ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿದ್ದರಾಮೋತ್ಸವ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ'

|
Google Oneindia Kannada News

ಬೆಂಗಳೂರು, ಜುಲೈ 4: ಆಗಸ್ಟ್ ಮೂರರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ 'ಸಿದ್ದರಾಮೋತ್ಸವ'ದ ಬಗ್ಗೆ ಸ್ವಪಕ್ಷೀಯರಲ್ಲೇ ಒಮ್ಮತವಿಲ್ಲ ಎನ್ನುವುದಕ್ಕೆ ಕೆಲವೊಂದು ವಿದ್ಯಮಾನಗಳು ಸಾಕ್ಷಿಯಾಗಿವೆ.

ಸಿದ್ದರಾಮಯ್ಯ ಮತ್ತವರ ಗುಂಪಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಈ ಕಾರ್ಯಕ್ರಮ ರೂಪುಗೊಳ್ಳುವ ಸಾಧ್ಯತೆಯಿದೆ. ಇದನ್ನರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ಸಿನಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಮುಖ್ಯ ಎಂದು ಪರೋಕ್ಷವಾಗಿ ಕಾರ್ಯಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ದ್ರೌಪದಿ ಮುರ್ಮುಗೆ ಯಶವಂತ್‌ ಸಿನ್ಹಾ ಮನವಿ ಏನು?ದ್ರೌಪದಿ ಮುರ್ಮುಗೆ ಯಶವಂತ್‌ ಸಿನ್ಹಾ ಮನವಿ ಏನು?

ಮಾಜಿ ಸಚಿವ ಮತ್ತು ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಳ್ಳುವ ಆರ್.ವಿ.ದೇಶಪಾಂಡೆ ಈ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿದ್ದಾರೆ. ಜೊತೆಗೆ, ಈ ಕಾರ್ಯಕ್ರಮಕ್ಕೆ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ ಕೂಡಾ ಆಗಮಿಸಲಿದ್ದಾರೆ. ಈ ವಿಚಾರವನ್ನು ಖುದ್ದು ಸಿದ್ದರಾಮಯ್ಯನವರೇ ಖಚಿತ ಪಡಿಸಿದ್ದಾರೆ.

ಸಿದ್ದರಾಮೋತ್ಸವವನ್ನು ಇಟ್ಟುಕೊಂಡು ಬಿಜೆಪಿಯ ಐಟಿ ಸೆಲ್, ಕೆಪಿಸಿಸಿ ಅಧ್ಯಕ್ಷರ ಕಾಲೆಳೆದಿದೆ. ಅದು ಬರೀ ಸಿದ್ದರಾಮೋತ್ಸವವನ್ನು ಅದು ನಿಮ್ಮ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ ಎಂದು ಟ್ವೀಟ್ ಮಾಡಿದೆ.

ಬಿಜೆಪಿ ಧರ್ಮಗಳ ನಡುವೆ ಬಿಜೆಪಿ ಸಂಘರ್ಷ ತರುತ್ತಿದೆ: ಕುಮಾರಸ್ವಾಮಿಬಿಜೆಪಿ ಧರ್ಮಗಳ ನಡುವೆ ಬಿಜೆಪಿ ಸಂಘರ್ಷ ತರುತ್ತಿದೆ: ಕುಮಾರಸ್ವಾಮಿ

 ತಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಡಿಸುತ್ತಿರುವ ಸಿದ್ದರಾಮಯ್ಯ

ತಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಡಿಸುತ್ತಿರುವ ಸಿದ್ದರಾಮಯ್ಯ

"ಇದುವರೆಗೆ ತಮ್ಮ ಪಟಾಲಂ ಮೂಲಕ ಸಿದ್ದರಾಮಯ್ಯ "ತಾನೇ ಮುಂದಿನ ಮುಖ್ಯಮಂತ್ರಿ" ಎಂಬ ಹೇಳಿಕೆ ಕೊಡಿಸುತ್ತಿದ್ದರು. ಈಗ ನೇರವಾಗಿ "ನಾನೇ ಮುಖ್ಯಮಂತ್ರಿ ಆಗಬೇಕೆಂದು ನನ್ನ ರಾಜಕೀಯ ಗುರುಗಳು ಆಶಿಸಿದ್ದರು" ಎಂದು ಹೇಳುವ ಮೂಲಕ ಕುರ್ಚಿಯ ಆಸೆ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಬೆವರು, ಬಂಡವಾಳ ಹೂಡುತ್ತಿರುವ ಡಿಕೆಶಿ ಏನು ಮಾಡಬೇಕು?" ಎಂದು ಬಿಜೆಪಿಯ ಕರ್ನಾಟಕ ಐಟಿ ಘಟಕ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದೆ.

 ಕೆಪಿಸಿಸಿ ಅಧ್ಯಕ್ಷರು ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುತ್ತಿದ್ದಾರೆ

ಕೆಪಿಸಿಸಿ ಅಧ್ಯಕ್ಷರು ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುತ್ತಿದ್ದಾರೆ

"ಚುನಾವಣೆ ಹತ್ತಿರ ಬರುತ್ತಿದ್ದಂತೆ @siddaramaiah ಅವರಿಗೆ ಸಿಎಂ ಕುರ್ಚಿಯ ಕನಸು ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುತ್ತಿದ್ದಾರೆ. ನಾನಿಲ್ಲದೆ ಕಾಂಗ್ರೆಸ್‌ ಇಲ್ಲ ಎಂದು ಸಿದ್ದರಾಮಯ್ಯ ಎನ್ನುತ್ತಿದ್ದಾರೆ. ಆದರೆ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷವನ್ನೇ ತಿರಸ್ಕರಿಸಿದ್ದಾರೆ". "ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ.

ಸಿದ್ದರಾಮೊತ್ಸವ ಎನ್ನುವುದು ಸಿದ್ದರಾಮಯ್ಯ ಬ್ಯಾನರ್‌ ಅಡಿ ತಯಾರಾಗುತ್ತಿರುವ ಚಿತ್ರ. ಈ ಚಿತ್ರದ ಮೂಲಕ ತಾವೇ ಮುಂದಿನ ಸಿಎಂ ಎಂಬ ಸಂದೇಶ ನೀಡುವುದು ಖಚಿತ. ಶ್ರಮ ಡಿಕೆಶಿ ಅವರದ್ದು, ಅಧಿಕಾರ ಮಾತ್ರ ಸಿದ್ದರಾಮಯ್ಯಗೆ!" ಎಂದು ರಾಜ್ಯ ಬಿಜೆಪಿ ಐಟಿ ಘಟಕ ಮಾಡಿರುವ ಟ್ವೀಟ್.

 ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ

ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ

"ಕೆಪಿಸಿಸಿ ಅಧ್ಯಕ್ಷರ ವಿರೋಧ ನಡುವೆಯೂ ಸಿದ್ದರಾಮೋತ್ಸವ ನಡೆಯಲಿದೆ ಎಂದಾದರೆ ಡಿಕೆಶಿ ಇದ್ದೂ ಇಲ್ಲದಂತಾಗಿದ್ದಾರೆ. ಸಿದ್ದರಾಮೋತ್ಸವ ಕೇವಲ ಸಿದ್ದರಾಮಯ್ಯರ ಜನ್ಮದಿನೋತ್ಸವವಲ್ಲ. ಅದು ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ @DKShivakumar ಹಲ್ಲಿಲ್ಲದ ಹಾವು!" ಎಂದು ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ತೊಂದರೆ ತಂದೊಡ್ಡಲಿದ್ದಾರೆ ಎಂದು ಬಿಜೆಪಿಯ ಐಟಿ ಘಟಕ ಟೀಕಿಸಿದೆ.

 ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ

ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ

"ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಆ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ.‌ ಸಿದ್ದರಾಮೋತ್ಸವದ ಬಳಿಕ ಕನಕಪುರದ ಬಂಡೆ ಛಿದ್ರವಾಗಲಿದೆಯೇ?". "ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ. ನನ್ನ ಉತ್ಸವಕ್ಕೆ ರಾಹುಲ್ ಬರುತ್ತಾರೆ ಎನ್ನುವ ಸಿದ್ದರಾಮಯ್ಯ, ರಾಹುಲ್ ಬರುವ ವಿಷಯವೇ ಗೊತ್ತಿಲ್ಲ ಎನ್ನುತ್ತಿರುವ ಡಿಕೆಶಿ. ಡಿಕೆಶಿಗೆ ಮಾಹಿತಿ ಇಲ್ಲದೆ ರಾಹುಲ್ ಬರುತ್ತಾರೆಯೇ? ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸುಳಿವೇ ಇದು?" ಎಂದು ಬಿಜೆಪಿ ಪ್ರಶ್ನಿಸಿದೆ.

English summary
Karnataka BJP IT Cell Tweet On Siddaramothsava Programme To Be Held At Davangere. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X