ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ ಪರಮಾಧಿಕಾರ ಸಿಎಂಗೆ ಬಿಟ್ಟಿದ್ದೇವೆ: ಅರುಣ್ ಸಿಂಗ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ. 14: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಕಾಲದಲ್ಲಿ ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ. ಈ ಮೂಲಕ ಸಂಪುಟ ಪುನಾರಚನೆ ಪರಮಾಧಿಕಾರವನ್ನು ಸಿಎಂ ಅವರಿಗೆ ಬಿಟ್ಟಿದ್ದೇವೆ ಎಂಬ ಸಂಗತಿಯನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅರುಣ್ ಸಿಂಗ್, ಸಂಪುಟ ಪುನಾರಚನೆಯು ಮುಖ್ಯಮಂತ್ರಿಯ ಪರಮಾಧಿಕಾರ ಎಂದೂ ಅವರು ನಗುತ್ತ ನುಡಿದರು.

Karnataka BJP in charge Arun Singh clarification about Cabinet expansion

ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯತ್ವಕ್ಕೆ ಸ್ಪರ್ಧಿಸಲು ಬಯಸುವವರ ಪಟ್ಟಿಯನ್ನು ರಾಜ್ಯ ಕೋರ್ ಕಮಿಟಿ ಮತ್ತು ರಾಜ್ಯ ಚುನಾವಣಾ ಸಮಿತಿಯು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡುತ್ತದೆ. ಕೇಂದ್ರ ಸಂಸದೀಯ ಮಂಡಳಿಯು ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯತ್ವಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

Karnataka BJP in charge Arun Singh clarification about Cabinet expansion

ಅರುಣ್ ಸಿಂಗ್ ಸಚಿವರಿಗೆ ಪಾಠ:

ರಾಜ್ಯದಲ್ಲಿ ಯಾವುದೇ ಬೆಳವಣಿಗೆ ಆದರೂ ಸಚಿವರು ಮೌನ ವಹಿಸುವುದು ಸರಿಯಲ್ಲ. ಪ್ರತಿಯೊಬ್ಬ ಸಚಿವ ಬಿಜೆಪಿ ಕಚೇರಿಗೆ ಬಂದು ಹೋಗು ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ಏನೇ ವಿಚಾರ ಬಂದರೂ ಎಲ್ಲಾ ಸಚಿವರು ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು. ಪಕ್ಷದ ವರ್ಚಸ್ಸು ಹೆಚ್ಚಿಸಬೇಕು. ಮುಖ್ಯಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳಬೇಕು. ಆದ್ರೆ, ರಾಜ್ಯದಲ್ಲಿ ಈ ವಾತಾವರಣ ಕಾಣುತ್ತಿಲ್ಲ. ಸಚಿವರು ತಾವಾಯಿತು, ತಮ್ಮ ಸಚಿವ ಸ್ಥಾನ ಆಯಿತು ಎಂಬಂತೆ ನಡೆದುಕೊಳ್ಳುವುದು ಸರಿಯಲ್ಲ. ತಮ್ಮ ಹಾದಿ ಬದಲಿಸಿಕೊಂಡು ಬಿಜೆಪಿ ಪಕ್ಷ ಮತ್ತು ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳಬೇಕು ಎಂದು ಅರುಣ್ ಸಿಂಗ್ ಸಚಿವರಿಗೆ ಪಾಠ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Recommended Video

ಜನತೆ ಜೊತೆ ಕಾಂಗ್ರೆಸ್ ಕೊಂಡಿ ಕಳಚಿದೆ ಎಂದು ಒಪ್ಪಿಕೊಂಡ ರಾಹುಲ್ ಗಾಂಧಿ | Oneindia Kannada

English summary
BJP In charge Arun Singh says that cabinet expansion Sovereignty given to chief minister know more ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X