ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಅಲೆ ಭ್ರಮೆ' ಬಗ್ಗೆ ಬಿಎಸ್‌ವೈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಯ ವಿಚಾರವಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನೀಡಿರುವ ಹೇಳಿಕೆಯು ಹಲವಾರು ಕರ್ನಾಟಕ ಬಿಜೆಪಿ ನಾಯಕರು ಹಾಗೂ ಕೇಂದ್ರ ಬಿಜೆಪಿ ನಾಯಕರು ಅಸಮಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಯಾವ ರೀತಿಯಲ್ಲಿ ಗಟ್ಟಿಗೊಳಿಸುವುದು ಹಾಗೂ ಮುಂದಿನ ಚುನಾವಣೆಯನ್ನು ಯಾವ ರೀತಿಯಲ್ಲಿ ಎದುರಿಸುವುದು ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅಲೆಯನ್ನೇ ನಂಬಿದರೆ ಆಗದು ಎಂಬುವುದನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

 ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು? ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು?

"ಮುಂದಿನ ಚುನಾವಣೆಗಳನ್ನು ಬರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲೇ ಗೆಲ್ಲಲು ಸಾಧ್ಯವಿಲ್ಲ ಎಂಬುವುದನ್ನು ನಾವು ಮನಗಾಣಬೇಕು. ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲೇ ಮುಂದಿನ ಚುನಾವಣೆಯನ್ನು ಗೆಲ್ಲಬಹುದು ಎಂಬ ಭ್ರಮೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಹೊರಬರಬೇಕು. ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಳ್ಳುವುದನ್ನೇ ನಾವು ಅವಲಂಬಿಸಬಾರದು," ಎಂದು ತಿಳಿಸಿದ್ದಾರೆ.

BJP leader upset over former CM B S Yediyurappas comments on Modi wave in Karnataka

ಹಾಗೆಯೇ "ಪಕ್ಷದ ನಾಯಕರುಗಳು ನಮ್ಮ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟು ಕೊಂಡು ಚುನಾವಣಾ ಪ್ರಚಾರ ಕಾರ್ಯವನ್ನು ಮಾಡಬೇಕು. ಈ ವಿಚಾರದಲ್ಲಿ ಜನರನ್ನು ತಲುಪಬೇಕು. ಪಕ್ಷವು ತುಳಿತಕ್ಕೆ ಒಳಗಾದ ಸಮುದಾಯದ ಜನರನ್ನು ವಿಶ್ವಾಸದಿಂದ ಪಕ್ಷದ ಕಾರ್ಯಕರ್ತರನ್ನಾಗಿಸಬೇಕು ಹಾಗೂ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ತಂಡವನ್ನು ರಚನೆ ಮಾಡಬೇಕು," ಎಂದು ಭಾನುವಾರ ಯಡಿಯೂರಪ್ಪ ದಾವಣಗೆರೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಅಭಿಪ್ರಾಯಿಸಿದ್ದಾರೆ.

"ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ಜಯಗಳಿಸುವುದು ಸುಲಭ. ಆದರೆ ನಿಜವಾದ ಪರೀಕ್ಷೆಯೆಂದರೆ ಎರಡು ವಿಧಾನ ಸಭೆ ಕ್ಷೇತ್ರದಲ್ಲಿ ಮುಂದೆ ಬರುವ ಉಪಚುನಾವಣೆಯಲ್ಲಿ ನಾವು ಗೆಲುವು ಸಾಧಿಸುವುದು," ಎಂದು ಹೇಳಿದ್ದಾರೆ. "ಬಿಜೆಪಿಯು ಮುಂದಿನ 2024 ರ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮತ್ತೆ ಅಧಿಕಾರವನ್ನು ಪಡೆಯಲಿದೆ. ಆದರೆ ಎಲ್ಲಾ ಚುನಾವಣೆಗಳಲ್ಲಿ ಪಕ್ಷವು ಗೆಲವು ಸಾಧಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ," ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕಾರಣಿಯಿಂದ ರವಾನೆಯಾದ ಮಹತ್ವದ ಸಂದೇಶ! ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕಾರಣಿಯಿಂದ ರವಾನೆಯಾದ ಮಹತ್ವದ ಸಂದೇಶ!

ಆದರೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಈ ಹೇಳಿಕೆಯು ಬಿಜೆಪಿ ಪಕ್ಷದ ಹಲವು ನಾಯಕರಲ್ಲಿ ಬೇಸರವನ್ನು ಉಂಟು ಮಾಡಿದೆ ಎಂದು ಹೇಳಲಾಗಿದೆ. "ಯಡಿಯೂರಪ್ಪರ ಈ ಹೇಳಿಕೆಯ ವಿಚಾರವು ಹೈಕಮಾಂಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಬಿಎಸ್‌ವೈ ಜೊತೆ ಹೈಕಮಾಂಡ್‌ ಮಾತನಾಡಲಿದೆ," ಎಂದು ಮೂಲಗಳು ತಿಳಿಸಿದೆ.

ಇನ್ನು ಈ ನಡುವೆ ನಿಮ್ಮ ತಂದೆಯ ಪ್ರವಾಸ ಕಾರ್ಯಗಳಿಗೆ ಪಕ್ಷವು ಬ್ರೇಕ್‌ ಹಾಕಿದೆಯೇ ಎಂದು ಬಿಎಸ್‌ವೈ ಪುತ್ರ ಬಿ ವೈ ವಿಜಯೇಂದ್ರರ ಬಳಿ ಮಾಧ್ಯಮಗಳು ಕೇಳಿದಾಗ, "ಎಲ್ಲಾ ನಿಯಂತ್ರಣವು ನನ್ನ ತಂದೆಯ ಕೈಯಲ್ಲಿ ಇದೆ. ಯಡಿಯೂರಪ್ಪನವರು ಯಾವಾಗ ಬೇಕೋ ಅವಾಗ ನಿಯಂತ್ರಣವನ್ನು ಮಾಡಿಕೊಳ್ಳಬಹುದು," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಪಕ್ಷದೊಳಗಿನ ಮೂಲಗಳು, ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್‌ ಯಡಿಯೂರಪ್ಪರನ್ನು ಕೆಳಗಿಳಿಸಲು ಹೇಳಿದ ನಂತರ, ಮೊದಲ ಬಾರಿಗೆ ಯಡಿಯೂರಪ್ಪ ಈ ರೀತಿಯಾಗಿ ತೀಕ್ಷ್ಣವಾದ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿಚಾರದಲ್ಲಿ.

"ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಮತ್ತೆ ಗೆಲ್ಲುತ್ತೇವೆ, ಯಾಕೆಂದರೆ ಮೋದಿಯವರಿಗೆ ಪರ್ಯಾಯವಾಗಿ ದೇಶದ ರಾಜಕಾರಣದಲ್ಲಿ ಇನ್ನೊಂದು ಹೆಸರು ಇಲ್ಲ. ಆದರೆ, ರಾಜ್ಯದ ವಿಚಾರಕ್ಕೆ ಬಂದಾಗ ಕಾಂಗ್ರೆಸ್ ಶಕ್ತಿಯುತಗೊಳ್ಳುತ್ತಾ ಸಾಗುತ್ತಿದೆ. ಹಾಗಾಗಿ, ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ನಾವು ಜನರ ಮುಂದೆ ಹೋಗಬೇಕಿದೆ. ಹಾಗಾಗಿ ರಾಜ್ಯ ಪ್ರವಾಸ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ"ಎಂದು ಯಡಿಯೂರಪ್ಪ ಹೇಳಿದ್ದಾರೆ.

Recommended Video

ಸೋಲು ಕಣ್ಣ ಮುಂದೆ ಇದ್ರೂ RCB ಆಟಗಾರನ ಕಣ್ಣು ಈಕೆ ಮೇಲೆ | Oneindia Kannada

(ಒನ್‌ ಇಂಡಿಯಾ ಸುದ್ದಿ)

English summary
BJP leadership upset over Karnataka former Chief Minister B S Yediyurappa's comments on Modi wave. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X