ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ. ಕೆ. ಶಿವಕುಮಾರ್ ಭೇಟಿಯಾದ ಬಿಜೆಪಿ ನಾಯಕ ಎಸ್. ಎಂ. ಕೃಷ್ಣ

|
Google Oneindia Kannada News

Recommended Video

SM Krishna meets DK Shivakumar

ಬೆಂಗಳೂರು, ನವೆಂಬರ್ 07 : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಡಿ. ಕೆ. ಶಿವಕುಮಾರ್‌ಗೆ ಎಸ್. ಎಂ. ಕೃಷ್ಣ ರಾಜಕೀಯ ಗುರು, ಕುಟುಂಬಕ್ಕೂ ಆಪ್ತರು.

ಬುಧವಾರ ರಾತ್ರಿ ಎಸ್. ಎಂ. ಕೃಷ್ಣ ಪತ್ನಿ ಪ್ರೇಮಾ ಅವರ ಜೊತೆ ಸದಾಶಿವ ನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದರು. ಡಿ. ಕೆ. ಶಿವಕುಮಾರ್ ಮತ್ತು ಡಿ. ಕೆ. ಸುರೇಶ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದರು. ದೆಹಲಿಯ ತಿಹಾರ್ ಜೈಲಿನಿಂದ ಅವರು ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ಎಸ್. ಎಂ. ಕೃಷ್ಣ ಭೇಟಿ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಡಿ. ಕೆ. ಶಿವಕುಮಾರ್ ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಡಿ. ಕೆ. ಶಿವಕುಮಾರ್

ಡಿ. ಕೆ. ಶಿವಕುಮಾರ್ ಮತ್ತು ಸಂಸದ ಡಿ. ಕೆ. ಸುರೇಶ್ ಎದ್ದು ನಿಂತು ಎಸ್. ಎಂ. ಕೃಷ್ಣ ಜೊತೆ ಮಾತುಕತೆ ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎಸ್. ಎಂ. ಕೃಷ್ಣ ಕಾಂಗ್ರೆಸ್ ಪಕ್ಷ ತೊರೆದಿದ್ದು ಅವರು ಬಿಜೆಪಿಯಲ್ಲಿದ್ದಾರೆ.

ಬ್ರದರ್ ಡಿಕೆ: ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಇದ್ದರೆ ಸಾಕು!ಬ್ರದರ್ ಡಿಕೆ: ಸಂಕಷ್ಟದಲ್ಲಿದ್ದಾಗ ಇಂತಹ ಒಬ್ಬ ಸಹೋದರ ಇದ್ದರೆ ಸಾಕು!

ಪಕ್ಷದ ಮಾತಿಲ್ಲ, ರಾಜಕೀಯ ಗುರು

ಪಕ್ಷದ ಮಾತಿಲ್ಲ, ರಾಜಕೀಯ ಗುರು

ಎಸ್. ಎಂ. ಕೃಷ್ಣ ಬಿಜೆಪಿ ನಾಯಕರು. ಡಿ. ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್‌ ಪ್ರಭಾವಿ ನಾಯಕರು. ಆದರೆ, ಇಲ್ಲಿ ಪಕ್ಷದ ಮಾತಿಲ್ಲ. ಡಿ. ಕೆ. ಶಿವಕುಮಾರ್ ಮತ್ತು ಡಿ. ಕೆ. ಸುರೇಶ್‌ಗೆ ಎಸ್. ಎಂ. ಕೃಷ್ಣ ರಾಜಕೀಯ ಗುರುಗಳು.

ಯಾರೂ ಪ್ರಶ್ನೆ ಮಾಡುವುದಕ್ಕೆ ಆಗಲ್ಲ

ಯಾರೂ ಪ್ರಶ್ನೆ ಮಾಡುವುದಕ್ಕೆ ಆಗಲ್ಲ

ಎಸ್. ಎಂ. ಕೃಷ್ಣ ಮತ್ತು ಡಿ. ಕೆ. ಶಿವಕುಮಾರ್ ಬೇರೆ-ಬೇರೆ ಪಕ್ಷದಲ್ಲಿರಲಿ. ಹೊಸ ವರ್ಷ, ಹುಟ್ಟು ಹಬ್ಬದ ಸಂದರ್ಭದಲ್ಲಿ ಡಿ. ಕೆ. ಶಿವಕುಮಾರ್ ಎಸ್. ಎಂ. ಕೃಷ್ಣ ಭೇಟಿ ಮಾಡುತ್ತಾರೆ. "ಎಸ್. ಎಂ. ಕೃಷ್ಣ ಜೊತೆ ನನ್ನ ಸಂಬಂಧ ಬಗ್ಗೆ ಯಾರೂ ಪ್ರಶ್ನೆ ಮಾಡುವುದಕ್ಕಾಗಲ್ಲ. ನನಗೆ ಅವರು ತಂದೆ ಸಮಾನ, ರಾಜಕೀಯವಾಗಿ ಮಾರ್ಗದರ್ಶನ ತೋರಿದವರು" ಎಂದು ಡಿ. ಕೆ. ಶಿವಕುಮಾರ್ ಹಲವು ಬಾರಿ ಹೇಳಿದ್ದಾರೆ.

ಕುಟುಂಬಕ್ಕೂ ಆಪ್ತರು

ಕುಟುಂಬಕ್ಕೂ ಆಪ್ತರು

ರಾಜಕೀಯ ಹೊರತುಪಡಿಸಿ ಎಸ್. ಎಂ. ಕೃಷ್ಣ ಕುಟುಂಬಕ್ಕೂ ಡಿ. ಕೆ. ಶಿವಕುಮಾರ್ ಆಪ್ತರು. ಎಸ್. ಎಂ. ಕೃಷ್ಣ ಅಳಿಯ ದಿ. ಸಿದ್ದಾರ್ಥಗೂ ಡಿ. ಕೆ. ಶಿವಕುಮಾರ್ ಆಪ್ತರಾಗಿದ್ದರು. ಸಿದ್ದಾರ್ಥ ಅವರ ಸಾವಿನ ಸಂದರ್ಭದಲ್ಲಿ ಡಿ. ಕೆ. ಶಿವಕುಮಾರ್ ಎಸ್. ಎಂ. ಕೃಷ್ಣ ಕುಟುಂಬದ ಜೊತೆ ಇದ್ದು ಧೈರ್ಯ ತುಂಬಿದ್ದರು.

ಹಲವು ನಾಯಕರು ಭೇಟಿ ಮಾಡಿದ್ದಾರೆ

ಹಲವು ನಾಯಕರು ಭೇಟಿ ಮಾಡಿದ್ದಾರೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ದೆಹಲಿಯ ತಿಹಾರ್ ಜೈಲು ಸೇರಿದ್ದರು. ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಹಲವು ನಾಯಕರು ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

English summary
Former chief minister of Karnataka S.M.Krishna met the Congress leader D.K.Shivakumar. D.K.Shivakumar very close for BJP leader S.M.Krishna family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X