ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದೆ: ಎಚ್‌ಡಿಕೆ

|
Google Oneindia Kannada News

ಹೈದರಾಬಾದ್, ಮೇ 18: ಕಾಂಗ್ರೆಸ್-ಜೆಡಿಎಸ್ ತೆಕ್ಕೆಯಲ್ಲಿದ್ದ ಇಬ್ಬರು ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬಹುತೇಕ ಶಾಸಕರು ಹೈದರಾಬಾದ್‌ನಲ್ಲಿದ್ದಾರೆ ಆದರೂ ಬಿಜೆಪಿಯು ಇಬ್ಬರು ಶಾಸಕರನ್ನು ಸಂಪರ್ಕಕ್ಕೆ ಪಡೆದು ತಮ್ಮ ಕಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನು ಕುಮಾರಸ್ವಾಮಿ ನಾವರೇ ಒಪ್ಪಿಸಿಕೊಂಡಿದ್ದಾರೆ.

BJP high jacked two MLAs from JDS Kumaraswamy

ಹೈದರಾಬಾದ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಆ ಇಬ್ಬರೂ ಶಾಸಕರು ಜೆಡಿಎಸ್‌ಗೆ ಮರಳುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?

ರಾಣೆಬೆನ್ನೂರು ಕ್ಷೇತ್ರದಲ್ಲಿ ಗೆದ್ದಿರುವ ಕೆಪಿಜೆಪಿ ಪಕ್ಷದ ಆರ್.ಶಂಕರ್‌ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ಬಿಜೆಪಿ ತೆಕ್ಕೆಗೆ ಬಿದ್ದಿರುವ ಮತ್ತೊಬ್ಬ ಶಾಸಕ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.

ಇದೀಗ ನಾಳೆ ಅಧಿವೇಶನ ನಡೆಯುವ ಕಾರಣ ಹೈದರಾಬಾದ್‌ನಲ್ಲಿ ಬಿಡು ಬಿಟ್ಟಿರುವ ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರು ಇಂದು ಅಲ್ಲಿಂದ ಹೊರಟು ಬೆಳಿಗ್ಗೆ ವೇಳೆಗೆ ಬೆಂಗಳೂರು ತಲುಪಿ, ಅಧಿವೇಶನದಲ್ಲಿ ಪಾಲ್ಗೊಂಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ: ಪರಮೇಶ್ವರ್‌ ಬದಲಿಸಿ ಸಿದ್ದರಾಮಯ್ಯಗೆ ಮಣೆಶಾಸಕಾಂಗ ಪಕ್ಷದ ನಾಯಕ: ಪರಮೇಶ್ವರ್‌ ಬದಲಿಸಿ ಸಿದ್ದರಾಮಯ್ಯಗೆ ಮಣೆ

ಬಹುಮತ ಸಾಬೀತು ಪಡಿಸಲು ಎಂಟು ಮತಗಳ ಅವಶ್ಯಕತೆ ಬಿಜೆಪಿಗಿದ್ದು, ಈಗ ಇಬ್ಬರನ್ನು ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿಗೆ ಇನ್ನುಳಿದಿರುವುದು 6 ಮತಗಳು ಮಾತ್ರ. ಅದನ್ನು ನಾಳೆ ಸಂಜೆ ಒಳಗೆ ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.

English summary
DS state president Kumaraswamy said BJP has benn high jacked two mlas. He also said that 'i hope those two mla's will back to the party'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X