ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿದ್ದರಾಮಯ್ಯನವರಿಗೆ ನಕಲಿ ಗಾಂಧಿ ಕುಟುಂಬದ ಸೇವೆ ಮಾಡಲು ಸಾಧ್ಯವೇ?'

|
Google Oneindia Kannada News

ಬೆಂಗಳೂರು, ಜೂನ್ 16: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಹುಲ್ ಗಾಂಧಿಯವರ ವಿಚಾರಣೆ ನಡೆಸುತ್ತಿರುವುದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಕೆಪಿಸಿಸಿ ಇಂದು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ.

Recommended Video

HD Devegowda ಭಾರತದ ಮುಂದಿನ ಪ್ರೆಸಿಡೆಂಟ್ ಆಗ್ತಾರಾ? | *Politics | Oneindia Kannada

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟುವಾದ ಪದಗಳಿಂದ ಕಾಂಗ್ರೆಸ್ ಮುಖಂಡರು ಟೀಕಿಸುತ್ತಿದ್ದಾರೆ. ಇತ್ತ, ಕರ್ನಾಟಕ ಬಿಜೆಪಿಯ ಸಾಮಾಜಿಕ ಜಾಲತಾಣದ ಘಟಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ದ ಟ್ವೀಟ್ ಗಳ ಸುರಿಮಳೆಯನ್ನೇ ಮಾಡಿದೆ.

ನ್ಯಾಷನಲ್ ಹೆರಾಲ್ಡ್ ಕೇಸ್: ರಾಹುಲ್ ಇಡಿ ವಿಚಾರಣೆ ಬಗ್ಗೆ ಉಗ್ರಪ್ಪ ಕಿಡಿನ್ಯಾಷನಲ್ ಹೆರಾಲ್ಡ್ ಕೇಸ್: ರಾಹುಲ್ ಇಡಿ ವಿಚಾರಣೆ ಬಗ್ಗೆ ಉಗ್ರಪ್ಪ ಕಿಡಿ

"ಸಮಾನಶೀಲೆ ವ್ಯಸನೇಷು ಸಖ್ಯಃ" ಅಂದರೆ ಸಮಾನ ಮನಸ್ಕರಲ್ಲಿ ಮಾತ್ರ ಗೆಳೆತನ ಹಾಗೂ ಇನ್ನಿತರೆ ಸಂಬಂಧ ಬೆಳೆಯುತ್ತವೆ. ಅಕ್ರಮ ಸಂಪಾದನೆ ಎಂಬ ಸಮಾನ ಗುಣ ಡಿಕೆಶಿ ಹಾಗೂ ನಕಲಿ ಗಾಂಧಿ ಕುಟುಂಬದ ಮಧ್ಯೆ ಇದೆ. ಈ ವಿಚಾರದಲ್ಲಿ @siddaramaiah ಅವರದ್ದೇನಾದರೂ ಗುಟ್ಟು ಇರಬಹುದೇ?" ಎಂದು ಬಿಜೆಪಿ ಲೇವಡಿ ಮಾಡಿದೆ.

"ಸಿದ್ದರಾಮಯ್ಯನವರು ಅಧಿಕಾರಕ್ಕಾಗಿ ಎಷ್ಟೇ ಅಲವತ್ತುಕೊಂಡರೂ @DKShivakumar ರೀತಿಯಲ್ಲಿ ನಕಲಿ ಗಾಂಧಿ ಕುಟುಂಬದ ಸೇವೆ ಮಾಡಲು ಸಾಧ್ಯವೇ? ಡಿಕೆಶಿ ಅವರನ್ನು ಬದಿಗೆ ಸರಿಸಿ ನಕಲಿ ಗಾಂಧಿ ಕುಟುಂಬ ನಿಮ್ಮನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುತ್ತಾರೆಯೇ?" ಎಂದು ಬಿಜೆಪಿಯ ಐಟಿ ಘಟಕ, ಸಿದ್ದರಾಮಯ್ಯನವರನ್ನು ಪ್ರಶ್ನಿಸಿದೆ. ಬಿಜೆಪಿ ಮಾಡಿದ ಟ್ವೀಟುಗಳು ಹೀಗಿವೆ:

ಯಾವ ಕಾನೂನಿನಡಿ ರಾಹುಲ್ ಬಂಧಿಸುತ್ತಾರೆ?; ಪ್ರಿಯಾಂಕ್ ಖರ್ಗೆಯಾವ ಕಾನೂನಿನಡಿ ರಾಹುಲ್ ಬಂಧಿಸುತ್ತಾರೆ?; ಪ್ರಿಯಾಂಕ್ ಖರ್ಗೆ

 ಸೋನಿಯಾ ಗಾಂಧಿಯನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೂಂಕರಿಸಿದ ದಿನಗಳು

ಸೋನಿಯಾ ಗಾಂಧಿಯನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೂಂಕರಿಸಿದ ದಿನಗಳು

"ಸಿದ್ದರಾಮಯ್ಯನವರೇ, ನೀವು ಜೆಡಿಎಸ್ ಪಕ್ಷದಲ್ಲಿದಾಗ ಕಾಂಗ್ರೆಸ್ ಅಧಿನಾಯಕಿಯೊಬ್ಬರ ಬಗ್ಗೆ ಪ್ರಯೋಗಿಸುತ್ತಿದ್ದ "ಪದಪುಂಜ" ಗಳು ನೆನಪಿದೆಯೇ? ಸೋನಿಯಾ ಗಾಂಧಿಯನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹೂಂಕರಿಸಿದ ದಿನಗಳು ನೆನಪಿದೆಯೇ? ಆ ದಿನ ಹತ್ತಿರದಲ್ಲಿದೆ, ಸತ್ಯದ ಪರವಾಗಿ ಮತ್ತೊಮ್ಮೆ ಘರ್ಜಿಸಬಲ್ಲಿರಾ?". "ವಿಪಕ್ಷ ನಾಯಕ @siddaramaiah ಇತ್ತೀಚೆಗೆ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ ಅನ್ಯಾಯಗಳನ್ನು ದೇಶದ ಮುಂದಿಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಲು ಅಪ್ರಯತ್ನಪೂರ್ವಕವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ #ಕಾಂಗ್ರೆಸ್‌ಛೋಡೋಅಭಿಯಾನ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಲಿದೆಯೇ?" - ಬಿಜೆಪಿ ಐಟಿ ಸೆಲ್ ಮಾಡಿರುವ ಟ್ವೀಟ್

 ಅಣ್ಣನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು

ಅಣ್ಣನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು

"ಈ ದೇಶ ಕಂಡ ಕರಾಳ ದಿನ ತುರ್ತು ಪರಿಸ್ಥಿತಿಯ ಬಗ್ಗೆ @siddaramaiah ಅವರು ಮತ್ತೆ ಮತ್ತೆ ನೆನಪಿಸುತ್ತಿದ್ದಾರೆ. ಹೌದು ಸಿದ್ದರಾಮಯ್ಯನವರೇ, ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದೇ ನಕಲಿ ಗಾಂಧಿ ಕುಟುಂಬ. ಸಕಾಲದಲ್ಲಿ ವಿಕಾರವನ್ನು ಸ್ಮರಿಸಿದ್ದಕ್ಕಾಗಿ ಧನ್ಯವಾದಗಳು". "ಕೈ ನಾಯಕರು ಶ್ರಮಿಕರಿಗೆ, ದಲಿತರಿಗೆ, ಮಹಿಳೆಯರಿಗೆ ಸಹಾಯ ಹಸ್ತ ಚಾಚುವುದಿಲ್ಲ. ಅವರದ್ದೇನಿದ್ದರೂ ಕೈ ಕೈ ಮಿಲಾಯಿಸುವುದಷ್ಟೇ! ಅಣ್ಣನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು. ಕನಕಪುರವಿರಲಿ, ಬೆಂಗಳೂರಿರಲಿ ಅಥವಾ ದೆಹಲಿ ಇರಲಿ ಗೂಂಡಾಗಿರಿ ಮಾಡುವುದೇ ಇವರ ಪ್ರವೃತ್ತಿ" ಎಂದು ಬಿಜೆಪಿ ರಾಜ್ಯ ಐಟಿ ಸೆಲ್ ಟ್ವೀಟ್ ಮಾಡಿದೆ.

 ಕನಕಪುರದ ಬಂಡೆಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು

ಕನಕಪುರದ ಬಂಡೆಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು

"ಕನಕಪುರದ ಬಂಡೆಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು. ಇವರ ಹಾದಿಯನ್ನೇ ಯುವಾಧ್ಯಕ್ಷರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿರುವವರಲ್ಲೂ ಐಪಿಸಿ ಸೆಕ್ಷನ್ ಬೋರ್ಡ್ ಹಾಕಿಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ!". "ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು! ಪಬ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ‌‌ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ. ಎಲ್ಲರೂ ಗೂಂಡಾಗಿರಿಯ ತುಣುಕುಗಳೇ" ಎಂದು ಡಿಕೆಶಿ ಸಹೋದರರನ್ನು ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.

 ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ

ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ

ಯತಾರಾಜಾ ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ. ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ! ಇ‌ವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ. ದೆಹಲಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಬಂಧನಕ್ಕೆ ಒಳಗಾದ ಶಾಸಕ, ಸಂಸದರಿಗೂ ಗೂಂಡಾಗಿರಿಯ ಘನ ಇತಿಹಾಸ ಇದೆ‌. ಒಬ್ಬರು ಕನಕಪುರದ ಅಘೋಷಿತ ರೌಡಿ, ಇನ್ನೊಬ್ಬರು 'ಗೂಂಡಾರಾಯರು'.

English summary
Karnataka BJP IT Cell Series Of Tweet On KPCC Protest And Siddaramaiah. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X