ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿ ಮುಗಿಯಿತು, ಈಗ ಕೆಎಫ್‌ಸಿ ನಿಷೇಧಕ್ಕೆ ಮನವಿ

|
Google Oneindia Kannada News

ಮಂಡ್ಯ, ಜೂ. 11 : ಮ್ಯಾಗಿಯಲ್ಲಿ ವಿಷಕಾರಿ ಅಂಶಗಳಿವೆ ಎಂದು ಸರ್ಕಾರ ಮಾರಾಟವನ್ನು ನಿಷೇಧ ಮಾಡಿದೆ. ಈಗ ಕೆಎಫ್‌ಸಿ ಚಿಕನ್ ಮಾರಾಟವನ್ನು ನಿಷೇಧಿಸುವಂತೆ ಕೋರಿ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.

ಕೆಂಟಕಿ ಫ್ರೈಡ್‌ ಚಿಕನ್ (ಕೆಎಫ್‌ಸಿ)ಯಲ್ಲಿ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಅದನ್ನು ನಿಷೇಧಿಸಿ ಎಂದು ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. [ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ]

kfc

ಮ್ಯಾಗಿಯಲ್ಲಿ ಸೀಸದ ಪ್ರಮಾಣ ಹೆಚ್ಚಾಗಿದೆ ಎಂದು ದೇಶದಲ್ಲಿಯೇ ಅದರ ಮಾರಾಟವನ್ನು ನಿಷೇಧಿಸಲಾಗಿದೆ. ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿರುವ ಕೆಎಫ್‌ಸಿ ಉತ್ಪನ್ನಗಳು ಜನರ ಆರೋಗ್ಯಕ್ಕೆ ಮಾರಕವಾಗಿದ್ದು, ಜ್ವರ, ಕರುಳು ಹುಣ್ಣು ಹಾಗೂ ಮಾನವನ ಮೆದುಳಿಗೆ ಹಾನಿ ಉಂಟು ಮಾಡುವ ಅಂಶಗಳನ್ನು ಒಳಗೊಂಡಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.[ನಂಜನಗೂಡು ಮ್ಯಾಗಿ ಘಟಕಕ್ಕೆ ಬೀಗ]

ಕೆಎಫ್ಸಿ ಯಲ್ಲಿ ಹಾನಿಕಾರಕ ಅಂಶಗಳು ಇರುವ ಕುರಿತು ಬಿಬಿಸಿ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್‌ನಲ್ಲಿನ ಕೆಎಫ್‌ಸಿ ರೆಸ್ಟೋರೆಂಟ್ ಘಟಕ ಕಳೆದ 6 ವರ್ಷದಲ್ಲಿ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡಿ 32 ಸಾವಿರ ಡಾಲರ್‌ ದಂಡ ಕಟ್ಟಿದೆ.

ಕರ್ನಾಟಕದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಎಫ್‌ಸಿ ಕಂಪನಿಯ ಆಹಾರ ಉತ್ಪನ್ನಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಮಂಜುನಾಥ್ ಮನವಿ ಮಾಡಿದ್ದಾರೆ.

English summary
Mandya BJP leader C.T.Manjunath demand for ban of Kentucky Fried Chicken (KFC) products in Karnataka. Manjunath submitted memorandum to Mandya DC on Wednesday, June 10, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X