• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮುಖ್ಯಮಂತ್ರಿ' ಯಡಿಯೂರಪ್ಪ ಬದಲಾವಣೆ: 51 ಬಿಜೆಪಿ ಶಾಸಕರಿಂದ ಸ್ಪೋಟಕ ಅಭಿಪ್ರಾಯ!

|
Google Oneindia Kannada News

ಬೆಂಗಳೂರು, ಜೂ. 17: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಬೇಕು ಎಂಬ ಒತ್ತಡಗಳು ತೀವ್ರವಾದ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಹೈಕಮಾಂಡ್ ಸೂಚನೆಯಂತೆ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡುತ್ತಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.

ನಿನ್ನೆ (ಜೂ.16) ಸಿಎಂ ಯಡಿಯೂರಪ್ಪ ಅವರ ಸಂಪುಟದ ಸಚಿವರ ಅಭಿಪ್ರಾಯ ಸಂಗ್ರಹಿಸಿದ್ದ ಅರುಣ್ ಸಿಂಗ್ ಇವತ್ತು (ಜೂ. 17) ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅರಮನೆ ರಸ್ತೆಯ ಕುಮಾರಕೃಪಾ ಅತಿಥಿಗೃಹದಲ್ಲಿಯೇ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದ ಅರುಣ್ ಸಿಂಗ್ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ್ದರು. ಇಡೀ ದಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿದ್ದ ಅರುಣ್ ಸಿಂಗ್ ಅವರು ಒಟ್ಟು 51 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂಬ ಮಾಹಿತಿಯಿದೆ.

ಕರ್ನಾಟಕ ರಾಜಕೀಯ: ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣಕ್ಕೆ ಎಚ್ಚರಿಕೆ ಗಂಟೆ!?ಕರ್ನಾಟಕ ರಾಜಕೀಯ: ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣಕ್ಕೆ ಎಚ್ಚರಿಕೆ ಗಂಟೆ!?

ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರ ಸಂಪೂರ್ಣ ವಿವರ ಇಲ್ಲಿದೆ. ಜೊತೆಗೆ ಈ ಬಗ್ಗೆ ಅರುಣ್ ಸಿಂಗ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ!

ಅಭಿಪ್ರಾಯ ತಿಳಿಸಿದ 51 ಶಾಸಕರು

ಅಭಿಪ್ರಾಯ ತಿಳಿಸಿದ 51 ಶಾಸಕರು

ರಾಜ್ಯಕ್ಕೆ ಮೂರು ದಿನಗಳ ಪ್ರವಾಸ ಬಂದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು 51 ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ಬಿಜೆಪಿಯ 51 ಶಾಸಕರ ವಿವರ ಹೀಗಿದೆ.

1. ಪಿ ರಾಜೀವ್ - ಕುಡಚಿ ಶಾಸಕ

2. ವಿರೂಪಾಕ್ಷಪ್ಪ - ಬಳ್ಳಾರಿ ಶಾಸಕ

3. ಎಚ್ ವಿಶ್ವನಾಥ್ - MLC

4. ಉಮೇಶ್ ಕತ್ತಿ - ಸಚಿವ, ಹುಕ್ಕೇರಿ

5. ಶಶಿಕಲಾ ಜೊಲ್ಲೆ - ಸಚಿವೆ - ನಿಪ್ಪಾಣಿ

6. ಕೋಟಾ ಶ್ರೀನಿವಾಸ್ ಪೂಜಾರಿ - ಸಚಿವ - MLC

7. ‎ಎಂ. ಕೃಷ್ಣಪ್ಪ - ಬೆಂ. ದಕ್ಷಿಣ ಶಾಸಕ

8. ‎ಮುನಿರತ್ನ, ಆರ್.ಆರ್ ನಗರ ಶಾಸಕ

9. ರೂಪಾಲಿ ನಾಯ್ಕ - ಕಾರವಾರ ಶಾಸಕಿ

10. ‎ಹರೀಶ್ ಪೂಂಜಾ - ಬೆಳ್ತಂಗಡಿ ಶಾಸಕ

11. ‎ರಘುಪತಿ ಭಟ್ - ಉಡುಪಿ ಶಾಸಕ

12. ‎ಸಿ ಪಿ ಯೋಗೇಶ್ವರ್ - ಸಚಿವ - MLC

13. ‎ರಾಮಚಂದ್ರಪ್ಪ, ಜಗಳೂರು ಶಾಸಕ

14. ‎ಶ್ರೀರಾಮುಲು - ಮೊಳಕಾಲ್ಮೂರು ಶಾಸಕ (ಸಚಿವ)

15. ‎ಸೋಮನಗೌಡ ಪಾಟೀಲ್ - ದೇವರ ಹಿಪ್ಪರಗಿ

16. ‎ಹಾಲಪ್ಪ ಆಚಾರ್ಯ - ಯಲಬುರ್ಗಾ ಶಾಸಕ

17. ‎ವೆಂಕಟ ರೆಡ್ಡಿ ಮುದ್ನಾಳ್ - ಯಾದಗಿರಿ ಶಾಸಕ

18. ‎ಎ. ಎಸ್. ಪಾಟೀಲ್ ನಡಹಳ್ಳಿ - ಮುದ್ದೇಬಿಹಾಳ ಶಾಸಕ

19. ‎ದೊಡ್ಡನಗೌಡ ಪಾಟೀಲ್ - ಹುನಗುಂದ ಶಾಸಕ

20. ‎ಮಾಡಾಳ್ ವಿರೂಪಾಕ್ಷಪ್ಪ - ಚನ್ನಗಿರಿ ಶಾಸಕ

21. ‎ಪರಣ್ಣ ಮುನವಳ್ಳಿ - ಗಂಗಾವತಿ ಶಾಸಕ

22. ‎ಬಸವರಾಜ ದಡೆಸಗೂರು - ಕನಕಗಿರಿ ಶಾಸಕ

23. ‎ಶಿವರಾಜ್ ಪಾಟೀಲ್ - ರಾಯಚೂರು ನಗರ ಶಾಸಕ

24. ‎ಮಸಾಲೆ ಜಯರಾಂ - ತುರುವೇಕೆರೆ ಶಾಸಕ

25. ‎ಡಾ. ರಾಜೇಶ್ ಗೌಡ - ಶಿರಾ ಶಾಸಕ

26. ‎ರವಿ ಸುಬ್ರಹ್ಮಣ್ಯ - ಬಸವನಗುಡಿ ಶಾಸಕ

27. ‎ತಿಪ್ಪಾರೆಡ್ಡಿ - ಚಿತ್ರದುರ್ಗ ಶಾಸಕ

28. ‎ಸೋಮಲಿಂಗಪ್ಪ - ಸಿರಗುಪ್ಪ ಶಾಸಕ

29. ‎ರಾಜ್ ಕುಮಾರ್ ತೇಲ್ಕರ್ - ಸೇಡಂ ಶಾಸಕ

30. ‎ಗೂಳಿಹಟ್ಟಿ ಶೇಖರ್ - ಹೊಸದುರ್ಗ ಶಾಸಕ

31. ‎ಪೂರ್ಣಿಮಾ ಶ್ರೀನಿವಾಸ್ - ಹಿರಿಯೂರು ಶಾಸಕಿ

32. ‎ಅರುಣ್ ಕುಮಾರ್ ಪೂಜಾರ್-ರಾಣೆಬೆನ್ನೂರು ಶಾಸಕ

33. ‎ಕುಮಾರ್ ಬಂಗಾರಪ್ಪ - ಸೊರಬ ಶಾಸಕ


34. ‎ಅಭಯ್ ಪಾಟೀಲ್ - ಬೆಳಗಾವಿ ದಕ್ಷಿಣ ಶಾಸಕ

35. ‎ನೆಹರು ಓಲೇಕಾರ್ - ಹಾವೇರಿ ಶಾಸಕ

36. ‎ಎಂ.ಪಿ. ರೇಣುಕಾಚಾರ್ಯ - ಹೊನ್ನಾಳಿ ಶಾಸಕ

37. ‎ಲಿಂಗಣ್ಣ - ಮಾಯಕೊಂಡ ಶಾಸಕ

38. ‎ದಿನಕರ್ ಶೆಟ್ಟಿ - ಕುಮಟಾ ಶಾಸಕ

39. ‎ಶರಣು ಸಲಗಾರ - ಬಸವಕಲ್ಯಾಣ ಶಾಸಕ

40. ‎ಸುಭಾಷ್ ಗುತ್ತೇದಾರ್ - ಆಳಂದ ಶಾಸಕ

41. ‎ರಾಜೂ ಗೌಡ - ಸುರಪುರ ಶಾಸಕ


42. ‎ಮಹೇಶ್ ಕುಮಟಳ್ಳಿ - ಅಥಣಿ ಶಾಸಕ

43. ಬೆಳ್ಳಿ ಪ್ರಕಾಶ್-ಕಡೂರು ಶಾಸಕ

44. ಪ್ರೀತಂಗೌಡ- ಹಾಸನ ಶಾಸಕ

45. ಶಂಕರ ಪಾಟೀಲ ಮುನೇನಕೊಪ್ಪ- ನವಲಗುಂದ ಶಾಸಕ

46. ಉದಯ ಗರುಡಾಚಾರ್- ಚಿಕ್ಕಪೇಟೆ ಶಾಸಕ

47. ಜ್ಯೋತಿ ಗಣೇಶ್- ತುಮಕೂರು ನಗರ ಶಾಸಕ

48. ಹರತಾಳು ಹಾಲಪ್ಪ- ಸಾಗರ ಶಾಸಕ

49. ಎಂ.ಪಿ. ಕುಮಾರಸ್ವಾಮಿ - ಮೂಡಿಗೆರೆ

50. ಅಶೋಕ್ ನಾಯಕ್- ಶಿವಮೊಗ್ಗ ಗ್ರಾಮಾಂತರ

51. ಸಿದ್ದು ಸವದಿ - ತೇರದಾಳ

ಅಭಿಪ್ರಾಯ ಸಂಗ್ರಹಿಸಿಲ್ಲ: ಅರುಣ್ ಸಿಂಗ್!

ಅಭಿಪ್ರಾಯ ಸಂಗ್ರಹಿಸಿಲ್ಲ: ಅರುಣ್ ಸಿಂಗ್!

ಇಡೀ ದಿನ 51 ಶಾಸಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದರೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅದನ್ನು ಅಲ್ಲಗಳೆದಿದ್ದಾರೆ. ಇಂದು (ಜೂ.17) ಸಂಜೆ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾಯಕತ್ವ ‌ಬದಲಾವಣೆ ಚರ್ಚೆಯನ್ನು ಮಾಡಿಲ್ಲ. ಚರ್ಚೆ ‌ಮಾಡುವುದಾಗಿದ್ದರೆ ಎಲ್ಲರನ್ನೂ ಆಹ್ವಾನಿಸುತ್ತಿದ್ದೇವು. ಆದರೆ ಕೇವಲ ಭೇಟಿಗೆ ‌ಬಂದವರೊಂದಿಗೆ ಮಾತ್ರ ಮಾತನಾಡಿದ್ದೇನೆ. ಇಬ್ಬರು, ಮೂವರು ಪಕ್ಷದ ಬಗ್ಗೆ ‌ಮಾತನಾಡುತ್ತಿದ್ದಾರೆ. ಅದು ನಮ್ಮ ‌ಗಮನಕ್ಕೆ ಬಂದಿದೆ. ಅವರಿಗೆ ಈಗಾಗಲೇ ಎಚ್ಚರಿಕೆಯನ್ನೂ ನೀಡಿದ್ದೇವೆ" ಎಂದಿದ್ದಾರೆ. ಆದರೆ ಅಭಿಪ್ರಾಯ ಮಂಡಿಸಿದ್ದೇನೆ ಎಂದಿದ್ದ ಎಚ್. ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಅರುಣ್ ಸಿಂಗ್ ಹೀಗೆ ಹೇಳಿದ್ದಾರೆ.

'ಯಡಿಯೂರಪ್ಪ ಬದಲಾವಣೆ ಬೇಡಿಕೆ': ಅರುಣ್ ಸಿಂಗ್‌ಗೆ ಎಚ್ ವಿಶ್ವನಾಥ್ ಹೇಳಿದ್ದೇನು?'ಯಡಿಯೂರಪ್ಪ ಬದಲಾವಣೆ ಬೇಡಿಕೆ': ಅರುಣ್ ಸಿಂಗ್‌ಗೆ ಎಚ್ ವಿಶ್ವನಾಥ್ ಹೇಳಿದ್ದೇನು?

ಎಚ್ ವಿಶ್ವನಾಥ್ ಹೊರಗಡೆಯಿಂದ ಬಂದವರು!

ಎಚ್ ವಿಶ್ವನಾಥ್ ಹೊರಗಡೆಯಿಂದ ಬಂದವರು!

"ನಾಯಕತ್ವ ಬದಲಾವಣೆ ಕುರಿತು ಅರುಣ್ ಸಿಂಗ್ ಅವರಿಗೆ ಹೇಳಿದ್ದೇನೆ" ಎಂದಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಕುರಿತು ಅರುಣ್ ಸಿಂಗ್ ಗರಂ ಆಗಿದ್ದಾರೆ. "ವಿಶ್ವನಾಥ್ ಅವರಿಗೆ ನಮ್ಮ ಪಕ್ಷದ ಸಿದ್ದಾಂತ ಗೊತ್ತಿಲ್ಲ. ಸಾವಿರಾರು ಕಾರ್ಯಕರ್ತರ ಶ್ರಮದಿಂದ ಅಧಿಕಾರಕ್ಕೆ ಬಂದಿದ್ದೇವೆ. ಅವರಿಗೆ ನಮ್ಮ ಸಿದ್ದಾಂತ ಅರ್ಥ ಮಾಡಿಸುತ್ತೇವೆ. ಹೊರಗಡೆಯಿಂದ ಬಂದು ಈ ತರಹ ಮಾತನಾಡಬಾರದು" ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಎಚ್ಚರಿಕೆ ರವಾನಿಸಿದ್ದಾರೆ.

17 ಜನರ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಇದೀಗ ಉಸ್ತುವಾರಿ ಅರುಣ್ ಸಿಂಗ್ ಅವರೂ ಅದೇ ರೀತಿ ಮಾತನಾಡಿರುವುದು ಬಿಜೆಪಿಯಲ್ಲಿ ಮತ್ತೊಂದು ಹಂತದ ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆಯೂ ಇದೆ.

  ಜೆಡಿಎಸ್ ನಂತೆಯೇ ರಾಕ್ಷಸ ಕುಟುಂಬ ರಾಜಕಾರಣ ಬಿಜೆಪಿಯಲ್ಲೂ ಇದೆ | Oneindia Kannada
  ಶಾಸಕರ ಸ್ಪೋಟಕ ಅಭಿಪ್ರಾಯ ಸಂಗ್ರಹ!

  ಶಾಸಕರ ಸ್ಪೋಟಕ ಅಭಿಪ್ರಾಯ ಸಂಗ್ರಹ!

  ಬಿಜೆಪಿಯ ಅರ್ಧಕ್ಕಿಂತ ಹೆಚ್ಚು ಶಾಸಕರಿಂದ ನಾಯಕತ್ವದ ಬಗ್ಗೆ ಅಭಿಪ್ರಾಯವನ್ನು ಅರುಣ್ ಸಿಂಗ್ ಸಂಗ್ರಹಿಸಿದ್ದಾರೆ ಎಂಬ ಮಾಹಿತಿಯಿದೆ. ಜೊತೆಗೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು "ನಾಯಕತ್ವ ಬದಲಾವಣೆ ಆಗಬೇಕು ಎಂದು ಅಭಿಪ್ರಾಯ ತಿಳಿಸಿದ್ದೇನೆ" ಎಂದಿದ್ದಾರೆ. ಆದರೂ ಅರುಣ್ ಸಿಂಗ್ ಅವರು ಮಾತ್ರ, "ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ" ಎಂದಿದ್ದಾರೆ.

  ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಪಕ್ಷದ ಹೈಕಮಾಂಡ್‌ಗೆ ಅವರು ವರದಿ ಕೊಡಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಈಗಲೇ ಯಾವುದೇ ವಿಚಾರವನ್ನು ಅರುಣ್ ಸಿಂಗ್ ಅವರು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗುತ್ತಿದೆ.

  ಬಿ.ಎಸ್. ಯಡಿಯೂರಪ್ಪ
  Know all about
  ಬಿ.ಎಸ್. ಯಡಿಯೂರಪ್ಪ
  English summary
  Karnataka Bjp Incharge Arun Singh has sought opinion from 51 BJP MLAs on B.S. Yediyurappa change from Chief Miister Post.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X