗೆ ಭೇಟಿ ಕೊಟ್ಟಿದ್ದೀರಾ" ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, "ನಮ್ಮ ಮನೆ ಮುಂದೆ ಎಷ್ಟು ಬಡವರು ನಿಲ್ಲುತ್ತಾರೆ, ನಿಮ್ಮ ಮನೆ ಮುಂದೆ ಎಷ್ಟು ಜನ ನಿಲ್ಲುತ್ತಾರೆ ಹೇಳಿ. ನಮ್ಮ ಕಣ್ಣೀರು ಭಾವನಾತ್ಮಕ. ಬಡವರ ಕಷ್ಟ ನೋಡಿದ ತಕ್ಷಣ ಕಣ್ಣೀರು ಬರುತ್ತದೆ" ಎಂದು ಡಿವಿಎಸ್ ಗೆ ಸವಾಲು ಎಸೆದಿದ್ದಾರೆ.

ಬಿಜೆಪಿ ಶಾಸಕರ ರಾಸಲೀಲೆ - ಕುಮಾರಸ್ವಾಮಿ ಪ್ರತಿಕ್ರಿಯೆ

ಬಿಜೆಪಿ ಶಾಸಕರ ರಾಸಲೀಲೆ - ಕುಮಾರಸ್ವಾಮಿ ಪ್ರತಿಕ್ರಿಯೆ

ಬಿಜೆಪಿ ಶಾಸಕರ ರಾಸಲೀಲೆ ಬಹಿರಂಗವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಆ ವಿಚಾರ ಯೋಚಿಸಲೂ ಅಸಹ್ಯ ಆಗುತ್ತೆ. ಅರವಿಂದ ಲಿಂಬಾವಳಿ ವಿಚಾರದಲ್ಲೂ ಸ್ಟೇ ತಂದರು. ಇದೀಗ ಮತ್ತೊಬ್ಬ ಶಾಸಕನ ರಾಸಲೀಲೆ ಹೊರಬಂದಿದೆ. ನಾವು ಇದನ್ನೆಲ್ಲಾ ಸಹಿಸಲ್ಲ" ಎಂದು ಹೆಚ್.ಡಿಕೆ ಕಿಡಿಕಾರಿದರು.

ವಿಶ್ವನಾಥ್ ಹೇಳಿದಂತೆ ನಾನು ನಡೆದುಕೊಂಡಿದ್ದರೆ ನನ್ನ ಬಾಯಿಗೆ ಹುಳ ಬೀಳಲಿ

ವಿಶ್ವನಾಥ್ ಹೇಳಿದಂತೆ ನಾನು ನಡೆದುಕೊಂಡಿದ್ದರೆ ನನ್ನ ಬಾಯಿಗೆ ಹುಳ ಬೀಳಲಿ

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದಂತೆ ನಾನು ನಡೆದುಕೊಂಡಿದ್ದರೆ ನನ್ನ ಬಾಯಿಗೆ ಹುಳ ಬೀಳಲಿ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. "ಕುರುಬ ಸಮಾಜದ ವಿಚಾರದಲ್ಲಿ ಯಾವತ್ತೂ ಅಗೌರವವಾಗಿ ಮಾತಾಡಿಲ್ಲ. ಹಾಗೆ ಮಾತನಾಡುವುದೂ ಇಲ್ಲ. ವಿಶ್ವನಾಥ್ ಯಾವತ್ತೂ ನನ್ನ ಬಳಿ ಹುಣಸೂರು ಪ್ರತ್ಯೇಕ ಜಿಲ್ಲೆಯ ಬಗ್ಗೆ ಚರ್ಚೆ ಮಾಡಿಲ್ಲ. ಹತ್ತಾರು ಬಾರಿ ನನ್ನ ಜೊತೆ ತಿಂಡಿ ತಿಂದಿದ್ದಾರೆ. ಆದರೆ ಈ ಬಗ್ಗೆ ಚರ್ಚೆ ಮಾಡಿಲ್ಲ" ಎಂದು ಕುಮಾರಸ್ವಾಮಿ, ವಿಶ್ವನಾಥ್ ಅವರನ್ನು ಕುಟುಕಿದ್ದಾರೆ.

ವಿಶ್ವನಾಥ್ ಮುಂಬೈಯವರಿಗೆ ಕಾಂಟ್ರ್ಯಾಕ್ಟ್ ಕೊಡಿಸಲು ಬಂದಿದ್ದರು

ವಿಶ್ವನಾಥ್ ಮುಂಬೈಯವರಿಗೆ ಕಾಂಟ್ರ್ಯಾಕ್ಟ್ ಕೊಡಿಸಲು ಬಂದಿದ್ದರು

"ವಿಶ್ವನಾಥ್ ಅವರು ಕೆ.ಎಸ್.ಆರ್.ಟಿ.ಸಿ‌ ಸ್ಕ್ರಾಪ್ ಖರೀದಿಗಾಗಿ ಅರ್ಜಿ ಹಿಡಿದುಕೊಂಡು ಬಂದಿದ್ದರು. ಅದು, ಮುಂಬಯಿಯವರಿಗೆ ಕೊಡಿಸಲು ತಂದಿದ್ದ ಅರ್ಜಿ, ಅದನ್ನ ಹೊರತು ಪಡಿಸಿದರೆ ನನ್ನ ಬಳಿ ಇನ್ಯಾವ ವಿಚಾರವನ್ನು ಅವರು ಚರ್ಚೆ ಮಾಡಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ವಿಶ್ವನಾಥ್, ಹಿರಿಯರು, ಅವರು ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಕೂಡಾ ಬೇಸರ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಕೂಡಾ ಬೇಸರ

"ಕುಮಾರಸ್ವಾಮಿಯವರು ಮಾಡೋದು ಎರಡು ಕೆಲಸ ಒಂದು ಕಣ್ಣೀರು ಹಾಕುವುದು, ಮತ್ತೊಂದು ಭವಿಷ್ಯ ಹೇಳೋದು" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕುಮಾರಸ್ವಾಮಿಯವರ ಕಣ್ಣೀರು ಹಾಕಿದ ಘಟನೆಯನ್ನು ಲೇವಡಿ ಮಾಡಿದ್ದರು. ಸದಾನಂದ ಗೌಡ್ರು ಲೇವಡಿ ಮಾಡಿದ್ದಕ್ಕೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಕೂಡಾ ಬೇಸರ ವ್ಯಕ್ತಪಡಿಸಿದ್ದರು.

English summary
BJP Leaders Honey Trap, Former CM HD Kumaraswamy Reaction In Mysuru. HDK Also Condemned DV Sadananda Gowda Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X