ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಗೆಲ್ಲಲು ರಾಜ್ಯದಲ್ಲಿ ಬಿಜೆಪಿ ದ್ವೇಷ ಹರಡುತ್ತಿದೆ: ಗುಂಡೂರಾವ್

By Sachhidananda Acharya
|
Google Oneindia Kannada News

ಹೈದರಾಬಾದ್, ಜನವರಿ 18: ಕರ್ನಾಟಕದಲ್ಲಿ ಚುನಾವಣೆ ಎದುರಿಸಲು ಬಿಜೆಪಿಗೆ ವಿಷಯಗಳೇ ಸಿಗುತ್ತಿಲ್ಲ. ಈ ಕಾರಣಕ್ಕೆ ದ್ವೇಷ ಹರಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಾಂಗ್ರೆಸ್ ಗೆ ಅಧಿಕಾರ ಕಳೆದುಕೊಳ್ಳುವ ಭಯ ಹುಟ್ಟಿದೆ ಎಂದು ತಿರುಗೇಟು ನೀಡಿದೆ.
.
"ಕರ್ನಾಟಕದಲ್ಲಿ ನಾವು ಗೆಲ್ಲುವುದು ನಿಚ್ಚಳವಾಗಿದೆ. ಬಿಜೆಪಿ ಇದರಿಂದ ಹತಾಷವಾಗಿದೆ. ಹೀಗಾಗಿ ನೀವು ಬಿಜೆಪಿ ಕರ್ನಾಟಕದಲ್ಲಿ ಹರಡುತ್ತಿರುವ ದ್ವೇಷದ ಅಜೆಂಡಾವನ್ನು ಕಾಣಬಹುದು," ಎಂದು ಅವರು ಇಂಡಿಯಾ ಟುಡೇ ಸೌತ್ ಕಾನ್ಕ್ಲೇವ್ ನಲ್ಲಿ ಹೇಳಿದ್ದಾರೆ.

BJP imposing hate agenda in Karnataka to win polls: Cong

"ಬಿಜೆಪಿಯವರು ಹತಾಷರಾಗಿದ್ದಾರೆ. ಅವರಿಗೆ ವಿಷಯಗಳೇ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಏನು ಮಾಡಬೇಕು ಎಂದು ಅವರಿಗೆ ತಿಳಿಯುತ್ತಿಲ್ಲ. ನಮ್ಮ ಕೆಲಸ, ಅಭಿವೃದ್ಧಿ, ಕಾರ್ಯಕ್ರಮದ ವಿಚಾರದಲ್ಲಿ ಅವರಿಗೆ ನಮ್ಮನ್ನು ಎದುರಿಸಲಾಗುತ್ತಿಲ್ಲ," ಎಂದು ಬಿಜೆಪಿ ವಿರುದ್ಧ ನೇರ ಪ್ರಹಾರ ಮಾಡಿದ್ದಾರೆ,.
.
ಬಿಜೆಪಿಯ ಏಕೈಕ ಅಸ್ತ್ರವೆಂದರೆ ದ್ವೇಷದ ಅಜೆಂಡಾ ಎಂದು ಆರೋಪಿಸಿರುವ ರಾವ್, "ಮೂಲಭೂತವಾದಿ ಹಿಂದುತ್ವವನ್ನು" ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಯೋಗಿಸುತ್ತಿದ್ದಾರೆ ಎಂದು ದೂರಿದ್ದಾರೆ. "ಅವರು ಈಗ ಹೋಗುತ್ತಿರುವ ಮಿತಿಗಳು ತುಂಬಾ ತೀವ್ರವಾಗಿದೆ "ಎಂದೂ ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನಾವು ಕರ್ನಾಟಕದಲ್ಲಿ ಗೆಲ್ಲಲಿದ್ದೇವೆ. ಹೀಗಾಗಿ ದಿನೇಶ್ ಗುಂಡೂರಾವ್ ಆತಂಕಗೊಂಡಿದ್ದಾರೆ. ಅದಕ್ಕಾಗಿ ಅವರು ಬಿಜೆಪಿಯನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿದ್ದಾರೆ.." ಎಂದು ಪ್ರತ್ಯುತ್ತರ ನೀಡಿದರು.

ಇದೇ ವೇಳೆ ಎಐಎಂಐಎಂನ ಅಸಾದುದ್ದೀನ್ ಓವೈಸಿ ತಮಗೆ ಕರ್ನಾಟಕದಲ್ಲಿ ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. "ಕಾಂಗ್ರೆಸ್ ನ ದ್ವಂದ್ವ ನೀತಿಯನ್ನು ಗಮನಿಸಿ. ಅವರ ಅಧ್ಯಕ್ಷರು (ರಾಹುಲ್ ಗಾಂಧಿ) ಪ್ರೀತಿಯಿಂದ ನಾವು ನಮ್ಮ ಎದುರಾಳಿಗಳನ್ನು ಸೋಲಿಸುತ್ತೇವೆ ಎನ್ನುತ್ತಾರೆ. ಕರ್ನಾಟಕಕ್ಕೆ ಬರಲು ನನಗೆ ಅವಕಾಶ ನೀಡಿ," ಎಂದು ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾವ್, "ಕರ್ನಾಟಕಕ್ಕೆ ಯಾರೇ ಬರುವುದಕ್ಕೂ ನಮಗೆ ಆಕ್ಷೇಪವಿಲ್ಲ. ಆದರೆ ದ್ವೇಷದ ಭಾಷಣವನ್ನು ಮಾತ್ರ ಮಾಡಬಾರದು ಅಷ್ಟೇ," ಎಂದಿದ್ದಾರೆ.

English summary
The Congress today alleged the BJP was playing a "hate card" in poll-bound Karnataka as the saffron party is "bereft" of issues. Countering the charge, the BJP said the Congress was worried about the party in the southern state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X