ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಿಗಾರ್ತಿ ನನ್ನ ತಂಗಿ ಇದ್ದಂತೆ, ಕ್ಷಮೆಯಾಚಿಸುತ್ತೇನೆ: ಈಶ್ವರಪ್ಪ

By Mahesh
|
Google Oneindia Kannada News

ಬೆಂಗಳೂರು, ಅ.18: ಅತ್ಯಾಚಾರ ಪ್ರಕರಣಗಳ ಬಗ್ಗೆ ಬಿಟಿವಿ ವರದಿಗಾರ್ತಿ ಕೇಳಿದ ಪ್ರಶ್ನೆಗೆ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿರುವುದು ಗೊತ್ತಿರಬಹುದು. ಈಗ ಶಿವಮೊಗ್ಗದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, 'ವರದಿಗಾರ್ತಿ ನನ್ನ ತಂಗಿ ಇದ್ದಂತೆ, ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ' ಎಂದಿದ್ದಾರೆ.

ಇಷ್ಟಕ್ಕೂ ನಾನ್ನು ತಪ್ಪು ಮಾಡಿದ್ರೆ ಎಂದರೆ ಜನರು ತೀರ್ಮಾನ ತೆಗೆದುಕೊಳ್ಳಲಿ. ಸುಮ್ಮನೆ ಒಂದು ಕ್ಲಿಪ್ಪಿಂಗ್ ಮಾತ್ರ ಹಾಕಿ ನನ್ನ ಹೇಳಿಕೆಯನ್ನು ವಿವಾದಕ್ಕೆ ಕಾರಣ ಮಾಡಬೇಡಿ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ, ರೈತರ ಆತ್ಮಹತ್ಯೆಯನ್ನು ಕಾಂಗ್ರೆಸ್ ಸರ್ಕಾರವೇ ತಡೆಯಲು ಆಗುತ್ತಿಲ್ಲ. ಅಡಳಿತವಿಲ್ಲದ ವಿರೋಧ ಪಕ್ಷದವರಾದ ನಾವು ಏನು ಮಾಡಲು ಸಾಧ್ಯ ಎಂದು ನಾನು ಹೇಳಿದೆ.

BJP Leader KS Eshwarappa apology on Rape remark on TV Journalist

ವರದಿಗಾರ್ತಿ ಕೇಳಿದ ಪ್ರಶ್ನೆಗೂ ಮುನ್ನ ನಾನು ನೀಡಿದ ವಿವರಣೆ ಪೂರ್ತಿ ಕೇಳಿಸಿಕೊಳ್ಳಿ. ಇಷ್ಟಾದರೂ ವರದಿಗಾರ್ತಿ ನನ್ನ ತಂಗಿ ಇದ್ದಂತೆ, ನನ್ನ ಹೇಳಿಕೆಯಿಂದ ಆಕೆಗೆ ನೋವಾಗಿದ್ದರೆ, ನಾನು ಆಕೆ ಹಾಗೂ ರಾಜ್ಯದ ಜನತೆಯನ್ನು ಕ್ಷಮೆಯಾಚಿಸುತ್ತೇನೆ. ಈ ವಿಷಯವನ್ನು ಹೆಚ್ಚಿಗೆ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದರು.[ಈಶ್ವರಪ್ಪ ಹೇಳಿಕೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ]

ಟಿವಿ ವರದಿಗಾರ್ತಿ ಪೂರ್ಣಿಮಾ ಅವರು ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ನೀಡಿದ್ದ ಹೇಳಿಕೆ "ನಿನ್ನನ್ನು ಯಾವನೋ ಎಳೆದ್ಕೊಂಡು ಹೋಗಿ ರೇಪ್ ಮಾಡಿದ್ರೆ ನಾ ಏನ್ ಮಾಡೋಕಾಗುತ್ತೆ? ನಾನು ಎಲ್ಲೋ ಇರ್ತೀನಿ, ಎಲ್ಲದಕ್ಕೂ ಪ್ರತಿಭಟಿಸೋಕಾಗುತ್ತಾ?" ವಿವಾದಕ್ಕೆ ಕಾರಣವಾಗಿದೆ.

ಸಿಎಂಗೆ ಮನವಿ ಈಶ್ವರಪ್ಪ ವಿರುದ್ಧ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.ಮಹಿಳೆಯ ಗೌರವ ಕ್ಕೆ ಧ್ಕೆ ತರುವುದು ಐಪಿಸಿ ಸೆಕ್ಷನ್ 509 ಹಾಗೂ 294 ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈಶ್ವರಪ್ಪ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು, ಮಹಿಳೆಯ ಗೌರವ ಹಾಗೂ ಪತ್ರಿಕಾ ಸ್ವಾತಂತ್ರವನ್ನು ಎತ್ತಿ ಹಿಡಿಯಬೇಕು ಎಂದು ಪತ್ರಕರ್ತೆ ಗೌರಿ ಲಂಕೇಶ್ ಅವರಿದ್ದ ಪತ್ರಕರ್ತರ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.ಪರಿಶೀಲನೆ ನಡೆಸಿ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವು ದಾಗಿ ಪತ್ರಕರ್ತರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

English summary
BJP Leader KS Eshwarappa asked apology on Rape remark on TV Journalist
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X