• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರು ಶಿಷ್ಯರ ಮಾತಿನ ಮಲ್ಲಯುದ್ದ: ಸೈಲೆಂಟ್ ಆಗಿ ಮುಸಿಮುಸಿ ನಗುತ್ತಿರುವ ಬಿಜೆಪಿ

|

ಅವರ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳುತ್ತಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿರೋಧ ಪಕ್ಷದವರು ಆಡಳಿತ ಪಕ್ಷದ ತಪ್ಪನ್ನು ಸಾರ್ವಜನಿಕರ ಮುಂದೆ ಇಡುವುದನ್ನು ಬಿಟ್ಟು ತಮ್ಮೊಳಗೆಯೇ ಕಿತ್ತಾಡಿಕೊಳ್ಳುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ದ ಹೋರಾಡಲು ವಿರೋಧ ಪಕ್ಷಗಳಿಗೆ ಸಿಗುತ್ತಿರುವ ಆಹಾರ ಒಂದಾ, ಎರಡಾ? ಆದರೆ, ಅದರ ಬಗ್ಗೆ ಗಂಭೀರವಾಗಿ ಪ್ರಶ್ನಿಸದೇ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಜಗಳವಾಡಿ ಕೊಳ್ಳುತ್ತಿದ್ದಾರೆ. ಹೀಗಾಗುತ್ತಾ ಸಾಗಿದರೆ.. ಬಿಜೆಪಿ ಸೇಫ್..

ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಕೊನೆಗೂ ಮೌನಮುರಿದ ಜೆಡಿಎಸ್ ವರಿಷ್ಠ ದೇವೇಗೌಡರು!ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನದ ಕುರಿತು ಕೊನೆಗೂ ಮೌನಮುರಿದ ಜೆಡಿಎಸ್ ವರಿಷ್ಠ ದೇವೇಗೌಡರು!

ದಶಕಗಳ ಹಿಂದೆ ನಡೆದ ರಾಜಕೀಯ ವಿದ್ಯಮಾನವನ್ನು ಈಗ ಪ್ರಸ್ತುತ ಪಡಿಸುತ್ತಾ ಕೆಸೆರೆರೆಚಾಟದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪರೋಕ್ಷವಾಗಿ, ಬಿಜೆಪಿ ಸರಕಾರವನ್ನು ದಿನದಿಂದ ದಿನಕ್ಕೆ ಸುಭದ್ರಗೊಳಿಸುತ್ತಾ ಸಾಗುತ್ತಿದ್ದಾರೆ.

 ಖರ್ಗೆಗೆ ಸಿಎಂ ಹುದ್ದೆ ತಪ್ಪಿಸಿದ್ದು ಯಾರೆಂದು ಬಾಯಿಬಿಡಿ: ದೇವೇಗೌಡ್ರಿಗೆ ಸಿದ್ದರಾಮಯ್ಯ ಚಾಲೆಂಜ್! ಖರ್ಗೆಗೆ ಸಿಎಂ ಹುದ್ದೆ ತಪ್ಪಿಸಿದ್ದು ಯಾರೆಂದು ಬಾಯಿಬಿಡಿ: ದೇವೇಗೌಡ್ರಿಗೆ ಸಿದ್ದರಾಮಯ್ಯ ಚಾಲೆಂಜ್!

ಹಳೆಯ ಸಮಸ್ಯೆಗಳ ಹಿನ್ನೋಟವನ್ನು ತೆಗೆದುಕೊಂಡು ಈಗ ಏನಾಗಬೇಕಿದೆ ಎನ್ನುವುದರ ಅರಿವಿಲ್ಲದೇ, ಸದ್ಯವಿರುವ ಜ್ವಲಂತ ಸಮಸ್ಯೆ, ವೈಫಲ್ಯತೆಯ ಬಗ್ಗೆ ಜೋರಾಗಿ ಧ್ವನಿ ಎತ್ತದ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ರಾಜಕಾರಣ ಯಾಕೆ ಹೀಗೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಕಾಂಗ್ರೆಸ್ ಮತ್ತು ಜೆಡಿಎಸ್ ಎನ್ನುವುದಕ್ಕಿಂತ ಹೆಚ್ಚಾಗಿ, ದೇವೇಗೌಡ್ರ ಕುಟುಂಬ ಮತ್ತು ಸಿದ್ದರಾಮಯ್ಯ ನಡುವಿನ ವಾಕ್ಸಮರದ ಕೆಲವೊಂದು ಸ್ಯಾಂಪಲಿನ ಒಂದು ಝಲಕ್...

ಖರ್ಗೆ ಸಿಎಂ ಆಗಬೇಕಿತ್ತಂತೆ, ದೇವೇಗೌಡ್ರು ಅದೆಷ್ಟೋ ಬಾರಿ ಹೇಳಿದ್ದುಂಟು

ಖರ್ಗೆ ಸಿಎಂ ಆಗಬೇಕಿತ್ತಂತೆ, ದೇವೇಗೌಡ್ರು ಅದೆಷ್ಟೋ ಬಾರಿ ಹೇಳಿದ್ದುಂಟು

ಹಿಂದಿನ ರಾಜಕೀಯ ವಿದ್ಯಮಾನವೊಂದರಲ್ಲಿ ಖರ್ಗೆ ಸಿಎಂ ಆಗಬೇಕಿತ್ತಂತೆ. ಇದನ್ನು ತಪ್ಪಿಸಿದವರು ಸಿದ್ದರಾಮಯ್ಯನವರು ಎಂದು ಪರೋಕ್ಷವಾಗಿ ದೇವೇಗೌಡ್ರು ಅದೆಷ್ಟೋ ಬಾರಿ ಹೇಳಿದ್ದುಂಟು. ಈ ವಿಚಾರವನ್ನು ಮತ್ತೆ ಕೆದಕಿದ್ದಾರೆ. ಜೊತೆಗೆ, ಸಿದ್ದರಾಮಯ್ಯನವರ ಕೊಡುಗೆ ಜೆಡಿಎಸ್ಸಿಗೆ ಏನೂ ಇಲ್ಲ ಎಂದು ಹೇಳಿದ್ದರು.

ಇದಕ್ಕೆ ತನ್ನ ಎಂದಿನ ಶೈಲಿಯಲ್ಲಿ ಉತ್ತರಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, " "ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿದವರು ಕಾಂಗ್ರೆಸ್ ನವರೇ ಎಂದು ದೇವೇಗೌಡ್ರು ಹೇಳಿದ್ದಾರೆ. ಆ ವ್ಯಕ್ತಿ ನಾನಂತೂ ಅಲ್ಲ, ಅದು ಯಾರೆಂದು ಗೌಡ್ರೇ ಬಹಿರಂಗ ಪಡಿಸಲಿ. ಆರು ವರ್ಷದವರೆಗೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ ಅಲ್ವಾ, ಆ ಸಮಯದಲ್ಲಿ ರಾಜ್ಯ ಪ್ರವಾಸ ಮಾಡಿರಲಿಲ್ವಾ, ನನ್ನ ಶ್ರಮಕ್ಕೆ ಬೆಲೆಯಿಲ್ಲವೇ"ಎಂದು ಸಿದ್ದರಾಮಯ್ಯ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ವರ್ಸಸ್ ಕುಮಾರಸ್ವಾಮಿ

ಸಿದ್ದರಾಮಯ್ಯ ವರ್ಸಸ್ ಕುಮಾರಸ್ವಾಮಿ

ಎಚ್ಡಿಕೆ: "ನಿಮ್ಮ ಸಾಮರ್ಥ್ಯದಿಂದ ಮೊದಲು ಹತ್ತು ಸ್ಥಾನ ಗೆದ್ದು ತೋರಿಸಿ, ಬಳಿಕ ಜೆಡಿಎಸ್ ಬಗ್ಗೆ ಮಾತನಾಡಿ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌-ಬಿಜೆಪಿ ಒಳಒಪ್ಪಂದ ನಡೆಯಿತು. ಅದರಲ್ಲಿ ಕಾಂಗ್ರೆಸ್ಸಿಗರೂ ಸೇರಿದರು, ಬಾದಾಮಿಯಲ್ಲಿ ಗೆಲ್ಲದೇ ಹೋಗಿದ್ದರೆ ಭವಿಷ್ಯ ಕತ್ತಲಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೆ ಒಪ್ಪಂದವಾಗಿದ್ದರೆ, ಅದು ಬಾದಾಮಿಗೂ ಅನ್ವಯಿಸುತ್ತಿರಲಿಲ್ಲವೇ? ಬಾದಾಮಿಯಲ್ಲಿ ಅವರನ್ನು ಗೆಲ್ಲಲು ಬಿಡುತ್ತಿದ್ದೇವೆ".

ಸಿದ್ದರಾಮಯ್ಯ: "ಗೋಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗಲ್ಲ. ಜೆಡಿಎಸ್ ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿಕೊಂಡಿರಲಿಲ್ಲ. ನಿನ್ನೆ ನಾನು ಅದನ್ನೇ ಹೇಳಿದ್ದು".

ಶಿರಾದಲ್ಲಿ ಏನು ಮಾಡಿದ್ರಿ, ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಏನಾಯಿತು

ಶಿರಾದಲ್ಲಿ ಏನು ಮಾಡಿದ್ರಿ, ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಏನಾಯಿತು

ಸಿದ್ದರಾಮಯ್ಯ: "ಜೆಡಿಎಸ್ ಅನ್ನೋ ಪಕ್ಷ ಒಳ ಒಪ್ಪಂದದ ಪಿತಾಮಹ, ಅದು ಮುಳುಗಿ ಹೋಗುತ್ತಿರುವ ಪಕ್ಷ. ಕುಮಾರಸ್ವಾಮಿ ಆಡೋ ಎಲ್ಲಾ ಮಾತಿಗೆ ಉತ್ತರ ಕೊಡಲು ನನಗೆ ಇಚ್ಚೆಯಿಲ್ಲ. ತಮಗೆ ಬೇಕಾದ ಹಾಗೇ ಬಣ್ಣ ಬದಲಾಯಿಸಿಕೊಳ್ಳುವ ಕುಮಾರಸ್ವಾಮಿ ಬಗ್ಗೆ ಜೆಡಿಎಸ್ ಮುಖಂಡರಿಗೂ ಬೇಸರವಿದೆ.

ಎಚ್ಡಿಕೆ: "ಒಳ ಒಪ್ಪಂದದ ಪಿತಾಮಹ ಅನ್ನೋದು ಸಿದ್ದರಾಮಯ್ಯನವರಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಕೊರಟಗೆರೆಯಲ್ಲಿ ಯಾರ ಜೊತೆ ಒಪ್ಪಂದ ಮಾಡಿಕೊಂಡ್ರಿ, ಮೊನ್ನೆ ಶಿರಾದಲ್ಲಿ ಏನು ಮಾಡಿದ್ರಿ, ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಏನಾಯಿತು ಎನ್ನುವುದು ಗೊತ್ತಿಲ್ಲದ ವಿಚಾರವಲ್ಲ".

  ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada
  ಗುರು ಶಿಷ್ಯರ ಮಾತಿನ ಮಲ್ಲಯುದ್ದ: ಸೈಲೆಂಟ್ ಆಗಿ ಮುಸಿಮುಸಿ ನಗುತ್ತಿರುವ ಬಿಜೆಪಿ

  ಗುರು ಶಿಷ್ಯರ ಮಾತಿನ ಮಲ್ಲಯುದ್ದ: ಸೈಲೆಂಟ್ ಆಗಿ ಮುಸಿಮುಸಿ ನಗುತ್ತಿರುವ ಬಿಜೆಪಿ

  ಸಿದ್ದರಾಮಯ್ಯ: "ಅಪ್ಪ ಅಣ್ಣ (ದೇವೇಗೌಡ್ರು, ರೇವಣ್ಣ) ರೈತರ ಪರ, ಕುಮಾರಸ್ವಾಮಿ ಮಾತ್ರ ಬಿಜೆಪಿ ಸರಕಾರದ ಪರ. ಅವರಿಗೆ ನಾಚಿಕೆಯಾಗಬೇಕು. ಕೃಷಿಭೂಮಿಯನ್ನು ಕೃಷಿ ಚಟುವಟಿಕೆಗಾಗಿಯೇ ಬಳಸಬೇಕು ಎನ್ನುವ ಕಾನೂನು ಇದೆ. ಆದರೆ, ಈಗಿನ ತಿದ್ದುಪಡಿಗೆ ನೀವು ಬೆಂಬಲಿಸುತ್ತಿದ್ದೀರಲ್ಲಾ, ನಿಮಗೆ ಇದು ಸರಿ ಅನಿಸುತ್ತದೆಯೇ ಕುಮಾರಸ್ವಾಮಿಯವರೇ?".

  ಎಚ್ಡಿಕೆ: "ನಾನು ರೈತರ ಪರನೋ, ಇಲ್ಲವೋ ಎನ್ನುವುದಕ್ಕೆ ನಿಮ್ಮಿಂದ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ನಾನು ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದಾಗ, ರೈತರ ಸಾಲಮನ್ನಾಗೆ ಮುಂದಾದವರು ಯಾರು, ಅದು ಜಾರಿಯಾಗದಂತೇ ಪ್ರಯತ್ನ ಪಟ್ಟವರು ಯಾರು. ಢೋಂಗಿತನ ಬಿಡಿ".

  English summary
  BJP Is Getting Advantage Sine Opposition Leaders Not United, War Of Words Between JDS And Congress.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X