ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ:ಕರುನಾಡ ಮಹಿಳಾ ಜಾಗೃತಿ ಸಂವಾದ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಕರುನಾಡ ಮಹಿಳಾ ಜಾಗೃತಿ ಸಂವಾದವನ್ನು ಏಪ್ರಿಲ್ 28 ರಂದು ರಾಜ್ಯದ ನಾನಾಕಡೆ ಆಯೋಜಿಸಿದೆ. ರಾಜ್ಯದ ಮಹಿಳಾ ಮತದಾರರನ್ನು ತಲುಪುವ ಉದ್ದೇಶದಿಂದ ಈ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಏ.28ರಂದು ಬೆಂಗಳೂರಿನಲ್ಲಿ ಸಂಜೆ 5 ರಿಂದ 7 ರವರೆಗೆ ನಡೆಯುವ ಸಂವಾದದಲ್ಲಿ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಪಾಲ್ಗೊಳ್ಳುವರು. ಅದೇ ದಿನ ಮಧ್ಯಾಹ್ನ 3 ರಿಂದ 5 ರವರೆಗೆ ಬೆಳಗಾವಿಯಲ್ಲಿ ನಡೆಯುವ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸುವರು.

ಮತ್ತೆ ಬರ್ತಿದ್ದಾರೆ ಅಮಿತ್ ಶಾ, ಈ ಬಾರಿ ಯಾವ ಮಠಗಳಿಗೆ ಭೇಟಿ ಕೊಡ್ತಾರೆ?ಮತ್ತೆ ಬರ್ತಿದ್ದಾರೆ ಅಮಿತ್ ಶಾ, ಈ ಬಾರಿ ಯಾವ ಮಠಗಳಿಗೆ ಭೇಟಿ ಕೊಡ್ತಾರೆ?

ಮಂಗಳೂರಿನಲ್ಲಿ ಮಧ್ಯಾಹ್ನ 3 ರಿಂದ 5 ರವರೆಗೆ ನಡೆಯುವ ಸಂವಾದದಲ್ಲಿ ಮೀನಾಕ್ಷಿ ಲೇಖಿ, ಬೀದರ್ ನಲ್ಲಿ ಸಂಸದೆ ಪಂಕಜಾ ಮುಂಡೆ, ಕಲಬುರಗಿಯಲ್ಲಿ ಸಾಧ್ವಿ ನಿರಂಜನ ಜ್ಯೋತಿ, ರಾಯಚೂರಿನಲ್ಲಿ ಡಿ.ಪುರಂದೇಶ್ವರಿ ಪಾಲ್ಗೊಳ್ಳುವರು.

Bjp holds women awareness talks in major districts

ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಅಂಗವಾಗಿ ಬಿಜೆಪಿ ಘಟಕವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ನಾಗರಿಕರ ಮತವನ್ನು ಬಿಜೆಪಿಯತ್ತ ಸೆಳೆಯಲು ಹರಸಾಹಸ ಪಡುತ್ತಿವೆ. ಅದರ ಒಂದು ಭಾಗವಾಗಿ ಕರುನಾಡ ಮಹಿಳಾ ಜಾಗೃತಿ ಸಂವಾದವನ್ನು ಅಯೋಜಿಸಿದೆ.

English summary
Karnataka Bjp is holding Karunada Mahila Jagruti Samvada on April 28 at many places including Bangalore. Union minister Nirmala Sitharaman, Smriti Irani and other senior leaders will take part in this talk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X