ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಬಿಜೆಪಿ ನಾಯಕನ 1 ಕೋಟಿ ರೂ. ಆಫರ್‌ ಏನು?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾದಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ 1 ಕೋಟಿ ರೂ. ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಚಂದ್ರಾಯ ನಾಗರಾಜ್ ಹೇಳಿದ್ದಾರೆ.

|
Google Oneindia Kannada News

ಬೆಂಗಳೂರು, ಜನವರಿ 27; "ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್‌ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಬಿಜೆಪಿಯ ನಾಯಕರೊಬ್ಬರು ಸಿದ್ದರಾಮಯ್ಯಗೆ ಒಂದು ಆಫರ್ ನೀಡಿದ್ದಾರೆ.

Siddaramaiah; ಕೋಲಾರ ಕ್ಷೇತ್ರ ಆಯ್ಕೆ ಹಿಂದಿನ ಲೆಕ್ಕಾಚಾರಗಳುSiddaramaiah; ಕೋಲಾರ ಕ್ಷೇತ್ರ ಆಯ್ಕೆ ಹಿಂದಿನ ಲೆಕ್ಕಾಚಾರಗಳು

ಬಿಜೆಪಿ ಮುಖಂಡ ಚಂದ್ರಾಯ ನಾಗರಾಜ್ ಮಾತನಾಡಿ, "ಯಾದಗಿರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ನನ್ನ ಜಮೀನು ಮಾರಿಯಾದರೂ 1 ಕೋಟಿ ರೂ. ಕೊಡುತ್ತೇನೆ" ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಹರಕೆಯ ಕುರಿ; ಅವರಿಗೆ ಕೋಲಾರ ಸೇಫ್ ಅಲ್ಲ: ಹೆಚ್.ಡಿ.ಕುಮಾರಸ್ವಾಮಿಸಿದ್ಧರಾಮಯ್ಯ ಹರಕೆಯ ಕುರಿ; ಅವರಿಗೆ ಕೋಲಾರ ಸೇಫ್ ಅಲ್ಲ: ಹೆಚ್.ಡಿ.ಕುಮಾರಸ್ವಾಮಿ

BJP Leader 1 Crore Offer For Siddaramaiah To Contest From Yadgir

"ಯಾದಗಿರಿಯಿಂದ ಸ್ಪರ್ಧಿಸಿದರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿ 50 ರಿಂದ 60 ಸಾವಿರ ಮತಗಳಿಂದ ಗೆಲ್ಲಿಸುತ್ತೇವೆ. ಯಾದಗಿರಿಯಿಂದ ಸ್ಪರ್ಧಿಸಿ ಎಂದು ಕಾಲು ಹಿಡಿದು ಮನವಿ ಮಾಡುತ್ತೇನೆ" ಎಂದು ಚಂದ್ರಾಯ ನಾಗರಾಜ್ ತಿಳಿಸಿದ್ದಾರೆ.

 17 ಕೋಟಿ, ಮಿನಿಸ್ಟರ್‌ ಪೋಸ್ಟ್‌: ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸ ಗೌಡರ ಆಡಿಯೊ ವೈರಲ್‌- ಅಂತದ್ದೇನಿದೆ 17 ಕೋಟಿ, ಮಿನಿಸ್ಟರ್‌ ಪೋಸ್ಟ್‌: ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸ ಗೌಡರ ಆಡಿಯೊ ವೈರಲ್‌- ಅಂತದ್ದೇನಿದೆ

"ನಾನೇನು ದೊಡ್ಡ ಉದ್ಯಮಿಯಲ್ಲ. ಅವರ ಅಭಿಮಾನಿ. ಅವರು ಬಂದರೆ ನಮ್ಮ ಭಾಗ ಅಭಿವೃದ್ಧಿ ಆಗುತ್ತದೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ ಋಣದಲ್ಲಿ ನಮ್ಮ ಭಾಗದ ಜನರಿದ್ದಾರೆ. ಹೀಗಾಗಿ ಮತ ಹಾಕುತ್ತಾರೆ" ಎಂದರು.

"ಕೋಲಾರ ಕ್ಷೇತ್ರದಲ್ಲಿ ಅವರ ಸ್ಪರ್ಧೆಗೆ ಕೆಲವರು ವಿರೋಧಿಸುತ್ತಿದ್ದಾರೆ. ಯಾದಗಿರಿಯಲ್ಲಿ ಸ್ಪರ್ಧೆ ಮಾಡಿದರೆ ನಾವು ಗೆಲ್ಲಿಸುತ್ತೇವೆ. ಸಿದ್ದರಾಮಯ್ಯ ಬಂದರೆ ಯಾದಗಿರಿ, ಸುರಪುರ, ಶಹಾಪುರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ" ಎಂದು ಚಂದ್ರಾಯ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BJP Leader 1 Crore Offer For Siddaramaiah To Contest From Yadgir

"ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಶರಣ ಬಸಪ್ಪಗೌಡ ದರ್ಶನಾಪುರ ಸ್ಪರ್ಧಿಸಲಿ. ಅವರು ಕಣಕ್ಕಿಳಿದರೆ ನಾನು 25 ಲಕ್ಷ ನೀಡುತ್ತೇನೆ. ಅಹಿಂದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಎ. ಸಿ. ಕಾಡ್ಲೂರ್, ಭೀಮಣ್ಣ ಮೇಟಿ, ಶರಣಪ್ಪ ಸಲಾದಪುರ ಸ್ಪರ್ಧೆ ಮಾಡಿದರೆ ನಾವು ಕಾಂಗ್ರೆಸ್ ಸೇರುತ್ತೇವೆ" ಎಂದು ಬಿಜೆಪಿ ಮುಖಂಡ ಹೇಳಿಕೆ ನೀಡಿದ್ದಾನೆ.

ಬಾದಾಮಿಯ ಶಾಸಕರು; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕರು. ಹೈಕಮಾಂಡ್ ಒಪ್ಪಿದರೆ ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯುವೆ ಎಂದು ಈಗಾಗಲೇ ಅವರು ಘೋಷಣೆ ಮಾಡಿದ್ದಾರೆ.

ಮತ್ತೊಂದು ಕಡೆ ಮೈಸೂರಿನ ವರುಣಾದಿಂದ ಸಿದ್ದರಾಮಯ್ಯ ಕಣಕ್ಕಿಳಿಯಬೇಕು ಎಂಬ ಬೇಡಿಕೆಯೂ ಇದೆ. ಕ್ಷೇತ್ರದ ಹಾಲಿ ಶಾಸಕರು ಯತೀಂದ್ರ ಸಿದ್ದರಾಮಯ್ಯ, ಶುಕ್ರವಾರ ಗದಗದಲ್ಲಿ ಮಾತನಾಡಿದ ಅವರು, "ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವ ಇಚ್ಛೆ ಇದೆ. ಹೈಕಮಾಂಡ್ ಅನುಮತಿ ನೀಡಬೇಕು" ಎಂದು ಹೇಳಿದ್ದಾರೆ ಎಂದರು.

"ನಾನು ಕೂಡಾ ವರುಣಾದಿಂದ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದೇನೆ. ನಾನು ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೇ ಇಲ್ಲ, ನಾನೇ ಅವರನ್ನು ಕರೆಯುತ್ತಿದ್ದೇನೆ. ಅವರ ಕೊನೆಯ ಚುನಾವಣೆ ಆಗಿರುವುದರಿಂದ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ನನ್ನ ಹಾಗೂ ಕ್ಷೇತ್ರದ ಜನರ ಆಸೆ" ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕೋಲಾರವೇ ಏಕೆ?; ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಾದಾಮಿ ದೂರ ಇರುವ ಕಾರಣ ಬೆಂಗಳೂರು ನಗರಕ್ಕೆ ಸಮೀಪದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ವಿಶ್ಲೇಷಣೆಯಾಗಿತ್ತು.

ಈಗ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ.
ಕೋಲಾರ ಕ್ಷೇತ್ರ ಹಾಲಿ ಶಾಸಕರು ಕೆ. ಶ್ರೀನಿವಾಸ ಗೌಡ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಅವರು ಈಗ ಕಾಂಗ್ರೆಸ್ ಸೇರುತ್ತಿದ್ದಾರೆ.

"ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದೆ ಬೆಂಬಲ ನೀಡುತ್ತೇನೆ" ಎಂದು ಸಹ ಹೇಳಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಕೋಲಾರದಿಂದಲೇ ಕಣಕ್ಕಿಳಿಯುತ್ತಾರೆ ಎಂಬುದು ಸದ್ಯದ ಸುದ್ದಿ.

English summary
Chandraya Nagaraj BJP leader from Yadgir offered Rs 1 crore for leader of opposition Siddaramaiah if he wish to contest for election from Yadgir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X