ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೀಶ್ ಶೆಟ್ಟರ್ ಇನ್ನು ವಿರೋಧ ಪಕ್ಷದ ನಾಯಕ?

By Srinath
|
Google Oneindia Kannada News

BJP-KJP merger- Jagadish Shettar to become Leader of Opposition
ಬೆಂಗಳೂರು, ಜ.4: ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯನ್ನು ಬಲಿಷ್ಠಗೊಳಿಸಬೇಕೆಂದು ಒಗ್ಗೂಡಿರುವ ಬಿಜೆಪಿ ಮತ್ತು ಕೆಜೆಪಿ, ತಮ್ಮ ಬೇರ್ಪಡುವಿಕೆಯಿಂದಾಗಿ ವಿಧಾನಸೌಧದಲ್ಲಿ ಕಳೆದುಕೊಂಡಿದ್ದ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನು ಮತ್ತೆ ಗಳಿಸಲು ತರಾತುರಿ ತೋರಿದೆ.

ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದಿನಿತೂ ತಡಮಾಡದೆ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನಮಾನಕ್ಕಾಗಿ ದಾವೆ ಹೂಡಿ ಬಂದಿದ್ದರೆ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ.

ಅಂದಹಾಗೆ ಜಗದೀಶ್ ಶೆಟ್ಟರ್ ಅವರು ಪ್ರಸ್ತುತ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಮುಂದೆ ಬಿಜೆಪಿ ಮತ್ತು ಕೆಜೆಪಿ ವಿಲೀನಕ್ಕೆ ಅಧಕೃತವಾಗಿ ಮಾನ್ಯತೆ ದೊರೆತು, ಬಿಜೆಪಿಯೇ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿದರೆ ಜಗದೀಶ್ ಶೆಟ್ಟರ್ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿ ಸ್ಥಾನಮಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಇದನ್ನು ಖುದ್ದು ಜಗದೀಶ್ ಶೆಟ್ಟರ್ ಅವರೇ ಹೇಳಿದ್ದಾರೆ. ನಿನ್ನೆ ಪತ್ರಕರ್ತರೊಂದಿಗೆ ಮಾತನಾಡಿರುವ ಶೆಟ್ಟರ್, ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಂಡರೆ ಪ್ರತಿಪಕ್ಷ ನಾಯಕ ಸ್ಥಾನವನ್ನು ಮಾಜಿ ಸಿಎಂ ಯಡಿಯೂರಪ್ಪ ವಹಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಕೊಟ್ಟಿದ್ದಾರೆ.

ಸದ್ಯ ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಳ್ಳಲಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವಿಲೀನಗೊಂಡ ಬಳಿಕವೂ ಪ್ರತಿಪಕ್ಷದ ನಾಯಕನಾಗಿ ನಾನೇ ಇರುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ಜತೆಗೆ, ಯಡಿಯೂರಪ್ಪ ಈ ಕುರಿತು ಯಾವುದೇ ಬೇಡಿಕೆ ನಮ್ಮ ಮುಂದೆ ಇಟ್ಟಿಲ್ಲ. ಬೇಷರತ್ತಾಗಿ ಅವರು ಪಕ್ಷಕ್ಕೆ ಮರಳಿದ್ದಾರೆ. ಅವರೇ ನಮ್ಮ ಹಿರಿಯ ನಾಯಕ. ಅವರ ಮಾರ್ಗದರ್ಶನದಲ್ಲೇ ಲೋಕಸಭೆ ಚುನಾವಣೆಯನ್ನು ಶಕ್ತಿಯುತವಾಗಿ ಎದುರಿಸುತ್ತೇವೆ ಎಂದು ಶೆಟ್ಟರ್ ಹೇಳಿದ್ದಾರೆ.

English summary
As BS Yeddyurappa returns to BJP and merge his KJP with BJP, it is almost certain that BJP will get the Oppositon Party status in the Assembly. As such, ex CM Jagadish Shettar has said that he will become Leader of Opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X